ಗದಗ ಅ.10 : ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರವು, ಮಧ್ಯಸ್ಥಿಕೆ ಮತ್ತು ಸಂಧಾನ ಯೋಜನಾ ಸಮಿತಿ (ಎಂ.ಸಿ.ಪಿ.ಸಿ), ಗೌರವಾನ್ವಿತ ಭಾರತದ ಸರ್ವೋಚ್ಛ ನ್ಯಾಯಾಲಯದೊಂದಿಗೆ ವಿಶೇಷ ಮಧ್ಯಸ್ಥಿಕೆ ಅಭಿಯಾನ ರಾಷ್ಟçಕ್ಕಾಗಿ 90 ದಿನಗಳ ಕಾರ್ಯಚರಣೆಯನ್ನು ಗೌರವಾನ್ವಿತ ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಮತ್ತು ಗೌರವಾನ್ವಿತ ನ್ಯಾಯಮೂರ್ತಿಗಳು ಭಾರತದ ಸರ್ವೋಚ್ಛ ನ್ಯಾಯಾಲಯ ಹಾಗೂ ಕಾರ್ಯನಿರ್ವಾಹಕ ಅಧ್ಯಕ್ಷರು, ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಅಧ್ಯಕ್ಷರು, ಎಂಸಿಪಿಸಿ ಹಾಗೂ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು, ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯ ಮತ್ತು ಪ್ರಧಾನ ಪೋಷಕರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾರ್ಯನಿರ್ವಾಹಕ ಅಧ್ಯಕ್ಷರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ರವರ ನಿರ್ದೇಶನದಂತೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಮಧ್ಯಸ್ಥಿಕೆ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದ್ದು, ಮಧ್ಯಸ್ಥಿಕೆ-ರಾಷ್ಟçಕ್ಕಾಗಿ 90 ದಿನಗಳ ಕಾರ್ಯಚರಣೆ ಮೂಲಕ ಉಚ್ಛ ನ್ಯಾಯಾಲಯಗಳು ಎಲ್ಲಾ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಮಧ್ಯಸ್ಥಿಕೆ ಪ್ರಕ್ರಿಯೆ 1 ನೇ ಜುಲೈ 2025 ರಿಂದ 06ನೇ ಅಕ್ಟೋಬರ್ 2025 ರವರೆಗೆ ಹಮ್ಮಿಕೊಳ್ಳಲಾಗಿತ್ತು
ರಾಷ್ಟçಕ್ಕಾಗಿ ವಿಶೇಷ ಅಭಿಯಾನದಡಿಯಲ್ಲಿ ಗದಗ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳ ಮಧ್ಯಸ್ಥಿಕೆ ಕೇಂದ್ರಕ್ಕೆ ಬಂದ ಒಟ್ಟು 1379 ಪ್ರಕರಣಗಳಲ್ಲಿ 123 ಪ್ರಕರಣ ಇತ್ಯರ್ಥಗೊಂಡಿವೆ, ಎಂದು ಪ್ರಭಾರ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅದs್ಯಕ್ಷರಾದ ಗಂಗಾಧರ ಸಿ.ಎಮ್ ರವರು ತಿಳಿಸಿದರು.
90 ದಿನಗಳ ಮಧ್ಯಸ್ಥಿಕೆಯ ರಾಷ್ಟçಕ್ಕಾಗಿ ವಿಶೇಷ ಅಭಿಯಾನದಲ್ಲಿ 375 ವೈವಾಹಿಕ ವಿವಾದಗಳಲ್ಲಿ 288 ಪ್ರಕರಣಗಳು ಮಧ್ಯಸ್ಥಿಕೆ ಕೇಂದ್ರಕ್ಕೆ ಬಂದಿದ್ದು, ಇವುಗಳ ಪೈಕಿ 06 ಪ್ರಕರಣಗಳು ಇತ್ಯರ್ಥವಾಗಿವೆ, 271 ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ 45 ಪ್ರಕರಣಗಳು ಮಧ್ಯಸ್ಥಿಕೆಗೆ ಬಂದಿದ್ದು 7 ಪ್ರಕರಣಗಳು ಇತ್ಯರ್ಥವಾಗಿವೆ, ಚೆಕ್‌ಬೌನ್ಸನ 2701 ಪ್ರಕರಣಗಳಲ್ಲಿ 309 ಮಧ್ಯಸ್ಥಿಕೆಗೆ ಬಂದಿದ್ದು ಅದರಲ್ಲಿ 41 ಪ್ರಕರಣಗಳು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥವಾಗಿವೆ, 295 ಕ್ರಿಮಿನಲ್ ಕಾಂಪೊAಡೆಬಲ್ ಪ್ರಕರಣಗಳಲ್ಲಿ 75 ಪ್ರಕರಣಗಳು ಮಧ್ಯಸ್ಥಿಕೆಗೆ ಬಂದಿದ್ದು ಅದರಲ್ಲಿ 12 ಪ್ರಕರಣಗಳು ಸಂಧಾನವಾಗಿವೆ, ಅದೇ ರೀತಿ ಸಾಲ ವಸೂಲಾತಿ 478 ಪ್ರಕರಣಗಳಲ್ಲಿ 17 ಪ್ರಕರಣಗಳು ಮಧ್ಯಸ್ಥಿಕೆಗೆ ಬಂದಿದ್ದು ಅದರಲ್ಲಿ 2 ಪ್ರಕರಣಗಳು ಇತ್ಯರ್ಥವಾಗಿವೆ, ಅದೇ ರೀತಿ 2603 ಪಾಲುವಾಟ್ನಿ ವ್ಯಾಜ್ಯಗಳಲ್ಲಿ 293 ಪ್ರಕರಣಗಳು ಮಧ್ಯಸ್ಥಿಕೆಗೆ ಬಂದಿದ್ದು ಅದರಲ್ಲಿ 33 ಪ್ರಕರಣಗಳು ಇತ್ಯರ್ಥವಾಗಿವೆ, ಅದೇ ರೀತಿ ಇತರೆ 4214 ಸಿವಿಲ್ ವ್ಯಾಜ್ಯಗಳಲ್ಲಿ 336 ಪ್ರಕರಣಗಳು ಮಧ್ಯಸ್ಥಿಕೆಗೆ ಬಂದಿದ್ದು ಅದರಲ್ಲಿ 22 ಪ್ರಕರಣಗಳು ಸಂಧಾನಗೊAಡಿವೆ.
ಗದಗ ಜಿಲ್ಯಾದಂತ್ಯ ಈ ಅಭಿಯಾನದಲ್ಲಿ ಒಟ್ಟು 123 ಪ್ರಕರಣಗಳು ರಾಜೀ ಮೂಲಕ ಇತ್ಯರ್ಥಗೊಂಡಿರುತ್ತವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ದಿವಾಣಿ ನ್ಯಾಯಾಧೀಶರು ಸಿ.ಎಸ್.ಶಿವನಗೌಡ್ರ ರವರು ತಿಳಿಸಿರುತ್ತಾರೆ.