ಗದಗ ೦೮: ಗದಗ-ಬೆಟಗೇರಿ ನಗರಸಭೆ ವಾರ್ಡ ನಂ. ೩೪ ರಲ್ಲಿರುವ ಉದ್ಯಾನವನ ಸ್ವಾತಂತ್ರ್ಯ ಗೊಸ್ಕರ ತನ್ನ ಜೀವನದ ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ನೆನಪಿಗಾಗಿ ನಗರದ ೩೪ನೇ ವಾರ್ಡಿನಲ್ಲಿ ಒಂದು ಉದ್ಯಾನವಿದ್ದು, ಅಲ್ಲಿರುವ ರಾಯಣ್ಣನ ನಾಮಫಲಕವನ್ನು ಕೆಲವು ಕಿಡಿಗೇಡಿಗಳು ಭಗ್ನಗೊಳಿಸಿದ್ದಾರೆ. ಮತ್ತು ತಂತಿ ಬೇಲಿಯನ್ನು ಕಿತ್ತಿ ಹಾಕಿದ್ದಾರೆ. ಉದ್ಯಾನವನ್ನು ಅತಿಕ್ರಮಣ ಮಾಡಿದ್ದಾರೆ. ಉದ್ಯಾನವನ ಈಗ ಕಸ ಚೆಲ್ಲುವ ಮತ್ತು ಹಂದಿಗಳ ತಾಣವಾಗಿ ಮಾರ್ಪಟ್ಟಿದೆ. ಗದಗ-ಬೆಟಗೇರಿ ನಗರಸಭೆಯ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರು. ಇತ್ತ ತಿರುಗಿ ನೋಡಿಲ್ಲ. ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನ ಹೆಸರಿನ ಉದ್ಯಾನವನವನ್ನು ನಿರ್ಲಕ್ಷö್ಯ ಧೋರಣೆ ತೋರಿದ್ದಾರೆ. ಈಗ ಆ ಉದ್ಯಾನವನ ಮಳೆಗಾಲದಲ್ಲಿ ಮಳೆ ನೀರು ತುಂಬಿ ಕೆರೆಯಂತಾಗಿದೆ. ಸರಾಗವಾಗಿ ಹೋಗುತ್ತಿರುವ ನೀರನ್ನು ಶಿವಾನಂದಮಠದ ಆಡಳಿತ ಮಂಡಳಿಯರು ನೀರು ಹೋಗದೆ ಹಾಗೆ ಕಟ್ಟಡ ಕಾಮಗಾರಿ ಮಾಡಿದ್ದಾರೆ.
ಗದಗ-ಬೆಟಗೇರಿ ನಗರಾಭಿವೃದ್ಧಿಕೋಶದವರ ಇತ್ತ ಗಮನಹರಿಸಿ ಸರಾಗವಾಗಿ ನೀರು ಹರಿದು ಹೋಗವ ಹಾಗೆ ದಾರಿ ಮಾಡಿಕೊಡಬೇಕು. ಸುತ್ತಮುತ್ತಲಿನ ನಿವಾಸಿಗಳಿಗೆ ಹೆಚ್ಚು ಮಳೆಯಾದರೆ ಮನೆಗೆ ನೀರು ನುಗ್ಗುವ ಸಾಧ್ಯತೆ ಇದೆ ಮುಂದೆ ಆಗುವ ಅನಾಹುತಗಳಿಗೆ ನಗರಸಭೆಯವರೆ ಕಾರಣರಾಗುವಿರಿ. ಕೂಡಲೆ ಎಚ್ಚೆತ್ತು ಜಿಲ್ಲಾಧಿಕಾರಿಗಳು ನಗರಸಭೆ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಆದೇಶಿಸಬೇಕು. ಇಲ್ಲವಾದಲ್ಲಿ ಅಗಸ್ಟ್ ೧೫ ರಂದು ವಾರ್ಡಿನ ನಾಗರಿಕರು ತಲೆಯ ಮೇಲೆ ಕಲ್ಲು ಹೊತ್ತು ಜಿಲ್ಲಾಡಳಿತದ ಭವನದ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.