8.4 C
New York
Tuesday, October 28, 2025

Buy now

spot_img

ಗದಗ : ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ

ಗದಗ  ಅಕ್ಟೋಬರ್ 27 : ಕರ್ನಾಟಕ ಲೋಕಾಯುಕ್ತ ಗದಗ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಇವರುಗಳ ಸಹಯೋಗದಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ-2025ನ್ನು ಸೋಮವಾರ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಶ್ರೀ ಬನಪ್ಪ ಸಂಕಪ್ಪ ಸಂಕಣ್ಣವರ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎನ್ ಶಿವನಗೌಡ್ರ ಉದ್ಘಾಟಿಸಿದರು. ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕರು ಯಾವ ಯಾವ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ಸಿ.ಎಸ್.ಶಿವನಗೌಡ್ರ ವಿವರಿಸಿದರು.

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಶರಣಬಸಪ್ಪ, ಎಸ್. ಗುಡಿಮನಿ ಅಧ್ಯಕ್ಷತೆ ವಹಿಸಿದ್ದರು.

ಪೊಲೀಸ್ ಉಪಾಧೀಕ್ಷಕ ವಿಜಯ ಬಿರಾದಾರ ಅವರು ಮಾತನಾಡಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹವನ್ನು ಆಚರಿಸುವ ಉದ್ದೇಶವನ್ನು ವಿವರಿಸಿದರು. ಭ್ರಷ್ಟಾಚಾರ ತಡೆಗಟ್ಟದೇ ಹೋದರೆ ಸಮಾಜದ ಪ್ರತಿ ವರ್ಗದ ನಾಗರಿಕರು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಮುಂದಿನ ಪೀಳಿಗೆಯವರು ಸಮಾಜದಲ್ಲಿ ಮತ್ತು ಸಾರ್ವಜನಿಕ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಲೋಕಾಯುಕ್ತ ಕಚೇರಿಯ ಅಧಿಕಾರಿ ಪರಮೇಶ್ವರ ಜಿ ಕವಟಗಿ, ಶ್ರೀಮತಿ ಎಸ್ ಎಸ್ ತೇಲಿ, ಪೊಲೀಸ್ ಇನ್ಸಪೆಕ್ಟರ್ ಯು.ಎನ್.ಸಂಗನಾಳ, ನೀಲಕಂಠಪ್ಪ ಪಿ ಅಂಬಿಗೇರ, ಮುತರೆಡ್ಡಿ, ಬಾರಡ್ಡಿ , ಮಂಜುನಾಥ ಎಸ್ ದಿಡಗೂರ, ಚನ್ನವೀರಪ್ಪ ಹುಣಸಿಕಟ್ಟಿ, ಜಯದೇವ ಮೆಣಸಗಿ, ಪ್ರಕಾಶ ಉಗಲಾಟದಿ, ಸಿದ್ರಾಮಪ್ಪ ಉಮಚಗಿ , ರಾಘವೇಂದ್ರ ಕಾಲವಾಡ, ಅಶೋಕ ಎಸ್ ಸಂಕಣ್ಣವರ, ಅರವಿಂದ ಕಾಮತ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news