ಗದಗ : ಜುಲೈ 11: 2025- 26ನೇ ಸಾಲಿಗೆ ಶಿರಹಟ್ಟಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಮಹರ್ಷಿ ಶ್ರೀ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ, ನವೇಭಾವನೂರ ಇಲ್ಲಿಗೆ 7ನೇ ತರಗತಿಯಲ್ಲಿ ಖಾಲಿ ಇರುವ ಸ್ಥಾನಗಳಿಗೆ ಅರ್ಹ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದ, ಇತರೇ ಹಿಂದುಳಿದ ವರ್ಗಗಳ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಂದ ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಪ್ರವೇಶ ಬಯಸುವ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಕಛೇರಿ ಸಮಯದಲ್ಲಿ ಕಾರ್ಯಾಲಯದಿಂದ / ವಸತಿ ಶಾಲೆಯಿಂದ ಅರ್ಜಿಗಳನ್ನು ಪಡೆದುಕೊಂಡು ಈ ಕೆಳಕಂಡ ದಾಖಲೆಗಳನ್ನು ಲಗತ್ತಿಸಿ ಸಂಬAಧಿಸಿದ ಮುಖ್ಯೋಪಾಧ್ಯಯರಿಂದ ದೃಢೀಕರಿಸಿ ಕಾರ್ಯಾಲಯಕ್ಕೆ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳನ್ನು ಖಾಲಿ ಸೀಟುಗಳ ಲಭ್ಯತೆಯನುಸಾರ ಅರ್ಹತೆಯ ಆಧಾರದ ಮೇಲೆ ಆಯ್ಕೆ ಸಮಿತಿ ಮೂಲಕ ಪ್ರವೇಶ ಒದಗಿಸಲಾಗುವುದು.ಅರ್ಜಿ ಸಲ್ಲಿಸಲು ಕೊನೆಯ ಜುಲೈ 30 ಆಗಿದ್ದು ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಸಮಾಜಕಲ್ಯಾಣ ಇಲಾಖೆ ಶಿರಹಟ್ಟಿ ಇಲ್ಲಿಗೆ ಕಛೇರಿ ವೇಳೆಯಲ್ಲಿ ದೂರವಾಣಿ ಸಂಖ್ಯೆ: 08487-295097 ಕ್ಕೆ ಸಂಪರ್ಕಿಸಬಹುದಾಗಿದೆ.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು : ವಿದ್ಯಾರ್ಥಿ / ವಿದ್ಯಾರ್ಥಿನಿಯ ( ( SATS No ) ಸ್ಟೂಂಡೆAಟ್‌ಟ್ರಾö್ಯಕಿAಗ್ ಸಿಸ್ಟಮ್ ಸಂಖ್ಯೆ. ವಿದ್ಯಾರ್ಥಿಗಳ ಜಾತಿ ಪ್ರಮಾಣ ಪತ್ರ. (ಝರಾಕ್ಸ ಪ್ರತಿ), ಆದಾಯ ಪ್ರಮಾಣ ಪತ್ರ (ಝರಾಕ್ಸ್ ಪ್ರತಿ) ವಿದ್ಯಾರ್ಥಿ ಹಾಗೂ ತಂದೆ-ತಾಯಿಯಆಧಾರಕಾರ್ಡ್ (ಝರಾಕ್ಸ ಪ್ರತಿ),. ವಿದ್ಯಾರ್ಥಿ / ವಿದ್ಯಾರ್ಥಿನಿಯ 3 ಪಾಸ್ ಪೋರ್ಟ ಅಳತೆ ಭಾವಚಿತ್ರ..ಹಿಂದಿನ ತರಗತಿಯ ಅಂಕಪಟ್ಟಿ ಪ್ರತಿ. (ಝರಾಕ್ಸ್ ಪ್ರತಿ) ವಿದ್ಯಾರ್ಥಿ / ವಿದ್ಯಾರ್ಥಿನಿಯ / ಪಾಲಕರ ಮೊಬೈಲ್ ನಂಬರ. ಪಡಿತರಚೀಟಿ (ರೇಷನ್‌ಕಾರ್ಡಝರಾಕ್ಸ್ ಪ್ರತಿ)