Friday, October 18, 2024
Google search engine
Homeಗದಗಗದಗ : ಸೃಜನಶೀಲ ಶಿಷ್ಯಬಳಗ ಕಟ್ಟಿದ ಸಿದ್ನೇಕೊಪ್ಪ : ಸಚಿವ ಎಚ್.ಕೆ. ಪಾಟೀಲ

ಗದಗ : ಸೃಜನಶೀಲ ಶಿಷ್ಯಬಳಗ ಕಟ್ಟಿದ ಸಿದ್ನೇಕೊಪ್ಪ : ಸಚಿವ ಎಚ್.ಕೆ. ಪಾಟೀಲ

ಗದಗ : ದೇಶ ಕಟ್ಟುವ ಸೃಜನಶೀಲ ಸಮಾಜವನ್ನು ನಿರ್ಮಿಸುವ ಮಾನವೀಯ ಮೌಲ್ಯಗಳಿಗೆ ಮನ್ನಣೆ ನೀಡುವ ಶಿಷ್ಯರನ್ನು ಅರ್ಪಿಸುವ ಕೆಲಸ ಮಾಡುತ್ತಾ ಬರುವುದರ ಮೂಲಕ ಸಾವಿರರಾರು ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಲು ಶ್ರಮಿಸಿರುವದರ ಮೂಲಕ ಸೇವಾ ನಿವೃತ್ತರಾಗುತ್ತಿರುವ ಡಾ.ಎಸ್.ಎಫ್.ಸಿದ್ನೆಕೊಪ್ಪ ಅವರ ಕಾರ್ಯ ಪ್ರಶಂಸನೀಯವಾದದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಬೆಟಗೇರಿ ಹೊರವಲಯದ ನಾಗಸಮುದ್ರ ರಸ್ತೆಯಲ್ಲಿರುವ ಪ್ರತೀಷ್ಠಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಜರುಗಿದ ಡಾ.ಎಸ್.ಎಫ್.ಸಿದ್ನೆಕೊಪ್ಪ ಹೃದಯಸ್ಪರ್ಶಿ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಸನ್ಮಾನ ಗೈದು ಮಾತನಾಡಿದ ಅವರು ಶಿಕ್ಷಕರು ತಮ್ಮ ತ್ಯಾಗ ಮತ್ತು ಸಮರ್ಪಣಾ ಮನೋಭಾವದಿಂದಲೇ ತಮ್ಮ ಶಿಷ್ಯರ ಮನಃ ಪಟಲದಲ್ಲಿ ಸದಾ ಕಾಲ ನಿಲ್ಲುತ್ತಾರೆ. ಇವತ್ತು ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ನಿರ್ಮಾಣ ಶಿಕ್ಷಕರಿಂದಲೆ ಸಾಧ್ಯವಾಗಿದೆ ಆ ಹಿನ್ನಲೆಯಲ್ಲಿ ಶ್ರಮಿಸಿರುವ ಸಿದ್ನೇಕೊಪ್ಪ ಅವರ ದೀರ್ಘ ಸೇವೆ ಜನಮಾನಸದಲ್ಲಿ ನೆಲೆ ನಿಲ್ಲುವಂತಹದು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ಬಿ.ಸಂಕನೂರ ಮಾತನಾಡಿ ಶಿಕ್ಷಣದ ನಿಜವಾದ ಗುರಿ ಚಾರಿತ್ರö್ಯ ನಿರ್ಮಾಣ ಶಿಕ್ಷಣವೆಂದರೆ ಪಠ್ಯ ಕಲಿಕೆಯಲ್ಲ ಜೀವನದ ಮೌಲ್ಯಗಳ ಶಿಸ್ತು ಸಂಸ್ಕಾರವನ್ನು ತುಂಬುವ ಕೆಲಸ ನಡೆದಾಗ ಮಾತ್ರ ಶಿಕ್ಷಣ ಪರಿಪೂರ್ಣವೆನಿಸುವ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಸದಾ ತಮ್ಮ ವೃತ್ತಿ ಜೀವನದ ಉದ್ದಕ್ಕು ಜ್ಞಾನದಾಸೋಹ ಮಾಡಿರುವ ಡಾ.ಎಸ್.ಎಫ್.ಸಿದ್ನೆಕೊಪ್ಪ ಹೃದಯಸ್ಪರ್ಶಿ ಕಾರ್ಯ ಎಂದು ಮರೆಯಲಾರದಂತಹದು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಡಾ.ಎಸ್.ಎಫ್.ಸಿದ್ನೆಕೊಪ್ಪ ಮಾತನಾಡಿ ದೇಶದ ನಿಜವಾದ ಭವಿಷ್ಯ ಅಡಗಿರುವುದು ವಿದ್ಯಾರ್ಥಿಗಳ ಕೈಯಲ್ಲಿ ಅಂತಹ ವ್ಯಕ್ತಿತ್ವ ರೂಪಿಸುವ ಶಿಕ್ಷಕರ ಕಾರ್ಯ ಮಹತ್ವಪೂರ್ಣವಾದದ್ದು ಆ ಹಿನ್ನಲೆ ಅವರ ಭವಿಷ್ಯಕ್ಕಾಗಿ ಶಿಕ್ಷಕ ವೃಂದ ಮತ್ತು ಪಾಲಕರು ಶ್ರಮಿಸಲು ಮುಂದಾಗಿ ಎಂದು ಕರೆ ನೀಡಿದರು.

ಡಾ.ಆರ್.ಎಮ್.ಕುಬೇರಪ್ಪ, ಡಾ.ಐ.ಎ.ಪಿಂಜಾರ ಮಾತನಾಡಿ, ಅವರ ವೃತ್ತಿಯುದ್ದಕ್ಕೂ ಸುಮಾರು ವರ್ಷಗಳ ಕಾಲ ಭೋದಕರಾಗಿ ಪ್ರಾಚಾರ್ಯರಾಗಿ ತಮ್ಮ ಅನುಭವದ ಮೂಲಕ ಡಾ.ಶಹಾಬುದ್ದಿನ ಅವರು ಅನೇಕ ವಿದ್ಯಾರ್ಥಿಗಳು ಪ್ರತಿಭಾವಂತರಾಗಲು ಶ್ರಮಿಸಿದ್ದಾರೆ ಅವರ ಅನುಭವದ ಸೇವೆಯಿಂದ ಸಾವಿರಾರು ವಿದ್ಯಾರ್ಥಿಗಳು ವಿವಿಧ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ವಯೋನಿವೃತ್ತಿ ಹೊಂದಿದ ಬಳಿಕವು ಜಿಲ್ಲೆಯಾಧ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿ ಎಂದು ಹೇಳಿದರು.

ಅತಿಥಿ ಉಪನ್ಯಾಸಕರ ರಾಜ್ಯಾಧ್ಯಕ್ಷ ಡಾ.ಹನಮಂತಗೌಡ ಆರ್ ಕಲ್ಮನಿ ಪ್ರಸ್ತಾವಿಕವಾಗಿ ಮಾತನಾಡಿದರು.ಡಾ.ಎಸ್.ಎಫ್.ಸಿದ್ನೆಕೊಪ್ಪ ಅವರಿಗೆ ವಿವಿಧ ಕಾಲೇಜಿನ ಪ್ರಾಚಾರ್ಯರು,ಉಪನ್ಯಾಸಕರು, ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು, ಗದಗ ನಗರದ ವಿವಿಧ ಗಣ್ಯರಿಂದ ಸನ್ಮಾನ ಜರುಗಿತು ಮತ್ತು ನೂತನ ಕಾಲೇಜು ಸಮಿತಿಯವರಿಗೂ ಕೂಡಾ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾದೇಶಿಕ ಜಂಟಿ ನಿದೆರ್ಶಕರು ಪ್ರಕಾಶ ಹೊಸಮನಿ,ಪ್ರಾಚಾರ್ಯ ಕಲೀಲ ಅಹ್ಮದ ಚಿಕ್ಕೇರೂರ, ವಿದ್ಯಾದರ ದೊಡ್ಡಮನಿ, ನಗರಾಭೀವೃದ್ಧಿ ಅಧ್ಯಕ್ಷ ಅಕಬರಸಾಬ ಬಾಬರ್ಜಿ, ಜಿಲ್ಲಾನೊಂದಾಣಿಧಿಕಾರಿ ಶಿವಕುಮಾರ ಅಪರಂಜಿ, ಅಸೂಟಿ, ಎಸ್.ಎನ್.ಬಳ್ಳಾರಿ, ಪ್ರಾಚಾರ್ಯ ಶಿವಪ್ಪ ಕುರಿ, ಪ್ರಾಚಾರ್ಯ ಎಮ್.ಯು.ಹಿರೇಮಠ, ಡಾ.ಅಪ್ಪಣ್ಣ ಹಂಜೆ, ಡಾ.ರಮೇಶ ಕಲ್ಲನಗೌಡರ,ಕಾಲೇಜು ಸಮಿತಿ ಸದಸ್ಯರಾದ ಆರ್.ಎಚ್.ಏಕಬೋಟೆ, ಶಂಕರ ರಜಪೂತ, ಮಲ್ಲಿಕಾರ್ಜುನ ಐಲಿ, ಹೊನ್ನಪ್ಪ ಸಾಕಿ, ಡಾ.ದಿವಾಕರ ಪರಕಾಳೆ, ಶಿವಕುಮಾರ ಬೆಟಗೇರಿ, ಅಂಬರೀಷ ಚಾಗಿ, ವಿಜಯ ಕಬಾಡಿ, ಮಹಮ್ಮದ ಶಾಲಗಾರ, ಬಸವರಾಜ ಕಡೇಮನಿ, ಅಶೋಕ ಮಂದಾಲಿ, ಕುಸುಮಾ ಬೆಳಗಟ್ಟಿ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದ್ದಿವರ್ಗ ಇದ್ದರು.

ಪೋಟೊ ಕ್ಯಾಪ್ಸನ್:ಗದಗ ಬೇಟಗೇರಿ ಹೊರವಲಯದ ನಾಗಸಮುದ್ರ ರಸ್ತೆಯಲ್ಲಿರುವ ಪ್ರತೀಷ್ಠಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಜರುಗಿದ ಹೃದಯಸ್ಪರ್ಶಿ ಬಿಳ್ಕೋಡುಗೆ ಡಾ.ಎಸ್.ಎಫ್.ಸಿದ್ನೆಕೊಪ್ಪ ಅವರಿಗೆ ಸನ್ಮಾನಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್. ಡಾ.ಆರ್.ಎಮ್.ಕುಬೇರಪ್ಪ,ಡಾ.ಐ.ಎ.ಪಿಂಜಾರ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಲೋಕ ಕಲ್ಯಾಣಕ್ಕಾಗಿ ರಾಮಾಯಣ ಮಹಾಗ್ರಂಥ ಅರ್ಪಿಸಿದವರು ಮಹರ್ಷಿ ವಾಲ್ಮೀಕಿ ಗದಗ : ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿ ಕಣ್ಮುಚ್ಚಿದ ವಿದ್ಯುತ್‌ ದೀಪಗಳು ಗದಗ : “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹುಬ್ಬಳ್ಳಿ : ಮುಸ್ಲಿಮ್ ಸಮುದಾಯಕ್ಕೆ ಶೇಕಡಾ 4 ರಷ್ಟು ಮೀಸಲಾತಿ ಮುಂದುವರೆಸಲು ಆಗ್ರಹ  ಹುಬ್ಬಳ್ಳಿ : ಲಿಡಕರ್ ಹಿತ ಅಭಿವೃದ್ಧಿ ಸಂಘದ ವತಿಯಿಂದ ಮನವಿ  ಗದಗ : ಒಳ ಮೀಸಲಾತಿಯನ್ನು ಜಾರಿ ಮಾಡಲು ಮಾದಿಗ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಹುಬ್ಬಳ್ಳಿ : ವಿಧಾನ ಪರಿಷತ್ತಿನ ಮಾಜಿ ಸದಸ್ಯ ಇಸ್ಮಾಯಿಲ್ ಸಾಬ್ ಕಾಲೇಬುಡ್ಡೆ ನಿಧನ ಗದಗ : ವಿವಿಧ ಅರ್ಜಿ ಆಹ್ವಾನ ಗದಗ : ನರೇಗಾ ನೆರವು ಪಡೆದು ಬದುಕು ಬದಲಾಗಿಸಿಕೊಳ್ಳಿ : ಚಂದ್ರಶೇಖರ ಬಿ ಕಂದಕೂರ ಹುಬ್ಬಳ್ಳಿ : ಉತ್ತರ ಕರ್ನಾಟಕ ಹೋರಾಟ ವೇದಿಕೆಯಿಂದ ಹುಬ್ಬಳ್ಳಿ , ಧಾರವಾಡ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ