ಗದಗ : ಲಕ್ಷ್ಮೇಶ್ವರದಲ್ಲಿ ಗಣಪತಿ ವಿಸರ್ಜನೆಯ ಬಂದೋಬಸ್ತ್ ಮುಗಿಸಿಕೊಂಡು ಬರುವಾಗ ತಾಲೂಕಿನ ಸೊರಟೂರ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದ್ದು. ಕತ್ತೆಕಿರುಬ ರಸ್ತೆ ದಾಟುವಾಗ ಪೊಲೀಸ್ ಜೀಪ್‌ಗೆ ಡಿಕ್ಕಿ ಹೊಡೆದ ಪರಿಣಾಮ ಜೀಪ್ ಪಲ್ಟಿಯಾಗಿ ಕತ್ತೆಕಿರುಬ ಸ್ಥಳದಲ್ಲೇ ಮೃತಪಟ್ಟಿದೆ.
ಜೀಪ್‌ನಲ್ಲಿ ಇದ್ದ ಮೂವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು
ಅಪಘಾತದಲ್ಲಿ ಎಎಸ್‌ಐ ಕಾಶಿಂಸಾಬ್ ಡಿ. ಹರಿವಾಣ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಸುಚಿರಾಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.ಇಂದು ಬೆಳಗ್ಗೀನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಲಕ್ಷ್ಮೇಶ್ವರದಿಂದ ಶಿರಹಟ್ಟಿ ಮಾರ್ಗವಾಗಿ ಗದಗ ಕಡೆಗೆ ಬರುತ್ತಿದ್ದ ಪೊಲೀಸ್ ಜೀಪ್ ಬೇಟಗೇರಿ ಠಾಣೆಯ ಎಎಸ್‌ಐ ಕಾಶಿಂಸಾಬ್, ವಾಯರ್‌ಲೆಸ್ ಪೊಲೀಸ್ ಇನ್ಸ್‌ಪೆಕ್ಟರ್ ಉಮೇಶಗೌಡ ಪಾಟೀಲ್ ಹಾಗೂ ಚಾಲಕ ಓಂನಾಥ್ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಎಎಸ್‌ಐ ಕಾಶಿಂಸಾಬ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹುಬ್ಬಳ್ಳಿಯ ಸುಚಿರಾಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಎಎಸ್ಐ ಕಾಶಿಂಸಾಬ ಹರಿವಾಣ ನಿಧನಕ್ಕೆ ಅಧಿಕಾರಿಗಳು ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.
ಬೆಟಗೇರಿ ಪೋಲಿಸ್ ಠಾಣೆ ಎಎಸ್ಐ ಕಾಶಿಂಸಾಬ.ದಾವಲಸಾಬ ಹರಿವಾಣ ಗೆ ಗದಗ ಎಸ್ಪಿ ಪೋಲಿಸ್ ಗೌರವ ನೀಡುವ ಮೂಲಕ ವಂದನೆ ಸಲ್ಲಿಸಿದರು.
ಈ ಘಟನೆ ಮುಳಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿತ್ತು.