ಒಂದು ಸಂಜೆ ಹಾಗೆ ನಮ್ಮ ಸಹೋದ್ಯೋಗಿ ಹಾಗೂ ಸ್ನೇಹಿತ ಡಾ.ಲಿಂಗರಾಜ್ ನಿಡುವಣಿಯವರು ನಮ್ಮ ಮನೆಗೆ ಬಂದರು. ಅಂದು ಅತಿಯಾದ ಬಿಸಿಲಿನಿಂದ ಸಿಕ್ಕಾಪಟ್ಟೆ ದಗೆ ಇತ್ತು, ಅವರು ಬರುತ್ತಿನಂತ ಗೊತ್ತಾಗಿ ಅವರಿಗೆ ಇಷ್ಟವಾಗೂ ಚುರುಮುರಿ-ಮಿರ್ಚಿ ಪ್ಲೆಟ್ ನಲ್ಲಿ ಹಾಕಿ ಇರಿಸಿದ್ದೆ. ಹಾಗೆ ನಮ್ಮ ಮನೆ ಟೆರಸ್ ಮೇಲೆ ಕುಡ್ಕೊಂಡು ಸವಿಯೋಕೆ ಸುರುಮಾಡಿದ್ವಿ. ಆಗ ನಮ್ಮ ಸುತ್ತಮುತ್ತಲಿನ ಮಕ್ಕಳು ಎಲ್ಲರು ಸೇರಿ ಸಾನಿಧ್ಯಾ ಸಜ್ಜನ್ ಎಂಬ ಹೆಣ್ಣು ಮಗುಗೆ ಎಲ್ಲರು ಸೇರಿ ನಿನ್ನ ಬರ್ತಡೆ ಏಪ್ರೀಲ್ ಫೂಲ್ ಡೇ. ಏಪ್ರಿಲ್ ಫೂಲ್, ಏಪ್ರಿಲ್ ಫೂಲ್, ಏಪ್ರಿಲ್ ಫೂಲ್ ಅಂತಾ ಅವಳನ್ನು ಚೆಸ್ಟೆಮಾಡ್ತಾ ಇದ್ರು. ಆಗ ನಾನು ಅವಳನ್ನು ನನ್ನ ಹತ್ತಿರ ಕೆರೆದು, ನಮ್ಮ ಚುರುಮುರು-ಮಿರ್ಚಿ ಪಾರ್ಟಿಗೆ ಸರಿಸಿಕೊಂಡ್ತಿ ಲಿಂಗರಾಜ್ ಸರ್ ಹಾಗೂ ನಾನು ಸುಮಾರು 5 ವರ್ಷದಿಂದ ನಮ್ಮ ವಿಶ್ವವಿದ್ಯಾಲಯದಲ್ಲಿ ಏಪ್ರಿಲ್ ಕೂಲ್ ಡೇ ಯನ್ನು ವಿಧ್ಯಾರ್ಥಿಗಳೊಂದಿಗೆ ಗಿಡಗಳಿಗೆ ನೀರು ಹಾಕುತ್ತಾ ಹಾಗೂ ಹಕ್ಕಿಗಳಿಗೆ ಕಾಳು ಇಡುತ್ತಾ ಆಚರಿಸುತ್ತಾ ಬಂದಿದ್ವಿ ಆಗಾಗಲೆ ಎಪ್ರೀಲ್ ಫೂಲ್, ಬದಲಾಗಿ ಏಪ್ರಿಲ್, ಕೂಲ್ ಡೇ ಅಭಿಯಾನವನ್ನು ಡಾ.ಲಿಂಗರಾಜ್ ಸರ್ ಸುಮಾರು ವರ್ಷದಿಂದ ಪ್ರಾರಂಭಿಸಿದ್ದು ಹಾಗೂ ಅದರ ಮಹತ್ವ ನನಗೆ ತಿಳಿದಿತ್ತು ನಂತರ ಆ ಮಗುಗೆ ಸಮಾದಾನ ಮಾಡಿ ಒಂದು ಮಿರ್ಚಿ ಕೊಟ್ಟು ಅವರ ಹತ್ತಿರ ಮಾತಾಡಿಸಿದೆ. ಆಗ ಅವರು ಆ ಮಗುವನ್ನು ಎರಡು ನಗೆ ಚಟಾಕಿ ಹೇಳಿ ಸಮಾದಾನ ಪಡಿಸಿದೆ. ಆಗ ಅವರು ಅವಳಿಗೆ ಹೇಳಿದರು ಸಾನಿಧ್ಯಾ ನಿನಗೆ ಗೊತ್ತಾ ನೀನು ಏಪ್ರಿಲ್ ಫೂಲ್ ದಿನ ಹುಟ್ಟಿಲ್ಲ, ಏಪ್ರೀಲ್ ಕೂಲ್ ಮಾಡೋಕೆ ಹುಟ್ಟಿಯೆಂದು, ಅವಳನ್ನು ಕೊಂಡಾಡಿದರು. ಈ ಬೇಸಿಗೆಯಲ್ಲಿ ನೀನು ಗಿಡ-ಮರಗಳಿಗೆ ನೀರು ಹಾಕು ಆವಾಗ ನಿನ್ನ ಸುತ್ತಮುತ್ತಲಿನ ಪರಿಸರ ಕೂಲ್ ಆಗುತ್ತೆ ಆಗ ಅವರೆಲ್ಲ ನಿನ್ನ ಹುಟ್ಟಿದ ತಿಂಗಳು ಏಪ್ರಿಲ್ ಫೂಲ್ ಬದಲಾಗಿ ಕೂಲ್ ಆಗುತ್ತೆ. ಆಮೆಲೆ ಅವರೆಲ್ಲರು ನೀನು ನೀರು ಹಾಕಿದ ಗಿಡಗಳ ಕೆಳಗೆ ಆಡುತ್ತಾರೆ. ಹೀಗೆ 5 ವರ್ಷದ ಸಾನಿಧ್ಯವನ್ನು ಸಮಾಧಾನ ಮಾಡಿದರು. ಮರು ದಿನ ಮುಂಜಾನೆ ಅವಳ ಹುಟ್ಟಿದ ಹಬ್ಬದ ಹೊಸ ಬಟ್ಟೆಯನ್ನು ಹಾಕಿಕೊಂಡು ಒಂದು ಚಂಬು ನೀರನ್ನು ತಗೆದು ಕೊಂಡು ಬಂದು ಅಂಕಲ್ ಬನ್ನಿ ಗಿಡಗಳಿಗೆ ನೀರು ಹಾಕೋಣ ಅಂತ ನನ್ನು ಕರೆಳು. ಆಗ ಸರಿ ಬಾ ಹಾಕುವಂತಿ ಅಂತ ಕರೆದು ಕೊಂಡು ಹೋಗಿ ಗಿಡಗಳಿಗೆ ನೀರನ್ನು ಹಾಕಿಸಿದೆ. ಆಗ ನಾನು ಒಂದು ಫೋಟೊ ಕ್ಲಿಕ್ಕಿಸಿದೆ. ಹೀಗೆ ಲಿಂಗರಾಜ್ ಸರ್ ಚಿಕ್ಕ ಮಕ್ಕಳಿಂದ ಹಿಡಿದು, ಹಿರಿಯರ ವರೆಗೆ ಎಲ್ಲರನ್ನು ತುಂಬಾ ಹಕ್ಕೋತಾರೆ ಹಾಗೆ ಮಾತಾಡ್ತಾ ಮಾತಾಡ್ತಾ ಎರಡು ಪರಿಸರಮಬಗ್ಗೆ ಕಾಳಜಿ ಹೇಳ್ತಾರೆ ಮುಂದೆ ನಾವೇನಾದರು ಯಾವದಾದರು ಆರೋಗ್ಯದ ಸಮಸ್ಯೆ ಬಗ್ಗೆ ಕೇಳಿದರೆ ಆಗ ಅವರು ಎರಡು ಮನೆ ಮದ್ದು ಹೇಳ್ತಾರೆ. ಅವರ ಜೊತೆ ಸಮಯ ಕಳೆಯೋದೆ ಒಂದು ಸುಂದರ ಕ್ಷಣ.