14.4 C
New York
Saturday, October 18, 2025

Buy now

spot_img

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

ಗದಗ  ಅಕ್ಟೋಬರ್ 16. : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2025-26 ನೇ ಸಾಲಿಗೆ ಮತಿಯ ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ್, ಭೌದ್ಧರು, ಸಿಖ್ಖರು, ಫಾರ್ಸಿಗಳ ಸಮುದಾಯದವರಿಗೆರಾಜ್ಯದಲ್ಲಿಕನಿಷ್ಠ 10 ವರ್ಷ ವಾಸವಾಗಿರುವ. 18 ರಿಂದ 55 ವರ್ಷ ವಯೋಮಿತಿವುಳ್ಳ ಆಸಕ್ತರಿಂದ. ಈ ಕೆಳಗಿನ ಸಾಲದ ಯೋಜನೆಗಳಿಗೆ ಸಾಲ ಸೌಲಭ್ಯಒದಗಿಸಲು ನಿಗಮದಅಂತರಜಾಲ https://kmdconline.karnataka.gov.in ರಲ್ಲಿಅರ್ಜಿಗಳನ್ನುಅಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸುವ ದಿನಾಂಕವನ್ನು ಅಕ್ಟೋ ಬರ್ 21 ರವರೆಗೆ ವಿಸ್ತರಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರಕುಟುಂಬದ ಸದಸ್ಯರು ಯೋಜನೆಗಳಿಗೆ ಅರ್ಹರಾಗಿರುವುದಿಲ್ಲ.

ಶ್ರಮಶಕ್ತಿ ಸಾಲ ಯೋಜನೆ:- ಈ ಯೋಜನೆಯಡಿಯಲ್ಲಿಅಲ್ಪಸಂಖ್ಯಾತ ವರ್ಗದಕುಲಕಸಬುದಾರರು, ತಮ್ಮ ಸಂಪ್ರದಾಯಕ ಮಾರುಕಟ್ಟೆ ಹಾಗೂ ವೃತ್ತಿಕೌಶಲ್ಯತೆಗೆಅನುಗುಣವಾಗಿ ಅಭಿವೃಧಿಗೊಳಿಸುವ ಸಲುವಾಗಿ ನಿಗಮದಿಂದಶೇ 4ರ ಬಡ್ಡಿದರದಲ್ಲಿರೂ 50,000/- ರವರಗೆ ಸಾಲ ಸೌಲಭ್ಯವನ್ನುಕಲ್ಪಿಸಲಾಗುತ್ತದೆ. ಈ ಯೋಜನೆಯಲ್ಲಿ ಶೇ 50ರಷ್ಟು ಸಾಲವನ್ನು 36 ತಿಂಗಳನಲ್ಲಿ ಫಲಾನುಭವಿಯು ಮುರುಪಾವತಿ ಮಾಡಿದಲ್ಲಿ, ಉಳಿದ ಶೇ 50ರಷ್ಟು ಹಣವನ್ನು ‘ಬ್ಯಾಕ್‌ಎಂಡ್ ಸಹಾಯಧನವನ್ನಾಗಿ ಪರಿಗಣಿಸಲಾಗುತ್ತದೆ. ಫಲಾನುಭವಿಯುತಾನು ಪಡೆದ ಸಾಲವನ್ನು 36 ತಿಂಗಳೊಳಗಾಗಿ ಮರುಪಾವತಿ ಮಾಡಲು ವಿಪರರಾದಲ್ಲಿ ಶೇ 50ರಷ್ಟು ಬ್ಯಾಕ್‌ಎಂಡ್ ಸಹಾಯಧನವನ್ನು ಸಹ ಸಾಲವೆಂದು ಪರಿಗಣಿಸಲಾಗುತ್ತದೆ.

ವೃತ್ತೀ ಪ್ರೋತ್ಸಾº ಯೋಜನೆ:-ಕರ್ನಾಟಕಅಲ್ಪಸಂಖ್ಯಾತರ ಅಬಿವೃದ್ಧಿ ನಿಗಮದಿಂದ ವೃತ್ತಿ ಪ್ರೋತ್ಸಾಹ ಸಾಲ ಯೋಜನೆಯಡಿಒಟ್ಟುರೂ.1,00,000/- ಸಾಲದೊಂದಿಗೆ ಬದಲಿಯಿಸಿದ ಇದರಲ್ಲಿ50% ಸಾಲ ಮತ್ತು 50% ವಿವಿಧಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ನೀಡಲಾಗುವುದು.

ಸ್ವಾವಲಂಬಿ ಸಾರಥಿ ಯೋಜನೆ:- ಈ ಯೋಜನೆಯಡಿ ಬ್ಯಾಂಕುಗಳಿAದ ಮಂಜೂರಾತಿ ನೀಡಿದಪಡೆದಟ್ಯಾಕ್ಸಿ/ಗೂಡ್ಸ್/ಪ್ಯಾಸೆಂಜರ್‌ಆಟೋರಿಕ್ಷಾವಾಹನಗಳನ್ನು ಖರೀದಿಸಲು ಪ್ರತಿ ಫಲಾನುಭವಿಗೆ ವಾಹನದ ಮೌಲ್ಯದಶೇ 50ರಷ್ಟು ಅಥವಾಗರಿಷ್ಟರೂ. 3,00,000/- ರವರಗೆ ಸಹಾಯಧನ ನೀಡಲಾಗುತ್ತದೆ. ಪ್ಯಾಸೆಂಜರ್‌ಆಟೋರಿಕ್ಷಾ ವಾಹನಕ್ಕೆ ಗರಿಷ್ಠ ರೂ,75000/- ಗಳನ್ನು ಸಹಾಯಧನ ನೀಡಲಾಗುತ್ತದೆ.ವಾಹನದ ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ಪಡೆದುಕೊಂಡ ಬಗ್ಗೆ ಬ್ಯಾಂಕ್ ಪತ್ರವನ್ನು ಸಲ್ಲಿಸಬೇಕು.

ವಿದೇಶಿ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ಬಡ್ಡಿರಹಿತ ಸಾಲ ಯೋಜನೆ:- ಈ ಯೋಜನೆಯು ವಿದೇಶದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಮಾಡಬಯಸುವಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಸಾಲವನ್ನು ನೀಡಲಾಗುವುದು.
ರೇಷ್ಮೆ ನೂಲು ಬಿಚ್ಚಾಣಿಕೆಉದ್ಯಮಕ್ಕೆ ಪ್ರೋತ್ಸಾಹ:- ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿತೊಡಗಿರುವಅಲ್ಪಸಂಖ್ಯಾತ ಫಲಾನುಭವಿಗಳನ್ನು ಪ್ರೋತ್ಸಾಹಿಸಿ ಅವರಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವ ಸಲುವಾಗಿ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆಅಗತ್ತಯವಿರುವದುಡಿಮೆ ಬಂಡವಾಳ (Woಡಿಞiಟಿg ಅಚಿಠಿiಣಚಿಟ) ಮತ್ತು ಮೂಲಭೂತ ಸೌಕರ್ಯವನ್ನುಒದಗಿಸಲು ನಿಗಮದಿಂದರೂ.2.00 ಲಕ್ಷದವರಗೆ ಸಾಲ ಸಹಾಯಧನಒದಗಿಸಲಾಗುವುದು. ಇದರಲ್ಲಿಶೇ.50 ಸಹಾಯಧನವಾಗಿರುತ್ತದೆ.

ನೇರಸಾಲ ಯೋಜನೆ: ಈ ಯೋಜನೆಯಡಿಯಲ್ಲಿ ವ್ಯಾಪರ/ಉದ್ದಿಮೆ ಚಟುವಟಿಕೆ ಕೈಗೊಳ್ಳಲು ಬಯಸುವ ಫಲಾನುಭವಿಗಳಿಗೆ ಆಸ್ತಿಯ (ಕಟ್ಟಡ/ಭೂಮಿ) ಅಡಮಾನದ ಮೇಲೆ ಸಾಲವನ್ನುಒದಗಿಸಲಾಗುವುದು. ವಯಸ್ಯು 18 ರಿಂದ 55 ವರ್ಷದೊಳಗಿರಬೇಕು.ಕುಟುಂಬದ ವಾರ್ಷಿಕಆದಾಯರೂ.8.00 ಲಕ್ಷಗಳಿಗಿಂತ ಕಡಿಮೆಇರುವಅರ್ಜಿದಾರರಿಗೆ ರೂ.20.00 ಲಕ್ಷದವರಗೆ ಶೇ4% ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುವುದು.ಕುಟುಂಬದವಾರ್ಷಿಕಆದಾಯ ರೂ.8.00 ರಿಂದ 15.00 ಲಕ್ಷವರೆಗೆಇರುವಅರ್ಜಿದಾರರಿಗೆ ರೂ.20.00 ಲಕ್ಷವರೆಗೆ ಶೇ 6 ಬಡ್ಡಿದರದಲ್ಲಿ ಸಾಲ ನೀಡಲಾಗುವುದು.

ಸಾಂತ್ವನಯೋಜನೆ: 2025-26 ನೇ ಸಾಲಿಗೆ ಅಲ್ಪಸಂಖ್ಯಾತ ಸಮುದಾಯದರಾಜ್ಯದಲ್ಲಿನ ವಿಶೇಷ ಹಾಗೂ ದುರ್ಬಲ ವರ್ಗದ ಫಲಾನುಭವಿಗಳಿಗೆ ಗರಿಷ್ಟ 5.00 ಲಕ್ಷರೂರವರಗೆಘಟಕ ವೆಚ್ಚಕ್ಕೆ ಶೇ50 ರಷ್ಟು ಸಹಾಯಧನ ಮತ್ತುಶೇ.3ರ ಬಡ್ಡಿದರದಲ್ಲಿಶೇ50 ರಷ್ಟು ಸಾಲವನ್ನು ನೀಡಲಾಗುವುದು. ಹಾಗೂ ರಾಜ್ಯದಲ್ಲಿ ಕೋಮು ಗಲಭೆ ಮತ್ತು ಕೋಮು ಹಿಂಸಾಚಾರದ ಸಂದರ್ಭಗಳಲ್ಲಿ ಹಾಗೂ ಪರಿಸರ ವಿಕೋಪಗಳಿಂದ ವ್ಯಾಪಾರ ಕೇಂದ್ರಗಳು ಹಾಗೂ ವಾಸದ ಮನೆಗಳು ನಾಶ ಅಥವಾ ಹಾನಿಗೊಳಗಾಗಿದ್ದರೆ ಅಂತಹ ಪ್ರಕರಣಗಳಲ್ಲಿ ಕನಿಷ್ಟ ರೂ.2.00 ಲಕ್ಷ ನಷ್ಟವಾಗಿದ್ದರೆ ಸಾಲ ಸೌಲಭ್ಯಒದಗಿಸಲಾಗುವುದು.

ಅರ್ಹ ಅಲ್ಪಸಂಖ್ಯಾತರ ಜನರು ಮೇಲ್ಕಂಡ2025-26 ನೇ ಸಾಲಿನ ವಿವಿಧ ಯೋಜನೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ:21-10-2025 ವಿಸ್ತರಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅರ್ಜಿ ಹಾಗೂ ದಾಖಲಾತಿಗಳನ್ನು ನಕಲು ಪ್ರತಿಯನ್ನುಜಿಲ್ಲಾಕಛೇರಿಗೆ ಸಲ್ಲಿಸಲುಅಗತ್ಯವಿರುವುದಿಲ್ಲ. ಹಾಗೂ ಜಿಲ್ಲಾಕಛೇರಿಯಲ್ಲಿಯಾವುದೇ ಅರ್ಜಿಗಳ ಜೊತೆ ದಾಖಲಾತಿಗಳನ್ನು ಸ್ವೀಕರಿಸುವುದಿಲ್ಲ. ಹಾಗೂ ನಿಗಮದಅಂತರಜಾಲ https:kmdconline.karnataka.gov.in ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:08372-295147 ಸಂಪರ್ಕಿಬಹುದಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news