ಗದಗ ಅಕ್ಟೋಬರ್ 17: ರಾಜ್ಯ ಸರ್ಕಾರವು ಕೃಷಿ ಇಲಾಖೆಯ ಮುಖಾಂತರ ಜಾರಿಗೊಳಿಸಿರುವ ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮವು ಆಯಾ ಸ್ಥಳೀಯ ಪ್ರದೇಶಕ್ಕೆ ಸೂಕ್ತವಾದ ದೇಸಿ ತಳಿಗಳನ್ನು ಗುರುತಿಸಿ, ಕಣ್ಮರೆಯಾಗುತ್ತಿರುವ ದೇಸಿ ತಳಿಗಳನ್ನು ಸಂರಕ್ಷಣೆ ಮಾಡುವ ಹಾಗೂ ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡುವ ಉದ್ದೇಶದಿಂದ ಜಾರಿಗೊಳಿಸಲಾಗಿದ್ದು, ಗದಗ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಟಾನಗೊಂಡಿರುತ್ತದೆ. ರೈತರ ಸಂಪ್ರದಾಯಿಕ, ಪರಂಪರೆ, ಜಾನಪದ ಪ್ರಭೇದಗಳು ಎಂದು ಕರೆಯಲ್ಪಡುವ ದೇಸಿ ತಳಿಗಳು ಸ್ಥಳೀಯ/ಸಾಂಪ್ರದಾಯಿಕ ಕೃಷಿ ಪದ್ದತಿಯಿಂದ ಅಭಿವೃದ್ಧಿ ಪಡಿಸಿದ ತಳಿಗಳಾಗಿರುತ್ತವೆ. ಇವುಗಳು ವಿಶಿಷ್ಟ ಗುಣಲಕ್ಷಣಗಳಾದ ಋತುಮಾನಕ್ಕೆ ಹೊಂದಿಕೊAಡು ಬೆಳೆಯುವ, ಮಣ್ಣಿನಿಂದ ಕಡಿಮೆ ಪೋಷಕಾಂಶವನ್ನು ಪಡೆಯುವ, ರೋಗ ನಿರೋಧಕ ಮತ್ತು ಬರ ನಿರೋಧಕ ಶಕ್ತಿ ಹೊಂದಿರುವ, ಕಡಿಮೆ ಕೀಟ ಭಾದೆಯೊಂದಿಗೆ ಹೆಚ್ಚು ಇಳುವರಿ ನೀಡುವ ತಳಿಗಳಾಗಿದ್ದು, ಅಧಿಕ ನಾರು ಅಂಶ, ಔಷಧೀಯ ಅಂಶ ಹೊಂದಿದ್ದು ಪೋಷಕಾಂಶಗಳ ಆಗರವಾಗಿವೆ.
ಆಯಾ ಸ್ಥಳೀಯ ಪ್ರದೇಶಕ್ಕೆ ಸೂಕ್ತವಾದ ಕಾರಣ ಕೆಲವೇ ರೈತರು ದೇಸಿತಳಿಗಳ ಕೃಷಿ ಮಾಡುವುದನ್ನು ತಲತಲಾಂತರದಿAದ ಮುಂದುವರೆಸಿರುತ್ತಾರೆ. ಇಂತಹ ಕಣ್ಮರೆಯಾಗುತ್ತಿರುವ 50 ದೇಸಿ ತಳಿಗಳನ್ನು ಗುರುತಿಸಿ ಅಗತ್ಯ ಪ್ರಮಾಣದ ಬಿತ್ತನೆ ಬೀಜವನ್ನು ಪಡೆದು ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನ ಬೀಜ ಬ್ಯಾಂಕಿನಲ್ಲಿ ಸಂಗ್ರಹಿಸಲು ಕಳುಹಿಸಲಾಗಿದೆ. ಸದರಿ ಯೋಜನೆಯಡಿ ಜಿಲ್ಲೆಯಲ್ಲಿ ದೇಸಿತಳಿಗಳನ್ನು ಸಂರಕ್ಷಿಸುವ 39 ರೈತರನ್ನು ಗುರುತಿಸಿ ಅವರಿಂದ ಅಗತ್ಯವಾದ ಮಾಹಿತಿಯನ್ನು ಪಡೆದು ಕೆ-ಕಿಸಾನ್ ಆಪ್ನಲ್ಲಿ ನೊಂದಾಯಿಸಲಾಗಿದೆ. ಹಿಂದಿನಿAದಲೂ ಸಂರಕ್ಷಿಸಿ ಕೃಷಿ ಮಾಡುತ್ತಿರುವ ರೈತರಿಗೆ ಹಾಗೂ ದೇಸಿ ತಳಿಗಳ ಜನಪ್ರಿಯತೆಗೆ ಬೆಂಬಲ ನೀಡುವ ಹಿನ್ನಲೆಯಲ್ಲಿ ಕೃಷಿ ಇಲಾಖೆ ಈ ಉತ್ತೇಜನ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಿರುತ್ತದೆ.
ಸದರಿ ಯೋಜನೆಯಡಿ ಬೆಳೆಗಳಾದ ಭತ್ತ, ರಾಗಿ, ಜೋಳ, ತೊಗರಿ, ಹುರಳಿ, ಅವರೆ, ಅಲಸಂದೆ, ಮಡಕೆಕಾಳು, ಹುಚ್ಚೆಳ್ಳು, ಕುಸುಬೆ, ಎಳ್ಳು, ನವಣೆ, ಸಾಮೆ, ಊದಲು, ಕೊರ್ಲೆ,ಹಾರಕ, ಬರಗು, ಮತ್ತು ಸಲಹಾ ಸಮಿತಿ ಶಿಫಾರಸ್ಸು ಮಾಡಿದ ಇತರೆ ಬೆಳೆಗಳ ದೇಸೀ ತಳಿಗಳನ್ನು ನೊಂದಣಿಗಾಗಿ ಆಯ್ಕೆ ಮಾಡಿಕೊಳ್ಳ ಬಹುದಾಗಿದ್ದು, ರೈತರು ಈ ಬೆಳೆಗಳ ದೇಸಿತಳಿಗಳನ್ನು ಸಂರಕ್ಷಣೆ ಮಾಡಿದಲ್ಲಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಲು ಗದಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ಶ್ರೀಮತಿ ಜಿ.ಎಚ್.ತಾರಾಮಣಿ ಇವರು ಕೋರಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಶ್ರೀಮತಿ ಸೀಮಾ ಸವಣೂರು, ಸಹಾಯಕ ಕೃಷಿ ನಿರ್ದೇಶಕರು ದೂ.ಸಂ: 8277931425 ಅಥವಾ Ã.ವೀರೇಶ ಸೊಪ್ಪಿನ್ ಕೃಷಿ ಅಧಿಕಾರಿ ದೂ.ಸಂ: 8277151421 ಸಂಪರ್ಕಿಸ ಬಹುದಾಗಿದೆ.