ಗದಗ ಜುಲೈ 9 : ಮುಂಡರಗಿ ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಚ ಭಾರತ್ ಮಿಷನ್ 2.0 ರಅಡಿಯಲ್ಲಿ ಐಇಸಿ ಮಾಹಿತಿ, ಶಿಕ್ಷಣ ಮತ್ತು ಸಂವಹನ ಘಟಕದಡಿಯಲ್ಲಿ ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆಯ ಕುರಿತು ನಗರ ಸ್ಥಳೀಯ ಮಟ್ಟದಲ್ಲಿ ವಿವಿಧ ಬಗೆಯ ಚಟುವಟಿಕೆಗಳನ್ನು ಕೈಗೊಳ್ಳಲು ನಲ್ಮ ಡೇ ಯೋಜನೆಯ ಸ್ವಸಹಾಯ ಸದಸ್ಯರುಗಳನ್ನು ಕಮ್ಯುನಿಟಿ ಮೊಬೈಲೈರ‍್ಸ್ ಹುದ್ದೆಗೆ ಮಾಸಿಕ ಗೌರವಧನ ಆಧಾರದ ಮೇಲೆ ತಾತ್ಕಾಲಿಕ ಸೇವೆ ಪಡೆದುಕೊಳ್ಳಲು ಅವಕಾಶವಿದೆ. ಅರ್ಜಿ ಸಲ್ಲಿಸಲು ಜುಲೈ 14 ಕೊನೆಯ ದಿನವಾಗಿದ್ದು ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮುಖ್ಯಾಧಿಕಾರಿಗಳ ಕಾರ್ಯಾಲಯ, ಪುರಸಭೆ ಮುಂಡರಗಿ ದೂರವಾಣಿ ಸಂಖ್ಯೆ 08371- 262638 ಇಲ್ಲಿ ಸಂಪರ್ಕಿಸಬಹುದಾಗಿದೆ.