ಗದಗ : ಗದಗ ಜಿಲ್ಲೆಯ ನರೇಗಲ್ ಪೋಲಿಸ್ ಠಾಣೆಯಲ್ಲಿ ಯುವತಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ.
ಗಂಗಮ್ಮ ತಂದೆ ಗೂಳಪ್ಪ ಹೊಸಮನಿ ವಯಾ: 20 ವರ್ಷ 03 ತಿಂಗಳು ಉದ್ಯೋಗ: ಶಿಕ್ಷಣ, ಸಾ: ಮಾರನಬಸರಿ ತಾ: ಗಜೇಂದ್ರಗಡ ಇವಳು ದಿನಾಂಕ: 17/02/2025 ರಂದು 17-50 ಗಂಟೆಯ ಸುಮಾರಿಗೆ ಮಾರನಬಸರಿ ಗ್ರಾಮದ ಮನೆಯಿಂದ ಎಲ್ಲಿಗೋ ಹೋಗಿ ಕಾಣೆಯಾಗಿದ್ದು ವರಧಿಗಾರಳು ಕಾಣಿಯಾದ ತನ್ನ ಮಗಳಾದ ಗಂಗಮ್ಮ ತಂದೆ ಗೂಳಪ್ಪ ಹೊಸಮನಿ ಇವಳಿಗೆ ಇಲ್ಲಿಯವರೆಗೆ ಹುಡುಕಾಡಿದರೂ ಎಲ್ಲಿಯೂ ಸಿಗದೇ ಇದ್ದುದರಿಂದ ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡುವಂತೆ ಪಿರ್ಯಾದಿಯನ್ನು ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
ಕಾಣೆಯಾದವಳ ಹೆಸರು ವಿಳಾಸ :
ಹೆಸರು : ಗಂಗಮ್ಮ ತಂದೆ ಗೂಳಪ್ಪ ಹೊಸಮನಿ
ವಯಾ: 20 ವರ್ಷ 03 ತಿಂಗಳು
ಉದ್ಯೋಗ: ಶಿಕ್ಷಣ,
ಸಾ: ಮಾರನಬಸರಿ ತಾ: ಗಜೇಂದ್ರಗಡ
ಎತ್ತರ: 05 ಪೂಟು
ಚಹರೆ: ಮೈಯಿಂದ ಸಾಧಾರಣ. ಸಾದಗಪ್ಪು ಮೈಬಣ್ಣ, ಕೋಲುಮುಖ, ತಲೆಯಲ್ಲಿ ಕಪ್ಪು ಕೂದಲು ಹೊಂದಿರುತ್ತಾಳೆ. ಬಲಗೈ ಮೊಣಕೈ ಮೇಲೆ ಹಳೇ ಗಾಯದ ಕಲೆ ಇರುತ್ತದೆ.
ಭಾಷೆ: ಕನ್ನಡ ಭಾಷೆ ಮಾತನಾಡುತ್ತಾಳೆ
ಧರಿಸಿದ ಬಟ್ಟೆ: ಮೈಮೇಲೆ ಹಸಿರು ಹೂವಿನ ಬಣ್ಣದ ಹಳದಿ ಟಾಪ್, ಕಪ್ಪು ಬಣ್ಣದ ಪ್ಯಾಂಟ್ ಮತ್ತು ಹಸಿರು ಬಣ್ಣದ ದುಪ್ಪಟ್ಟಾ ಧರಿಸಿರುತ್ತಾಳೆ.
ಈ ಮೇಲಿನ ಚಹರೆಪಟ್ಟಿಯುಳ್ಳ ಮನುಷ್ಯನ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ನರೇಗಲ್ಲ ಪೊಲೀಸ್ ಠಾಣೆಗೆ ಇಲ್ಲವೇ ಗದಗ ಜಿಲ್ಲಾ ಪೊಲೀಸ್ ಕಛೇರಿಗೆ ಈ ಕೆಳಗಿನ ನಂಬರಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಪಿಎಸ್‌ಐ ನರೇಗಲ್ಲ ಪಿಎಸ್ ಗದಗ ಜಿಲ್ಲೆ
ಸಂಪರ್ಕಿಸಬೇಕಾದ ವಿಳಾಸ -ಗದಗ ಕಂಟ್ರೋಲ್ ರೂಮ್: 9480804400 ಮಾನ್ಯ ಡಿ ಎಸ್ ಪಿ ಸಾಹೇಬರು ನರಗುಂದ ಉಪ-ವಿಭಾಗ ಮೊಬೈಲ್ ನಂಬರ :9480804408
ಮಾನ್ಯ ಸಿಪಿಐ ಸಾಹೇಬರು ರೋಣ ಮೊಬೈಲ್ ನಂಬರ: 9480804434. ಪಿಎಸ್‌ಐ ನರೇಗಲ್ ಪೊಲೀಸ್ ಠಾಣೆ ಮೊಬೈಲ್ ನಂಬರ: 08381-268233 / 9480804454