14.4 C
New York
Saturday, October 18, 2025

Buy now

spot_img

ಗಜೇಂದ್ರಗಡ : ಇ-ಕೆವೈಸಿ ಮಾಡಿಸದಿದ್ದರೆ ಉದ್ಯೋಗ ಚೀಟಿ ರದ್ದಾಗಲಿದೆ

ಗಜೇಂದ್ರಗಡ : ನರೇಗಾದಲ್ಲಿ ಕೂಲಿಕಾರರು ಕೆಲಸ ಮಾಡಬೇಕಾದರೆ ಇ-ಕೆವೈಸಿ ಮಾಡಿಕೊಳ್ಳಬೇಕು. ಇ-ಕೆವೈಸಿ ಮಾಡಿಸದಿದ್ದರೆ ಕೂಲಿಕಾರರ ಉದ್ಯೋಗ ಚೀಟಿ(ಜಾಬ್ ಕಾರ್ಡ್) ರದ್ದಾಗಲಿದೆ ಎಂದು ಸ್ವತಃ ಕೂಲಿಕಾರರ ಮನೆ-ಮನೆಗೆ ತೆರಳಿ ಇ-ಕೆವೈಸಿ ಮಾಡಿ ನರೇಗಾ ಕೂಲಿಕಾರರಲ್ಲಿ ಗಜೇಂದ್ರಗಡ ತಾಲೂಕು ಪಂಚಾಯತ ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕರು ಬಸವರಾಜ ಬಡಿಗೇರ ಜಾಗೃತಿ ಮೂಡಿಸಿದರು.

ತಾಲೂಕಿನ ಇಟಗಿ, ಸೂಡಿ ಮತ್ತು ಹಾಲಕೆರೆ ಗ್ರಾಪಂ ಗಳಿಗೆ ಖುದ್ದು ತಾಪಂ ಎಡಿ ಅವರೇ ಭೇಟಿ ನೀಡಿ ಇಂದು ಇ-ಕವೈಸಿ ಕಾರ್ಯದಲ್ಲಿ ತೊಡಗಿಸಿಕೊಂಡು ಕೂಲಿಕಾರರಲ್ಲಿ ತಿಳುವಳಿಕೆ ಮೂಡಿಸಿದರು.

ಇಟಗಿ ಗ್ರಾಪಂ ವ್ಯಾಪ್ತಿಯಲ್ಲಿ ಕೂಲಿಕಾರರ ಮನೆಗಳಿಗೆ ತೆರಳಿದ ಎಡಿ ಬಸವರಾಜ ಬಡಿಗೇರ ಅವರು, ನರೇಗಾ ಕೆಲಸದ ಬದುವಿನ ಕೆಲಸ ಸೇರಿದಂತೆ ಎಲ್ಲ ಕಾಮಗಾರಿಗಳಲ್ಲಿ ಕೆಲಸ ಮಾಡಲು ಇ-ಕೆವೈಸಿ ಕಡ್ಡಾಯವಾಗಿದೆ. ಇವಾಗಲೇ ಇ-ಕೆವೈಸಿ ಮಾಡಿಸಿಕೊಂಡಲ್ಲಿ ನರೇಗಾದಲ್ಲಿ ಕೆಲಸ ಮಾಡಲು ಅವಕಾಶವಿದೆ. ಇ-ಕೆವೈಸಿ ಮಾಡಿಸದಿದ್ದರೆ ನರೇಗಾದಲ್ಲಿ ಕೆಲಸ ಮಾಡಲು ಬರಲ್ಲ ಅಂತ ತಿಳಿಸಿದರು.

ಸೂಡಿ ಗ್ರಾಪಂ ಗೆ ಭೇಟಿ ನೀಡಿದ ಬಸವರಾಜ ಬಡಿಗೇರ ಅವರು, ಇ-ಕೆವೈಸಿ ಕಾರ್ಯದಲ್ಲಿ ತೊಡಿಗಿರುವ ಸಿಬ್ಬಂದಿಗಳ ಕಾರ್ಯವನ್ನು ಪರಿಶೀಲಿಸಿದರು. ಸರ್ವರ್ ಸಮಸ್ಯೆಯಿರುವ ಬಗ್ಗೆ ಸಿಬ್ಬಂದಿ ಬಡಿಗೇರ ಅವರ ಗಮನಕ್ಕೆ ತಂದರು. ಬೆಳಿಗ್ಗೆ ೬ ರಿಂದ ೮ ಗಂಟೆ ಒಳಗಾಗಿ ಹೆಚ್ಚಿನ ಇ-ಕೆವೈಸಿ ಮಾಡಿ ಈ ಸಂದರ್ಭದಲ್ಲಿ ಸರ್ವರ್ ಸಮಸ್ಯೆ ಇರಲ್ಲ ಅಂತ ತಿಳಿಸಿದರು.

ಹಾಲಕೆರೆ ಗ್ರಾಪಂ ಗೆ ಭೇಟಿ ನೀಡಿದ ಬಡಿಗೇರ ಅವರು, ತಾಲೂಕಿನಲೇ ಕಡಿಮೆ ಪ್ರಗತಿ ಸಾಧಿಸಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದರು. ಮುಂದಿನ ಎರಡು ದಿನಗಳಲ್ಲಿ ಪ್ರಗತಿ ಸಾಧಿಸುವಂತೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕ ಪ್ರಕಾಶ ಮ್ಯಾಕಲ್, ಇಟಗಿ, ಸೂಡಿ, ಹಾಲಕೆರೆ ಗ್ರಾಪಂ ಗಳ ಪಿಡಿಒ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news