ಗದಗ : ಇಲ್ಲಿನ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾದಾನ ಸಮಿತಿ ಪ್ರೌಢ ಶಾಲೆ ನರಸಾಪುರ ಶಾಲೆಯ 1998-2001 ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು 20/07/2025 ರ ಭಾನುವಾರ ತಾವು ಕಲಿತ ಪ್ರೌಢ ಶಾಲೆಯಲ್ಲಿಯೆ ಹಮ್ಮಿಕೊಳ್ಳಲಾಗಿತ್ತು 10ನೇ ತರಗತಿ ಮುಗಿಸಿ 25 ವರ್ಷಗಳ ನಂತರ ಎಲ್ಲ ಹಳೆಯ ವಿದ್ಯಾರ್ಥಿಗಳು ಸೇರಿ ಅದ್ಧೂರಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ವಿಶೇಷವಾಗಿತ್ತು.ಈ ಕಾರ್ಯಕ್ರಮದಲ್ಲಿ ಎಲ್ಲ ಶಿಕ್ಷಕರಿಂದ ಈ ಕಾರ್ಯಕ್ರಮದ ನೆನಪಿಗಾಗಿ ಸಸಿ ನೆಡುವ ಕಾರ್ಯಕ್ರಮ.25 ವರ್ಷಗಳ ನಂತರ ಮತ್ತೆ ತರಗತಿಯಲ್ಲಿ ಕುಳಿತು ತರಗತಿ ವಾತಾವರಣದ ಅನುಭವ ಮರಳಿ ಪಡೆಯುವದು ,ಪುಷ್ಪ ಮಳೆಯ ಮೂಲಕ ಗುರುಗಳನ್ನು ಸ್ವಾಗತಿಸುವುದು,ಅದ್ಧೂರಿ ವೇದಿಕೆಯ ಮೇಲೆ ಗುರುಗಳನ್ನು ಅಭಿನಂದಿಸಿ ಸನ್ಮಾನಿಸಿ ಗುರುಕಾಣಿಕೆ ಸಲ್ಲಿಸುವುದು,ತಾವು ಕಲಿತ ಶಾಲೆಗಾಗಿ LED TVಕಾಣಿಕೆ ನೀಡುವದು ಹೀಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಕೊನೆಗೆ ಪ್ರೀತಿಯ ಭೋಜನವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮ ನಿ ಪ್ರ ಡಾ . ವೀರೇಶ್ವರ ಮಹಾಸ್ವಾಮಿಗಳು ಮೃಢಗಿರಿ ಅನ್ನದಾನೀಶ್ವರ ಶಾಖಾ ಮಠ ನರಸಾಪುರ ಇವರು ವಹಿಸಿಕೊಂಡಿದ್ದರು.ಶ್ರೀ ಜ ಅ ವಿ ಸ ಪ್ರೌಢ ಶಾಲೆ ಮುಖ್ಯೋಪಾಧ್ಯಾಯರಾದ ಶ್ರೀ ಎಮ್ ಹೆಚ್ ಪೂಜಾರ ಅವರು ಅದ್ಯಕ್ಷತೆಯನ್ನು ವಹಿಸಿಕೊಂಡಿದ್ದರು.ಗುರುವಂದನೆಗಾಗಿ ಸನ್ಮಾನಿತರಾಗಿ R B ಕೆಂಚಗುಂಡಿ ಗಣಿತ ಶಿಕ್ಷಕರು S C ಹಿರೇಮಠ ಇಂಗ್ಲೀಷ್ ಭಾಷಾ ಶಿಕ್ಷಕರು K K ಹೂಗಾರ ದೈಹಿಕ ಶಿಕ್ಷಕರು R A ಹಣಗಿ ಚಿತ್ರಕಲಾ ಶಿಕ್ಷಕರು V R ಹಿರೇಮಠ ಪ್ರಥಮ ದರ್ಜೆ ಸಹಾಯಕರು A M ಕೊಟಗಿ ಸ.ಶಿ ಸ ಹಿ ಪ್ರಾ ಶಾಲೆ ನರಸಾಪುರ S M ಮಲ್ಲಾಪುರ ಸಮಾಜ ವಿಜ್ಞಾನ ಶಿಕ್ಷಕಿಯರು ಭಾಗವಹಿಸಿದ್ದರು
ಕಾರ್ಯಕ್ರಮದ ಉದ್ಘಾಟನೆಯನ್ನು ಸ ಹಿ ಪ್ರಾ ಶಾಲೆ ನರಸಾಪುರ ಶಾಲೆಯ ಸಹ ಶಿಕ್ಷಕಿಯರಾದ ಶ್ರೀಮತಿ A M ಕೊಟಗಿ ಅವರು ನೆರವೇರಿಸಿದರು.ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಶಿಕ್ಷಕರು ಹಾಗೂ ಸಾನಿಧ್ಯ ವಹಿಸಿದ್ದ ಪೂಜ್ಯರೂ ವಿದ್ಯಾರ್ಥಿಗಳ ಈ ಕಾರ್ಯವನ್ನು ಮೆಚ್ಚಿ ಅತೀವ ಸಂತಸವನ್ನು ವ್ಯಕ್ತಪಡಿಸಿ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು ಎಲ್ಲ ಹಳೆ ವಿದ್ಯಾರ್ಥಿಗಳು ಅತ್ಯಂತ ಸಂತಸ ಹಾಗೂ ಸಡಗರದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಈ ಕಾರ್ಯಕ್ರಮಕ್ಕಾಗಿ ವಿದೇಶದಲ್ಲಿರುವ ವಿದ್ಯಾರ್ಥಿಯೂ ಆಗಮಿಸಿದ್ದರು ಬೆಂಗಳೂರು ಮಂಗಳೂರು ಶಿರಸಿ ಕೊಪ್ಪಳ ಹೊಸಪೇಟೆ ಹೀಗೆ ದೂರ ದೂರದ ಊರುಗಳಿಂದ ಲೂ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳ ಆಶಿರ್ವಾದ ಪಡೆಯಲು ಹಾಗೂ 25 ವರ್ಷಗಳಿಂದ ದೂರವಾಗಿದ್ದ ತಮ್ಮ ಸ್ನೇಹಿತರನ್ನು ಕಾಣಲು ಅತ್ಯಂತ ಉತ್ಸಾಹದಿಂದ ಆಗಮಿಸಿದ್ದರು.ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರೂ ಅತ್ಯಂತ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.