ಗದಗ, ನ. 7: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಖಜಾನೆ ಇಲಾಖೆ ಗದಗ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಜಿಲ್ಲಾಶಾಖೆ ಗದಗ ಇವರ ಆಶ್ರಯದಲ್ಲಿ HRMS ತಂತ್ರಾಂಶ–2.0 ಹಾಗೂ KASS ಕುರಿತ ಕಾರ್ಯಾಗಾರವನ್ನು ನವೆಂಬರ್ 10 ರಂದು (ಸೋಮವಾರ) ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿಗಳ ಭವನ, ಆಡಿಟೋರಿಯಂ ಹಾಲ್, ಗದಗದಲ್ಲಿ ಜರುಗಲಿದೆ.
ಈ ಕಾರ್ಯಾಗಾರದಲ್ಲಿ ಗದಗ ಜಿಲ್ಲೆಯ ಎಲ್ಲಾ DDO ಗಳು ಹಾಗೂ EST ವಿಭಾಗದ ಸಿಬ್ಬಂದಿ ಭಾಗವಹಿಸಲಿದ್ದಾರೆ. HRMS-2.0 ನ ಹೊಸ ಪರಿಷ್ಕೃತ ಮಾದರಿ, ESR ಹಾಗೂ KASS ಮತ್ತು ESS ಕುರಿತ ತಾಂತ್ರಿಕ ತರಬೇತಿ ಈ ಸಂದರ್ಭದಲ್ಲಿ ನೀಡಲಾಗುವುದು.
ಕಾರ್ಯಾಗಾರದಲ್ಲಿ ಶ್ರೀಮತಿ ನೀಲಮಾ ಬಿ, ಯೋಜನಾಧಿಕಾರಿ (ಬೆಂಗಳೂರು), HRMS-2.0 ಮತ್ತು ಪರಿಚಯ/ESR ಕುರಿತು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಮಾರ್ಗದರ್ಶನ ನೀಡಲಿದ್ದಾರೆ.
ಮಧ್ಯಾಹ್ನ 12.30ರಿಂದ 1.30ರವರೆಗೆ ಶ್ರೀಮತಿ ಸುಧಾಮಣಿ, ಯೋಜನಾಧಿಕಾರಿಗಳು (ಬೆಂಗಳೂರು) KASS ಮತ್ತು ESS ಕುರಿತು ಮಾತನಾಡಲಿದ್ದಾರೆ. ಮಧ್ಯಾಹ್ನ 2.30ರಿಂದ 4.30ರವರೆಗೆ ಸುಮಂತ್, ತಾಂತ್ರಿಕ ತರಬೇತುದಾರರು (ಬೆಂಗಳೂರು) HRMS-2.0 Modules ಕುರಿತು ತರಬೇತಿ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ, ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಭಾಗವಹಿಸಲಿದ್ದಾರೆ.
ಈ ಕಾರ್ಯಾಗಾರದಲ್ಲಿ ಭಾಗವಹಿಸುವ ಎಲ್ಲ ಅಧಿಕಾರಿ/ಸಿಬ್ಬಂದಿಗಳಿಗೆ ಒಂದು ದಿನದ OOD ಸೌಲಭ್ಯವಿದೆ. ಈ ಕಾರ್ಯಾಗಾರದ ಸದುಪಯೋಗವನ್ನು ಸರ್ಕಾರಿ ಅಧಿಕಾರಿಗಳು, ನೌಕರರು ಪಡೆಯಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಅವರು ನೌಕರ ಭಾಂದವರಲ್ಲಿ ಮನವಿ ಮಾಡಿದ್ದಾರೆ.



