ಗದಗ : ಇಂದು ಗದಗ ,ಬೆಟಗೇರಿ: ಅಂಜುಮನ್-ಏ-ಇಸ್ಲಾಂ ಕಮೀಟಿಯ ಆಡಳಿತ ಮಂಡಳಿಯ ಸದಸ್ಯತ್ವದ ಚುನಾವಣೆಯು ರವಿವಾರ ಬೆಳಿಗ್ಗೆ 8.00ರಿಂದ ಸಂಜೆ 4.00ರವರೆಗೆ ಮತದಾನ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಭರ್ಜರಿಯಾಗಿ ನಡೆಯಿತ್ತು ಅದರಂತೆ ಮತದಾರರು ತಂಡೋಪ ತಂಡವಾಗಿ ಶಾಂತಿಯಿಂದ ಚುನಾವಣಾ ತಯಾರಿ ಉತ್ಸಾಹಭರಿತ ವಾತಾವರಣದಲ್ಲಿ ಸಾಗುತ್ತಿದ್ದು, ಸಮಾಜದ ಅಭಿವೃದ್ಧಿ ಹಾಗೂ ಸಂಸ್ಥೆಯ ಸುಧಾರಣೆಯ ಧ್ಯೇಯದೊಂದಿಗೆ ಇಂದು ಬೆಳಗ್ಗೆಯಿಂದ ಉತ್ಸಾಹ ಭರಿತವಾಗಿ ಮತದಾರರು ಆಗಮಿಸಿ ಮತದಾನ ಮಾಡಿದರು.
ಇವತ್ತೇ ಸಂಜೆ 6.ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭವಾಗಿ ಒಂದೇ ಹಂತದಲ್ಲಿ 21 ಬೂತಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿ ರಾತ್ರಿ 10.33 ಕ್ಕೆ ಮುಕ್ತಾಯವಾಗಿ ಅತ್ಯಧಿಕ ಮತ ಗಳಿಸಿ ಜಯಶಾಲಿಗಳಾದ ಸದ್ಯಸರು ಆಯ್ಕೆಯಾಗಿದ್ದಾರೆ
(ಜಯಶಾಲಿಗಳಾದ ಸದ್ಯಸರು). ( ಪಡೆದ ಮತ)
1) ಅನ್ವರ್ ಬಾಗೇವಾಡಿ (3219)
2)ಎ ಆರ್ ಕೊಪ್ಪಳ. (2778)
3) ಎ.ಕೆ ಮುಲ್ಲಾ. (2636)
4) ದಾವಲಸಾಬ ಮಲಸಮುದ್ರ (2358)
5)ಎಂ ಎಂ ಬೀಜಾಪೂರ (2066)
6) ಎಮ್ ಆರ್ ನಾರಯಣಕೇರಿ. (2003)
7) ಎಂ ಆರ್ ಸೊಂಪೂರ. ( 1942)
8)ಎಂ ಜೆ ಕದಡಿ. (1931)
9)ಎಚ್ ಜಿ ಕಾಗದಗಾರ. ( 1930)
10) ಆಸೀಪ್ ದಂಡಿನ. (1847)
11) ಸುಲೇಮಾನ್ ಮಾಳೇಕೋಪ್ಪ. (1826)
ಇದರಲ್ಲಿ ಇಂಕ್ವಿಲಾಬ್ ಗ್ರುಪ್ ದ 11 ಜನ ಸ್ಪರ್ಧೆಯಲ್ಲಿ 8 ಜನ ಜಯಶಾಲಿ ಆಗಿದ್ದಾರೆ.
ಅಲ್ ಮದೀನಾ ಗ್ರುಪ್ ದಲ್ಲಿ 11 ಜನ ಸ್ಪರ್ಧೆಯಲ್ಲಿ 3 ಜನ ಜಯಶಾಲಿ ಆಗಿದ್ದಾರೆ ಎಂದು ತಿಳಿದು ಬಂದಿದೆ.
21 ಬೂತಗಳ ಒಟ್ಟು ಅಸಿಂದು ಮತಗಳು 313 ಆಗಿದ್ದು ವಿಶೇಷ ಎನ್ನಬಹುದು.