15.9 C
New York
Wednesday, October 22, 2025

Buy now

spot_img

ಗದಗ : ಜಿಲ್ಲಾ ಮಟ್ಟದ ಆಧಾರ ಮೇಲ್ವಿಚಾರಣಾ ಸಮಿತಿ ಸಭೆ

ಗದಗ  ಜುಲೈ 25 : ಗದಗ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಗುರುವಾರ ಜಿಲ್ಲಾ ಮಟ್ಟದ ಆಧಾರ ಮೇಲ್ವಿಚಾರಣಾ ಸಮಿತಿ ಸಭೆಯು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ಮಾತನಾಡಿ ಆಧಾರ್ ಕಾರ್ಡ ಭಾರತೀಯ ನಾಗರಿಕನಿಗೆ ಒಂದು ವಿಶಿಷ್ಟ ಗುರುತಿನ ಚೀಟಿಯಾಗಿದೆ. ಆಧಾರ್ ಕಾರ್ಡ ವ್ಯಕ್ತಿಯ ಗುರುತಿನ ಮತ್ತು ವಿಳಾಸದ ಪುರಾವೆಯಾಗಿದ್ದು ವಿವಿಧ ಸರ್ಕಾರಿ ಯೋಜನೆಗಳು ಹಾಗೂ ಸಹಾಯಧನಗಳನ್ನು ಪಡೆಯಲು ಆಧಾರ್ ಕಾರ್ಡ ಸಹಾಯವಾಗುತ್ತದೆ. ಸಾರ್ವಜನಿಕರ ಆಧಾರ ಕಾರ್ಡಗಳಿಗೆ ಮೊಬೈಲ್ ಲಿಂಕ್ ಅವಶ್ಯಕವಾಗಿದ್ದು ಆಧಾರ ಕೇಂದ್ರಕ್ಕೆ ಆಗಮಿಸಿ ಮೊಬೈಲ್ ಲಿಂಕ್ ಮಾಡಿಸಬೇಕು. ಶಾಲೆಗಳಲ್ಲಿ ಆಧಾರ ನೊಂದಣಿ ಶಿಬಿರವನ್ನು ಏರ್ಪಡಿಸಿ ಪ್ರತಿಯೊಂದು ಮಗುವು ಆಧಾರ ಕಾರ್ಡನ್ನು ಹೊಂದುವAತಾಗಬೇಕು. ಆಧಾರ ನೊಂದಣಿಯಾದ ಶಾಲಾ ಮಕ್ಕಳಿಗೆ ಕಡ್ಡಾಯ ಬಯೋಮೆಟ್ರಿಕ್ ನ್ನು ಮಕ್ಕಳ ಪಾಲಕರು ಆಧಾರ ಕೇಂದ್ರಗಳಿಗೆ ಆಗಮಿಸಿ ಮಾಡಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.

UIDAI ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಬಂಧಕರಾದ ಮೊಹಮ್ಮದ ಮುಸಾಬ ಅವರು ಮಾತನಾಡಿ ಜಿಲ್ಲೆಯಲ್ಲಿ 12,35,602 ಆಧಾರ್ ಕಾರ್ಡ ಜನರೇಟ್ ಮಾಡಲಾಗಿದೆ. 11,57,749 ಆಧಾರ್ ಕಾರ್ಡಗಳಿಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಲಾಗಿದ್ದು 77,853 ಆಧಾರ್ ಕಾರ್ಡಗಳ ಮೊಬೈಲ್ ಲಿಂಕ್ ಮಾಡುವುದು ಬಾಕಿ ಇವೆ. ಜಿಲ್ಲೆಯ 1,83,735 ವಿದ್ಯಾರ್ಥಿಗಳ ಪೈಕಿ 1,40,509 ವಿದ್ಯಾರ್ಥಿಗಳ ಆಧಾರ್ ಕಾರ್ಡ ಪರಿಶೀಲನೆಗೆ ಕಳುಹಿಸಿದ್ದು ಆ ಪೈಕಿ 1,01,085 ವಿದ್ಯಾರ್ಥಿಗಳ ಆಧಾರ ಕಾರ್ಡ ಪೂರ್ಣಗೊಂಡಿವೆ. 82,650 ವಿದ್ಯಾರ್ಥಿಗಳ ಆಧಾರ್ ಕಾರ್ಡ ಪರಿಶೀಲನೆ ಬಾಕಿ ಇದೆ ಎಂದು ಸಭೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಆಧಾರ್ ಕಾರ್ಡ ನೋಂದಣಿ , ಆಧಾರ್ ಕಾರ್ಡನಲ್ಲಿ ಹೆಸರು ವ್ಯತ್ಯಾಸ ತಿದ್ದುಪಡಿ, ನವೀಕರಣಕ್ಕೆ ಸಂಬಂದಪಟ್ಟ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನ್ನಪೂರ್ಣ ಎಂ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಸನಾಯಕ, ವಿಕಲಚೇತನರ ಕಲ್ಯಾಣ ಇಲಾಖೆ ಅಧಿಕಾರಿ ಮಹಾಂತೇಶ ಎಂ, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಮತಿ ಪದ್ಮಾವತಿ ಜಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ , ಅಂಚೆ ಇಲಾಖೆ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news