9.6 C
New York
Wednesday, November 12, 2025

Buy now

spot_img

ಗದಗ : HRMS 2.0 ಮತ್ತು KASS ಕುರಿತ ಕಾರ್ಯಾಗಾರಕ್ಕೆ ಎಸ್ಪಿ ರೋಹನ್ ಜಗದೀಶ್ ಚಾಲನೆ

ಕಾರ್ಯಾಗಾರದ ಸಂಪೂರ್ಣ ಸದ್ಬಳಕೆಗೆ ಕರೆ

ಗದಗ, ನ. 10 : ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಖಜಾನೆ ಇಲಾಖೆ ಗದಗ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಜಿಲ್ಲಾಶಾಖೆ ಗದಗ ಇವರ ಆಶ್ರಯದಲ್ಲಿ HRMS ತಂತ್ರಾಂಶ–2.0 ಹಾಗೂ KASS ಕುರಿತ ಕಾರ್ಯಾಗಾರವನ್ನು (ನವೆಂಬರ್ 10 ರಂದು) ಸೋಮವಾರದಂದು ಜಿಲ್ಲಾಧಿಕಾರಿಗಳ ಭವನ, ಆಡಿಟೋರಿಯಂ ಹಾಲ್, ಗದಗದಲ್ಲಿ ಯಶಸ್ವಿಯಾಗಿ ಜರುಗಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರು ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಸಿಬ್ಬಂದಿಗಳಿಗೆ ತಿಂಗಳ ಕೊನೆಯಲ್ಲಿ ಸರಿಯಾಗಿ ವೇತನ ಪಾವತಿಯಾಗುವಂತೆ ನೋಡಿಕೊಳ್ಳಬೇಕು.

ನೌಕರರಿಗೆ ವೇತನ ಪಾವತಿ ಸಹ ತಾಂತ್ರಿಕ ಪರಿಣಿತ ನಿರ್ವಾಹಕ ನಿಂದ ಮಾತ್ರ ಸಾಧ್ಯ ಹೆಚ್ ಆರ್ ಎಂ ಎಸ್ ಹಾಗೂ ಖಜಾನೆ 2 ತಂತ್ರಾಂಶವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ನೌಕರರಿಗೆ ತಿಂಗಳ ಕೊನೆಯಲ್ಲಿ ವೇತನ ಪಾವತಿಯಾಗುವಂತೆ ನೋಡಿಕೊಳ್ಳಬೇಕು ಎಂದರು.

ರಾಜ್ಯ ಸರ್ಕಾರಿ ನೌಕರರಿಗೆ ಇತ್ತೀಚೆಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಎಂಬ ನಗದುರಹಿತ ಆರೋಗ್ಯ ಸೇವೆ ಒದಗಿಸುವ ಯೋಜನೆ ಜಾರಿ ಮಾಡಲಾಗಿದೆ ಇದರ ನೋಂದಣಿ ಸರಿಯಾದ ಅನುಷ್ಠಾನಕ್ಕೆ ಇರುವ ಗೊಂದಲಗಳ ನಿವಾರಣೆಗೆ ಈ ಕಾರ್ಯಗಾರ ಸಹಕಾರಿಯಾಗಲಿದೆ ಎಂದು ಎಸ್ ಪಿ ರೋಹನ್ ಜಗದೀಶ್ ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯ ಮಾಜಿ ಉಪಾಧ್ಯಕ್ಷ ರವಿ ಗುಂಜೀಕರ್ ಅವರು ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ನೌಕರರ ಆರೋಗ್ಯ ಸಮಸ್ಯೆಗಳಿಗೆ ಆರೋಗ್ಯ ಸಂಜೀವಿನಿ ಯೋಜನೆ ಅತ್ಯಂತ ಸಹಕಾರಿಯಾಗಿದೆ. ಪ್ರತಿ ತಿಂಗಳು ಸಣ್ಣ ಪ್ರಮಾಣದ ವಂತಿಗೆ ನೀಡಬೇಕು, ಅನಾರೋಗ್ಯದ ಸಂದರ್ಭದಲ್ಲಿ ನಿಮಗೆ ಆರ್ಥಿಕವಾಗಿ ಹೆಚ್ಚು ಸಹಾಯವಾಗಲಿದೆ ಎಂದು ಆರೋಗ್ಯ ಸಂಜೀವಿನಿ ಯೋಜನೆ ಕುರಿತು ತಿಳಿಸಿದರು. ನಗದುರಹಿತ ಸೇವೆ ಜಾರಿಗೊಳಿಸಲು ಹಲವಾರು ವರ್ಷಗಳಿಂದ ರಾಜ್ಯ ಸರ್ಕಾರಿ ನೌಕರರ ಸಂಘ ಪ್ರಯತ್ನಿಸಿ ಯಶಸ್ವಿಯಾಗಿದೆ ಇದರ ಸದ್ಬಳಕೆ ನೌಕರ ಭಾಂದವರು ಮಾಡಿಕೊಳ್ಳುವಂತೆ ಕರೆ ನೀಡಿದರು.

ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್ ಮಾತನಾಡಿ, ಇತ್ತೀಚೆಗೆ ಸರ್ಕಾರದ ಎಲ್ಲ ಯೋಜನೆಗಳು ಅನುಷ್ಠಾನದಲ್ಲಿ ತಾಂತ್ರಿಕತೆ ಅಳವಡಿಸಲಾಗಿದೆ. ಅದೇ ರೀತಿ ನೌಕರರ ವೇತನ ಹಾಗೂ ಸೇವೆಗಳ ಕುರಿತಂತೆ ಎಲ್ಲವುಗಳನ್ನು ಸಹ ತಾಂತ್ರಿಕ ಸಿಬ್ಬಂದಿ ನಿರ್ವಹಿಸಬೇಕಿದೆ. ನೌಕರರ ಜಿಪಿಎಫ್, ಕೆಜಿಐಡಿ ವಿಮಾ ಸೇರಿದಂತೆ ಎಲ್ಲವುಗಳನ್ನು ಸಹ ಬೆರಳು ತುದಿಯಲ್ಲಿ ಬಳಸುವ ತಂತ್ರಜ್ಞಾನ ರೂಪಿಸಿದೆ. ಅದೇ ತರ ಆರೋಗ್ಯ ಸಂಜೀವಿನಿ ನೋಂದಣಿ ಎಲ್ಲರೂ ಮಾಡಿಕೊಳ್ಳುವ ಮೂಲಕ ಅನಾರೋಗ್ಯ ಸಂದರ್ಭದಲ್ಲಿ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.

ಕಾರ್ಯಾಗಾರದಲ್ಲಿ ಶ್ರೀಮತಿ ನೀಲಮಾ ಬಿ, ಯೋಜನಾಧಿಕಾರಿ (ಬೆಂಗಳೂರು), HRMS-2.0 ಮತ್ತು ಪರಿಚಯ/ESR ಕುರಿತು, ಶ್ರೀಮತಿ ಸುಧಾಮಣಿ, ಯೋಜನಾಧಿಕಾರಿಗಳು (ಬೆಂಗಳೂರು) KASS ಮತ್ತು ESS ಕುರಿತು, ಸುಮಂತ್, ತಾಂತ್ರಿಕ ತರಬೇತುದಾರರು (ಬೆಂಗಳೂರು) HRMS-2.0 Modules ಕುರಿತು ತರಬೇತಿ ನೀಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ‌ ಸೇರಿದಂತೆ, ಜಿಪಂ ಉಪಕಾರ್ಯದರ್ಶಿ ಸಿ ಆರ್ ಮುಂಡರಗಿ, ಎಸಿ‌ ಗಂಗಪ್ಪ ಎಂ, ಅಧಿಕಾರಿಗಳಾದ ಆರ್ ಎಸ್ ಬುರಡಿ, ಹರಿನಾಥಬಾಬು, ಜಿ ಎಂ ಮುಂದಿನಮನಿ ಸೇರಿದಂತೆ ನೌಕರ ಸಂಘದ ಜಿಲ್ಲಾ ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news