ಗದಗ : ಗಂಡ ಹೆಂಡತಿ ಜಗಳದಲ್ಲಿ ಹೆಂಡತಿಯನ್ನು ಕೊಲೆಗೈದ ಗಂಡ ಈ ಘಟನೆ ಗದಗ ತಾಲೂಕಿನ ಬಿಂಕದ ಕಟ್ಟಿ ಗ್ರಾಮದಲ್ಲಿ ಜರುಗಿದೆ.
ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಬೀಸುವ ಕಲ್ಲು ತಲೆ ಮೇಲೆ ಎತ್ತಿ ಹಾಕಿದ ನಂತರ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಕಳೆದ ಹಲವು ದಿನಗಳಿಂದ ಗಂಡ ಹೆಂಡತಿ ನಡುವೆ ಆಗಾಗ ಜಗಳ ಆಗುತ್ತಿತ್ತು ಎನ್ನಲಾಗಿದ್ದು, ಇಂದು ಮಧ್ಯಾಹ್ನ ಊಟ ಮಾಡಿದ ನಂತರ ಮಕ್ಕಳು ಮನೆಯ ಹೊರಗೆ ಆಟವಾಡಲು ಹೋಗಿದ್ದಾಗ ಸ್ವಾತಿಯ ಕೊಲೆಯಾಗಿದೆ.ಸ್ವಾತಿ ಅಲಿಯಾಸ್ ಯಲ್ಲವ್ವ (42) ಭೀಕರವಾಗಿ ಕೊಲೆಗೀಡಾದ ಮಹಿಳೆ.
ಸಾರಿಗೆ ಘಟಕದಲ್ಲಿ ನಿರ್ವಾಹಕನಾಗಿದ್ದ ರಮೇಶ್ ಬೂದಪ್ಪ ನರಗುಂದ ಕೊಲೆ ಮಾಡಿದ ಆರೋಪಿ ಎನ್ನಲಾಗಿದೆ. ಅಡುಗೆ ಮನೆ ರಕ್ತ ಮಾಯವಾಗಿತ್ತು, ಸ್ಥಳೀಯರು ಈ ದೃಶ್ಯ ನೋಡಿ ಗಾಬರಿಯಾಗಿದ್ದು, ಸುದ್ದಿ ತಿಳಿದು ಎಸ್ಪಿ ರೋಹನ್ ಜಗದೀಶ್ ಹಾಗೂ ) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.