13.4 C
New York
Thursday, October 23, 2025

Buy now

spot_img

ಗಜೇಂದಗಡ : ಮೊದಲ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೇಜವಾಬ್ದಾರಿ ಸಿಬ್ಬಂದಿಗಳಿಗೆ ಛಾಟಿ ಬೀಸಿದ ನೂತನ ಇಒ ಕಂದಕೂರ

ತಾಲೂಕಿನ ಪ್ರಗತಿಗೆ ಶ್ರಮಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ

ಗಜೇಂದಗಡ 🙁೦೬/೦೮/೨೦೨೫)ತಾಲೂಕಿನಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲ ಕಾರ್ಯಕ್ರಮಗಳನ್ನು ನಿಗದಿತ ಗುರಿಗೆ ಅನುಗೂಣವಾಗಿ ಸರಿಯಾದ ಸಮಯಕ್ಕೆ ಪ್ರಗತಿ ಸಾಧಿಸಬೇಕು. ಗುರಿಗೆ ಅನುಗೂಣವಾಗಿ ಪ್ರಗತಿಗೆ ಶ್ರಮಿಸದ ಅಧಿಕಾರಿಗಳ ವಿರುದ್ಧ ಕಡ್ಡಾಯವಾಗಿ ಕಠಿಣ ಕ್ರಮ ತಗೆದುಕೊಳ್ಳಲಾಗುವುದು. ಹಾಗೆಯೇ ಪ್ರಗತಿಗೆ ಶ್ರಮಿಸುವ ಅಧಿಕಾರಿಗಳನ್ನು ಗೌರವಿಸುವ ಕೆಲಸವನ್ನು ಮಾಡಲಾಗುವುದು ಎಂದು ಸಂಬಂಧಿಸಿದ ತಾಲೂಕಿನ ಅಧಿಕಾರಿಗಳ ವಿರುದ್ಧ ಮೊದಲ ಪ್ರಗತಿ ಪರಿಶೀಲನಾ ಸಭೆಯಲ್ಲಿ ನೂತನ ಇಒ ಚಂದ್ರಶೇಖರ ಬಿ, ಕಂದಕೂರು ಛಾಟಿ ಬೀಸಿದರು.

ತಾಲೂಕು ಪಂಚಾಯತ ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ ೧೦ ಗಂಟೆಗೆ ನಡೆದ ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕಿನ ೧೩ ಗ್ರಾಮ ಪಂಚಾಯತಗಳ ಪಂಚಾಯತ ಅಧಿಕಾರಿಗಳು, ತಾಲೂಕು ನರೇಗಾ ಸಿಬ್ಬಂದಿ ವರ್ಗ, ಬಿಲ್ ಕಲೆಕ್ಟರಗಳು, ಪಂಚಾಯತ ಕಾರ್ಯದರ್ಶಿ, ಕಂಪ್ಯೂಟರ್ ಆಫರೇಟರಗಳು, ಬಿಎಫ್ ಟಿಗಳು, ಗ್ರಾಮಕಾಯಕಮಿತ್ರರು ಅವರನ್ನು ಉದ್ದೇಶಿಸಿ ಮಾತನಾಡಿದರು.

ತಾಲೂಕಿನಲ್ಲಿ ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿ ಕುಂಠಿತವಾಗಿದೆ. ಜಿಲ್ಲೆಯಲ್ಲಿಯೇ ಗಜೇಂದ್ರಗಡ ತಾಲೂಕು ಮುಂದಿನ ವಾರದಲ್ಲಿ ತೆರಿಗೆ ವಸೂಲಾತಿಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯಬೇಕು. ತಾಲೂಕಿನ ಎಲ್ಲ ಗ್ರಾಪಂ ಗಳು ೫೦% ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಬೇಕು. ವಾರದೊಳಗೆ ಅತೀ ಹೆಚ್ಚು ತೆರಿಗೆ ವಸೂಲಾತಿ ಮಾಡುವ ೦೫ ಗ್ರಾಪಂ ಗಳ ಬಿಲ್ ಕಲೆಕ್ಟರ್ ಗಳಿಗೆ *ಚಾಂಪಿಯನ್ಸ ಆಫ್ ಟ್ಯಾಕ್ಸ್ ಕಲೆಕ್ಷನ್* ಎಂಬ ಹೆಸರಿನಡಿ ಪ್ರೋತ್ಸಾಹಕವಾಗಿ ಪ್ರಮಾಣ ಪತ್ರ ಮತ್ತು ಪಾರಿತೋಷಕ ನೀಡಿ ಗೌರವ ಸಲ್ಲಿಸಲಾಗುವುದು ಎಂದರು.

ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಶಾಲಾ ಅಭಿವೃದ್ಧಿ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಯೋಜನೆಯಡಿ ಯಾವುದೇ ಕಾಮಗಾರಿ ಇರಲಿ ವಿಳಂಬ ಮಾಡದೇ ತಾಂತ್ರಿಕವಾಗಿ ಮತ್ತು ಆಡಳಿತಾತ್ಮಕವಾಗಿ ಒಪ್ಪಿಗೆ ನೀಡಿ ಆದಷ್ಟು ಬೇಗ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳುವಂತೆ ನರೇಗಾ ಸಿಬ್ಬಂದಿ ಮುತುವರ್ಜಿವಹಿಸಬೇಕೆಂದರು. ವೈಯಕ್ತಿಕ ಕಾಮಗಾರಿಗಳು ಸೇರಿದಂತೆ ಕ್ರಿಯಾಯೋಜನೆಯ ಎಲ್ಲ ಕೆಲಸಗಳಿಗೆ ತಾಂತ್ರಿಕ ಸಿಬ್ಬಂದಿ ಅಂದಾಜು ಪತ್ರಿಕೆ ಸಿದ್ದಪಡಿಸಬೇಕು ಅಂತ ತಿಳಿಸಿದರು. ತಾಲೂಕಿನ ಮಹಿಳಾ ಭಾಗವಹಿಸುವಿಕೆ ಹೆಚ್ಚಳ, ಎಸ್ಸಿ-ಎಸ್ಟಿ ಸಮುದಾಯದ ಕೂಲಿಕಾರರನ್ನು ಯೋಜನೆಯೊಳಗೆ ಹೆಚ್ಚಾಗಿ ಕೆಲಸ ಕೊಡುವಂತೆ ಎಲ್ಲ ಸಿಬ್ಬಂದಿಗೆ ಸೂಚಿಸಿದರು.

ಸ್ವಚ್ಛ ಭಾರತ್ ಮಿಶನ್, ಮುಂದುವರೆದ ಕಾಮಗಾರಿಗಳ ಪೂರ್ಣಗೊಳಿಸುವಿಕೆ, ಕಸದ ವಾಹನಗಳಿಗೆ ಮಹಿಳಾ ಡ್ರೈವರ್ ಗಳ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವುದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮವಹಿಸುವುದು ಸೇರಿದಂತೆ ಪ್ರಮುಖ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಿದರು.

ತಾಲೂಕಿನ ಎಲ್ಲ ಗ್ರಾಮ ಪಂಚಾಯಗಳಲ್ಲಿ ಸಾರ್ವಜನಿಕ ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು. ಇದಕ್ಕೆ ಪೂರಕವಾಗಿ ಪಿಡಿಒ ಸೇರಿದಂತೆ ಗ್ರಾಪಂ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿ ಗ್ರಾಪಂ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ನಯ-ವಿನಯತೆಯಿಂದ ವರ್ತಿಸಬೇಕು. ಈ ಮೂಲಕ ತಾಲೂಕಿನ ಸಾರ್ವಜನಿಕರಿಗೆ ಸರ್ಕಾರಿ ಕಚೇರಿಗಳ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಿ ಎಂದರು.

ಬಸವರಾಜ ಬಡಿಗೇರ್ ಸಹಾಯಕ ನಿರ್ದೇಶಕರು ಉದ್ಯೋಗ ಖಾತರಿ ತಾಪಂ ಗಜೇಂದ್ರಗಡ ಅವರು ನೂತನ ಇಒ ಚಂದ್ರಶೇಖರ ಬಿ, ಕಂದಕೂರು ಅವರಿಗೆ ಸಾಥ್ ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news