14.4 C
New York
Friday, May 9, 2025

Buy now

spot_img

ಗದಗ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ|| ಜಿ. ಬಿ. ಬಿಡಿನಹಾಳ

(ದಿ. ೦೪-೧೧-೨೦೨೪ ರಂದು ತೋಂಟದ ಶ್ರೀ ಸಿದ್ಧಲಿಂಗೇಶ್ವರಮಠದಲ್ಲಿ ಶಿವಾನುಭವ ಕಾರ್ಯಕ್ರಮದಲ್ಲಿ ಸನ್ಮಾನಗೊಳ್ಳುತ್ತಿರುವ ನಿಮಿತ್ಯ ಈ ಲೇಖನ)

ಕಡಿದರೆ ಮರದ ತುಂಡುಗಳಿಂದ ಬೆಂಕಿ ಉಂಟಾಗುತ್ತದೆ. ಅಗೆದರೆ ನೆಲದ ಆಳದಲ್ಲಿ ನೀರು ಸಿಗುತ್ತದೆ. ಹುರುಪಿನಿಂದ ಕೆಲಸ ಮಾಡುವ ಮಾನವನಿಗೆ ಅಸಾಧ್ಯವೆಂಬುದೇ ಇಲ್ಲ. ಸರಿಯಾದ ಕ್ರಮದಲ್ಲಿ ಮಾಡಿದ ಎಲ್ಲ ಪ್ರಯತ್ನಗಳು ಫಲವನ್ನು ಕೊಡುತ್ತವೆ. ಎಂಬ ಲೋಕೋಕ್ತಿಯಂತೆ ಯಾವುದೇ ವ್ಯಕ್ತಿ ಸಾಧನೆ ಮಾಡಬೇಕಾದರೆ, ಗುರಿ ಮುಖ್ಯ. ಅದಕ್ಕೆ ಪ್ರಯತ್ನವೆಂಬುದು ಸಹಕರಿಸಿದರೆ ಸಾಧನೆ ದೂರವಿಲ್ಲ. ಹುಟ್ಟು-ಸಾವಿನ ನಡುವೆ ಸಾಧನೆಯ ಕಿರೀಟವನ್ನು ತಮ್ಮದಾಗಿಸಿಕೊಳ್ಳಲು ಪ್ರತಿಯೊಬ್ಬರು ಪ್ರಯತ್ನಿಸುತ್ತಲೇ ಇರಬೇಕು. ಅಂದರೆ ಮಾತ್ರ ಜೀವನ ಸಾರ್ಥಕ. ಯಾರು ತಮ್ಮ ಕರ್ತವ್ಯವನ್ನು ಯಾವ ಪ್ರತಿಫಲಾಪೇಕ್ಷೆಯನ್ನು ಬಯಸದೆ ಕಾರ್ಯನಿರತರಾಗಿರುತ್ತಾರೋ ಅವರಿಗೆ ಬೇಡವೆಂದರೂ ಅದರ ಫಲ ತಾನಾಗಿಯೇ ದೊರಕುತ್ತದೆ. ಇಂತಹ ಹಲವು ಸಾಧಕರು ಕನ್ನಡ ನಾಡಿನಲ್ಲಿ ಆಗಿ ಹೋಗಿದ್ದಾರೆ. ಅವರಲ್ಲಿ ಪ್ರಸ್ತುತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ|| ಜಿ. ಬಿ. ಬಿಡಿನಹಾಳರವರು ಒಬ್ಬರು.
ಬಿಡಿನಹಾಳರವರು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮುಷ್ಠಿಕೊಪ್ಪ ಗ್ರಾಮದ ರೈತಾಪಿ ವರ್ಗದ ಶ್ರೀ ಭರಮಪ್ಪ ಶ್ರೀಮತಿ ಭರಮವ್ವ ಎಂಬ ದಂಪತಿಗಳ ಉದರದಲ್ಲಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ವಗ್ರಾಮದಲ್ಲಿ ಪೂರೈಸಿ, ಕಲಕೇರಿಗೆ ಪ್ರೌಢಶಾಲಾ ವಿದ್ಯಾಭ್ಯಾಸಕ್ಕಾಗಿ ಬಂದರು. ಅಂದು ಏಳನೇ ನೇ ತರಗತಿಗೆ ಗ್ರಾಮೀಣ ಪ್ರತಿಭೆಗಳಿಗೆ ಮೆರಿಟ್ ಸ್ಕಾಲರ್‌ಶಿಫ್ ಪರೀಕ್ಷೆ ಏರ್ಪಡಿಸುತ್ತಿದ್ದರು. ಈ ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಪಾಸಾದರು. ಬೆಳೆವ ಸಿರಿ ಮೊಳಕೆಯಲ್ಲಿ ನೋಡು ಎನ್ನುವ ಉಕ್ತಿಯಂತೆ ಬಾಲ್ಯದಿಂದಲೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಇವರು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಮುಂಡರಗಿ ತಾಲ್ಲೂಕೀಗೇ ಪ್ರಥಮ ಸ್ಥಾನ ಪಡೆದು ತೇರ್ಗಡೆ ಹೊಂದಿದರು. ಅಂದಿನ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಪ್ರತಿಷ್ಠಿತ ಮಹಾವಿದ್ಯಾಲಯವೆಂದು ಪರಿಗಣಿಸಲ್ಪಟ್ಟಿದ್ದ ಕರ್ನಾಟಕ ಮಹಾವಿದ್ಯಾಲಯದಲ್ಲಿ ಪಿಯುಸಿ ಪೂರೈಸಿಕೊಂಡು ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯದ ಮೂಲಕ ಎಂ.ಬಿ.ಬಿ.ಎಸ್. ಪದವಿಯನ್ನು ಪಡೆದುಕೊಂಡರು. ಅಂದಿನಿಂದ ಬಿಡಿನಹಾಳರವರು ಪಟ್ಟ ಕಷ್ಟಗಳೆಲ್ಲ ಮಂಜಿನ ಹನಿಯಂತೆ ಕರಗಿಹೋಗಿ ಸೂರ್ಯ ರಶ್ಮಿಯ ಕಿರಣಗಳು ಜೀವನದಲ್ಲಿ ಆವರಿಸಿಕೊಂಡು ಅಂದರೆ ಸರ್ಕಾರದ ಸೇವೆ ಮಾಡುವ ಹಾಗೂ ಜನಸೇವೆ ಮಾಡುವ ಅವಕಾಶ ಅವರನ್ನು ಅರಿಸಿಕೊಂಡು ಬಂದಿತು. ಅಂದಿನಿಂದಲೇ ಜನಸೇವೆಯೇ ಜನಾರ್ಧನ ಸೇವೆ ಎಂಬ ಸಂಕಲ್ಪ ತೊಟ್ಟ ಇವರು

ಅಂದಿನಿಂದ ಇಂದಿನವರೆಗೆ ಜನಸಮ್ಮುಖಿಯಾದ ಸೇವೆಗೆ ತಮ್ಮನ್ನೂ ಅರ್ಪಿಸಿಕೊಂಡರು. ಅದರಲ್ಲೂ ಗ್ರಾಮೀಣ ಜನರ ಸೇವೆಗಾಗಿ ಹಗಲು-ರಾತ್ರಿಯೆನ್ನದೇ ತಮ್ಮ ಸೇವೆಯಲ್ಲಿ ನಿರತರಾದರು.
ಕಿವಿ ಶೋಭಿಸುವುದು ಶಾಸ್ತç ಶ್ರವಣಗಳಿಂದ ಓಲೆಗಳಿಂದಲ್ಲ, ಕೈಗಳು ಶೋಭಿಸುವುದು ದಾನದಿಂದ ಬಳೆಗಳಿಂದಲ್ಲ, ಕರುಣೆಯಿಂದ ಕೂಡಿದವರ ಶರೀರ ಶೋಭಿಸುವುದು ಪರೋಪಕಾರಗಳಿಂದ ಚಂದನಲೇಪನದಿಂದಲ್ಲ, ಎನ್ನುವ ನೀತಿಯಂತೆ ಪರೋಪಕಾರಗಳಿಂದ ಅನೇಕ ವಿದಾಯಕ ಕಾರ್ಯಕ್ರಮಗಳಿಗೆ ಉದಾರವಾಗಿ ದೇಣಿಗೆ ನೀಡಿದ್ದಾರೆ. ತಮ್ಮ ಸ್ವಗ್ರಾಮವಾದ ಮುಷ್ಠಿಕೊಪ್ಪದಲ್ಲಿ ಉಚಿತ ಸಾಮೂಹಿಕ ವಿವಾಹ, ಕಲಿತ ಶಾಲೆಯ ಕಂಪೌಂಡ ಕಟ್ಟಿಸಿ ಗೇಟ್ ಅಳವಡಿಸಿದ್ದು, ಮಾರುತಿ ಮತ್ತು ವೆಂಕಟೇಶ್ವರ ದೇವಸ್ಥಾನದ ಜೀರ್ಣೋದ್ಧಾರ, ಬಡಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಉಚಿತ ಉಡುಪು ಮತ್ತು ಪುಸ್ತಕಗಳ ಕೊಡುಗೆ, ರೈತ ಮತ್ತು ಬಡಕುಟುಂಬದ ಅಸಹಾಯಕರಿಗೆ ಉಚಿತ ವೈದ್ಯಕೀಯ ಸೇವೆ, ಉಚಿತ ವೈದ್ಯಕೀಯ ತಪಾಸಣೆ ಮತ್ತು ಔಷಧಿ ವಿತರಣೆ, ಆರೋಗ್ಯ ಜಾಗೃತಿ ಕಾರ್ಯಕ್ರಮ, ರಕ್ತದಾನ ಶಿಬಿರ, ಹೀಗೆ ಹತ್ತಾರೂ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಪರೋಪಕಾರಂ ಇದಂ ಶರೀರಂ ಎಂಬ ವಾಣಿಯಂತೆ ಬಡವರಿಗೆ, ರೈತರಿಗೆ, ದೀನ-ದಲಿತರಿಗೆ, ಅಸಹಾಯಕರಿಗೆ ಸೇವೆ ಸಲ್ಲಿಸಿದ ಸಾರ್ಥಕ ಬದುಕು ಇವರದು ಎಂದು ಹೇಳಿದರೆ ತಪ್ಪಾಗಲಾರದು.
ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಡಾ|| ಬಿಡಿನಹಾಳರವರು ಗದಗ ಜಿಲ್ಲಾ ಐಎಂಎ ಜಿಲ್ಲಾಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ರಾಜೀವ ಗಾಂಧಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಕೇಂದ್ರಿಯ ರಾಷ್ಟ್ರೀಯ ಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಗದಗ ಜಿಲ್ಲಾ ಶಸ್ತç ಚಿಕಿತ್ಸಕರ ಸಂಘದ ಸದಸ್ಯರಾಗಿ, ಅಧ್ಯಕ್ಷರಾಗಿ, ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿದರು. ರಾಜ್ಯಕ್ಕೆ ಮಾತ್ರ ತಮ್ಮ ಸೇವೆಯನ್ನು ಸೀಮಿತಗೊಳಿಸಿಕೊಳ್ಳಲಾರದೆ ಭಾರತೀಯ ರಾಷ್ಟಿçÃಯ ವೈದ್ಯಕೀಯ ಸಂಘದ ಸದಸ್ಯರಾಗಿ ಹಾಗೂ ಪ್ರಸ್ತುತ ಉಪಾಧ್ಯಕ್ಷರಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ವ್ಯಕ್ತಿಯ ಜೀವನವು ವೃತ್ತಿಗೆ ಮಾತ್ರ ಅಂಟಿಕೊಂಡರೆ ನಿಂತ ನೀರಾಗುತ್ತದೆ. ವೃತ್ತಿಯೊಂದಿಗೆ ಪ್ರವೃತ್ತಿಯನ್ನೂ ಜೀವನದಲ್ಲಿ ಅಳವಡಿಸಿಕೊಂಡರೆ ಹರಿಯುವ ನೀರಾಗುತ್ತದೆ. ವ್ಯಕ್ತಿ ನಿಂತ ನೀರಾದರೆ ಕುಟುಂಬಕ್ಕೆ ಸೀಮಿತನಾಗುತ್ತಾನೆ. ವಿಶ್ವಕುಟುಂಬಿಯಾಗಬೇಕಾದರೆ ಎಲ್ಲವನ್ನೂ ಮೀರಿ ಬೆಳೆಯಬೇಕು. ಯಾರೂ ಎಲ್ಲೆಯನ್ನೂ ಮೀರುತ್ತಾರೋ ಅವರು ಮಾತ್ರ ಸಾಧಕರಾಗುತ್ತಾರೆ. ಇವರೊಬ್ಬ ಕೃಷಿ ವೈದ್ಯರಾಗಿಯೂ ದಿನನಿತ್ಯ ಭೂಮಿತಾಯಿಯೊಂದಿಗೆ ಒಡನಾಟ ಹೊಂದಿದ್ದಾರೆ ಒಬ್ಬ ಕೃಷಿ ಪಂಡಿತನಿಗಿರುವ ಸಂಪೂರ್ಣ ಜ್ಞಾನವನ್ನು ಇವರು ಹೊಂದಿದ್ದಾರೆ ಎಂದರೆ ಅಚ್ಚರಿಪಡಬೇಕಾಗಿಲ್ಲ. ಯಾವ ರೈತರಿಗೂ ಕಡಿಮೆಯಿಲ್ಲದಂತೆ ತಮ್ಮ ಭೂಮಿಯಲ್ಲಿ ಸಮೃದ್ಧ ಬೆಳೆ ತೆಗೆಯುವುದರ ಮೂಲಕ ಕೃಷಿಕರಿಗೆ ಮಾದರಿಯಾಗಿದ್ದಾರೆ. ಜೊತೆಗೆ ಇವರೊಬ್ಬ ಶ್ರೇಷ್ಠ ಕ್ರೀಡಾಪಟುಗಳಾಗಿದ್ದಾರೆ. ‘ಶರೀರ ಮಾದ್ಯಂ ಖಲು ಧರ್ಮ ಸಾಧನಂ ಎಂಬ ಮಾತಿನಂತೆ ಯಾವುದೇ ಸಾಧನೆ ಮಾಡಬೇಕಾದರೆ ಶರೀರ ಸದೃಢವಾಗಿರಬೇಕು ಎಂಬ ತತ್ವದಲ್ಲಿ ಅಪಾರ ನಂಬಿಕೆ ಹೊಂದಿದವರು. ೨೦೨೧ ಅಕ್ಟೋಬರನಲ್ಲಿ ನಡೆದ ಮಹಾರಾಷ್ಟç ರಾಜ್ಯದ ನಾಸಿಕನಲ್ಲಿ ನಡೆದ ರಾಷ್ಟಿçÃಯ ವೈದ್ಯಕೀಯ ಕ್ರೀಡಾಕೂಟದಲ್ಲಿ ೬೦ ವರ್ಷ ಮೇಲ್ಪಟ್ಟರವರೆಗೆ ನಡೆದ ೨೦ ಕಿ. ಮಿ. ತೀವ್ರ ನಡುಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಪಡೆದಿದ್ದಾರೆ. ೨೦೨೩ ರಲ್ಲಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ರಾಷ್ಟಿçÃಯ ವೈದ್ಯಕೀಯ ಕ್ರೀಡಾಕೂಟದಲ್ಲಿ (ಐಎಂಎ ನ್ಯಾಶನಲ್ ಡಾಕ್ರ‍್ಸ್ ಓಲಂಪಿಕ್ಸ್) ೧೦ ಕಿ. ಮಿ. ಮ್ಯಾರಾಥನ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಪಡೆದಿದ್ದಾರೆ. ೧೦ ಕಿ. ಮಿ. ತೀವ್ರ ನಡುಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಪಡೆದಿದ್ದಾರೆ. ೨೦೦ ಮೀಟರ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಪಡೆದಿದ್ದಾರೆ. ೧೦೦ ಮೀಟರ ರೀಲೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಪಡೆದಿದ್ದಾರೆ. ೨೦೨೪ ರ ಫೆಬ್ರುವರಿಯಲ್ಲಿ ಶಿವಮೊಗ್ಗದಲ್ಲಿ ಜರುಗಿದ ರಾಜ್ಯ ಮಟ್ಟದ ಹಿಂಬದಿ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಪಡೆದು ಗದಗ ಜಿಲ್ಲೆಗೆ ಕೀರ್ತಿ ತಂದ ಹೆಗ್ಗಳಿಕೆ ಇವರದು. ಇವರ ಸಾಧನೆಗೆ ಈಗಾಗಲೇ ಹಲವಾರು ಸಂಘ-ಸಂಸ್ಥೆಗಳು ಮಾನ ಸನ್ಮಾನ ನೀಡಿ ಗೌರವಿಸಿವೆ.
ಸಾಧನೆಗೆ ಗುರಿಯೊಂದೆ ಮಾರ್ಗ ಎನ್ನುವ ಉಕ್ತಿಯಂತೆ ಏನಾದರೂ ಸಾಧಿಸಬೇಕು ಎಂಬ ಹಂಬಲ ಹೊಂದಿದ ಡಾ. ಬಿಡಿನಹಾಳರವರು ಯಾವಾಗಲೂ ವೃತ್ತಿ ಜೀವನಕ್ಕೆ ಅಂಟಿಕೊಳ್ಳದೆ ಸಮಾಜಮುಖಿ ಚಿಂತನೆ, ಸೇವಾಮನೋಭಾವ ಹಿರಿ ಕಿರಿಯ, ಬಡವ ಬಲ್ಲಿದ, ಎಂಬ ಬೇಧ ಬಾವವಿಲ್ಲದೆ ಎಲ್ಲರೊಳಗೊಂದಾದವರು. ಸರಳ ಜೀವನ ಉಚ್ಛ ವಿಚಾರ ಹೊಂದಿದ ಡಾ. ಜಿ. ಬಿ. ಬಿಡಿನಹಾಳರವರಿಗೆ ಕರ್ನಾಟಕ ಸರಕಾರವು ಅರತ್ತೊಂಭತ್ತನೆಯ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು ಅವರ ಸೇವೆಗೆ ಸಂದ ಫಲವಾಗಿದೆ. ಇದು ಬರೀ ಬಿಡಿನಹಾಳರವರಿಗೆ ಸಂದ ಪ್ರಶಸ್ತಿಯಲ್ಲ್ಲ ಇಡೀ ಗದಗ ಜಿಲ್ಲೆಗೆ ಸಂದ ಪ್ರಶಸ್ತಿಯಾಗಿದೆ. ಈ ಶುಭ ಸಂದರ್ಭದಲ್ಲಿ ನಾವು ಅವರಿಗೆ ಶುಭ ಹಾರೈಸುವದರೊಂದಿಗೆ, ಶ್ರೀಯುತರ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸುತ್ತೇವೆ. ಗದುಗಿನ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ತೋಂಟದ ಸಿದ್ಧಲಿಂಗೇಶ್ವರ ಮಠವು ಸೇವಾ ಮನೋಭಾವನೆ ಹೊಂದಿದ ಸಾಧಕರನ್ನು ಗುರುತಿಸಿ ಗೌರವಿಸುವ ವಿಶಿಷ್ಟ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದೆ. ಪ್ರಸ್ತುತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ಜಿ. ಬಿ. ಬಿಡಿನಹಾಳರವರನ್ನು ಗೌರವಿಸುವ ಮತ್ತು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸರ್ವರಿಗೂ ಸಂತೋಷದ ಸಂಗತಿಯಾಗಿದೆ.
ವಂದನೆಗಳೊಂದಿಗೆ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ಯುದ್ಧ ಪರಿಸ್ಥಿತಿ ನಿರ್ವಹಣೆಗೆ ಸನ್ನದ್ಧರಾಗಲು ಜಿಲ್ಲಾಧಿಕಾರಿ ಕರೆ ಗದಗ : ITBP ಯೋಧನ ಕೆಲಸವನ್ನು ತಕ್ಷಣವೇ ಮಾಡಿ ಬಿಳ್ಕೋಟ ಗದಗ ಹಿರಿಯ ಉಪನೋಂದಣೆ ಅಧಿಕಾರಿಗಳು ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯ: ಎ... ಗದಗ : ಲಂಚ ಸ್ವೀಕಾರ : ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ ! ಗದಗ : ಮನೆಯಲ್ಲೇ ನೇಣಿಗೆ ಶರಣಾದ ನವದಂಪತಿ! ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ: ಜಯದೇವ ಕಡಗಿ