ಗದಗ ಜುಲೈ 11: ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ತಾಲೂಕಾ ಆಸ್ಪತ್ರೆ ಹಾಗೂ ದುಂಡಪ್ಪ ಮಾನ್ವಿ ಹೆರಿಗೆ ಆಸ್ಪತ್ರೆ ಗದಗ ಆವರಣದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ 2025ರ ನಿಮಿತ್ಯ ಜಾಥಾ ಕಾರ್ಯಕ್ರಮವು ಜರುಗಿತು.
ಜಿಲ್ಲಾ ಕುಟುಂಬ ಕಲ್ಯಾಣ ಯೋಜನಾ ಅಧಿಕಾರಿ ಡಾ. ವಾಯ್, ಕೆ, ಭಜಂತ್ರಿ ಹಾಗೂ ಜಿಲ್ಲಾ ಸಮೀಕ್ಷಣಾ ಅಧಿಕಾರಿ ಡಾ. ವೆಂಕಟೇಶ ರಾಠೋಡ ಇವರು ಹಸಿರು ನಿಶಾನೆ ತೋರಿಸಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸದರಿ ಕಾರ್ಯಕ್ರಮದಲ್ಲಿ ಡಾ. ಜಾಧವ ಮತ್ತು ರೂಪಸೇನ ಚವ್ಹಾಣ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಹಾಗೂ ಶ್ರೀಮತಿ ಪುಷ್ಪಾ ಪಾಟೀಲ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಮತ್ತು ವಾಯ ಕೆ. ಹಕ್ಕಿ ಎಸ್.ಹೆಚ್.ಐ.ಓ, ಶ್ರೀಮತಿ ಸರೋಜಾ ಕಟ್ಟಿಮನಿ ಎಲ್.ಹೆಚ್.ವಿ, ಸಿದ್ದಪ್ಪ ಲಿಂಗದಾಳ ಹೆಚ್.ಐ.ಓ, ಡಿ.ಸಿ ಹಿರೇಹಾಳ ಹೆಚ್.ಐ.ಓ, ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.