28.3 C
New York
Friday, July 11, 2025

Buy now

spot_img

ಗದಗ : ಅರ್ಜಿ ಆಹ್ವಾನ

ಗದಗ  ಜುಲೈ 11: 2025-26 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಪದವಿ ಶಿಕ್ಷಣದಿಂದ ವಂಚಿತರಾಗುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರಿನ ಹಜ್ ಭವನದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರ ತೆರೆದು ವಿವಿಧ ಪದವಿ/ಸ್ನಾತ್ತಕೋತ್ತರ ಉನ್ನತ ಶಿಕ್ಷಣಕ್ಕಾಗಿ ಅರ್ಜಿ ಅಹ್ವಾನಿಸಲಾಗಿz.ೆ ಈ ಸಂಬAಧ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ನೀಡುವ ಆಫ್‌ಲೈನ್/ದೂರ ಶಿಕ್ಷಣ ಕ್ರಮದ ಪದವಿ ಕೋರ್ಸಗಳು (ಬಿ.ಎ, ಬಿ.ಕಾಂ, ಬಿ.ಎಸ್ಸಿ, ಸೇರಿದಂತೆ ಒಟ್ಟು 09 ಕೋರ್ಸಗಳು) ಸ್ನಾತ್ತಕೋತ್ತರ ಪದವಿ ಕೋರ್ಸಗಳು (ಎಂ.ಎ, ಎಂ.ಕಾA, ಎಂ.ಎಸ್ಸಿ, ಎಂ.ಬಿ.ಎ ಸೇರಿದಂತೆ ಒಟ್ಟು 34 ಕೋರ್ಸುಗಳು) ಪದವಿ ಸರ್ಟಿಫಿಕೇಟ್ ಕೋರ್ಸಗಳು 4, ಸ್ನಾತಕೋತ್ತರ ಸರ್ಟಿಫಿಕೇಟ್ ಕೋರ್ಸಗಳು 13 ಮತ್ತು 7 ಡಿಪ್ಲೋಮಾ ಕೋರ್ಸಗಳನ್ನು ಒಳಗೊಂಡAತೆ 69 ಕೋರ್ಸಗಳಿಗೆ ಶಿಕ್ಷಣ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಸ್ವಯಂ ಭೋದನಾ ಸಾಮಗ್ರಿಗಳನ್ನು ಒದಗಿಸಲಾಗುವುದು.

ಆಸಕ್ತ ಹಾಗೂ ಅರ್ಹ ಅಲ್ಪಸಂಖ್ಯಾತರ (ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಸಿಖ್, ಬೌದ್ಧ, ಪರ್ಶಿಯನ್) ವಿದ್ಯಾರ್ಥಿಗಳು ಆನಲೈನ್ ಮುಖಾಂತರ https://minority.ksouportal.com / https://dom.karnataka.gov.in ಅರ್ಜಿ ಸಲ್ಲಿಸಲು ಕೊನೆಯ ದಿನ ಅಗಸ್ಟ 25 ಆಗಿದ್ದು ವಿದ್ಯಾರ್ಥಿಗಳು ಖುದ್ದಾಗಿ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೊಂದಿಗೆ ವಿಶ್ವವಿದ್ಯಾನಿಲಯದ ಮೈಸೂರಿನ ಕೇಂದ್ರ ಕಛೇರಿಗೆ ಅಥವಾ ಹತ್ತಿರದ ಪ್ರಾದೇಶಿಕ ಕೇಂದ್ರಗಳಿಗೆ ಅಥವಾ ಪ್ರಾದೇಶಿಕ ಕಛೇರಿ ಹಜ್ ಭವನ ಬೆಂಗಳೂರಿಗೆ ಭೇಟಿ ನೀಡಬಹುದಾಗಿದೆ.

ಅರ್ಹತೆಗಳು:ವಿದ್ಯಾರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.ಅರ್ಜಿ ಸಲ್ಲಿಸುವ ವಿದ್ಯಾಥಿಯ/ಪೋಷಕರು ಆದಾಯ ವಾರ್ಷಿಕ 8 ಲಕ್ಷಗಳಿಗೆ ಮೀರಿರಬಾರದು.ವಿದ್ಯಾರ್ಥಿಯು ಪ್ರವೇಶ ಪಡೆಯಲು ಬಯಸುವ ಕೋರ್ಸುಗಳಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ನಿಗದಿಪಡಿಸಿರುವ ಕನಿಷ್ಠ ವಿದ್ಯಾರ್ಹತೆಯನ್ನು ಪಡೆದಿರಬೇಕು.ಸದರಿ ಯೋಜನೆಯು ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಮತ್ತು ಸಹಾಯವಾಣಿ ಸಂಖ್ಯೆ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಪ್ರವೇಶಾತಿಗಾಗಿಯೇ ಬೆಂಗಳೂರಿನ ಹಜ್ ಭವನದಲ್ಲಿ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಹಜ್ ಭವನದ ಅಧಿಕಾರಿಗಳನ್ನು/ಹಜ್ ಭವನದಲ್ಲಿರುವ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರದ ನಿರ್ದೇಶಕರನ್ನು/ಪ್ರಾದೇಶಿಕ ಹಜ್ ಭವನವನ್ನು ಅಥವಾ ಪ್ರವೇಶಾತಿ ವಿಭಾಗವನ್ನು ಕೆಳಕಂಡ ಮೊಬೈಲ್ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ. 9900667916/ 9945366062/ 3113512565/ 96113512565/ 9611418726/ 9900506659/ 9035395137/ 8123469017/ 9844010407/ 8277799990.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news