15.3 C
New York
Thursday, October 23, 2025

Buy now

spot_img

ಗದಗ  : ಅಂಚೆ ಇಲಾಖೆ ಸೇವೆ ಸಮಾಜದ ಕಡೆಯ ವ್ಯಕ್ತಿಗೂ ಲಭಿಸಲಿದೆ : ರಮೇಶ ಮಡಿವಾಳರ

ಗದಗ: ಸಮಾಜದ ಕಡೆಯ ವ್ಯಕ್ತಿಗೂ ವಿವಿಧ ಅಂಚೆ

ಸೇವೆ ಕಲ್ಪಿಸುವ ಸದಾವಕಾಶ ಲಭಿಸಿದೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ರಮೇಶ ಮಡಿವಾಳರ ಅಭಿಪ್ರಾಯಪಟ್ಟರು.

ಭಾರತೀಯ ಅಂಚೆ ಇಲಾಖೆಯ ಆಶ್ರಯದಲ್ಲಿ ಜೆ.ಟಿ.ಕಾಲೇಜ್ ಸಭಾ ಭವನದಲ್ಲಿ ಸೋಮವಾರ ನಡೆದ ಗದಗ ವಿಭಾಗೀಯ ವಿಭಾಗ ಮಟ್ಟದ ಪ್ರಶಸ್ತಿ ವಿತರಣೆ ನೆರವೇರಿಸಿ ಮಾತನಾಡಿ, ಪದವಿ ಸೇರಿದಂತೆ ವಿವಿಧ ಕ್ಷೇತ್ರದ ಜನರನ್ನು ಅಂಚೆ ಜೀವ ವಿಮೆ ಕ್ಷೇತ್ರದ ವ್ಯಾಪ್ತಿಗೆ ತರುವ ಮಹತ್ವ ಸದಾವಕಾಶ ಅಂಚೆ ಇಲಾಖೆಗೆ ಸಿಕ್ಕಿದೆ. ಈ ಯೋಜನೆ ಲಾಭ ಗ್ರಾಹಕರಿಗೆ ತಲುಪಿಸುವ ದಿಸೆಯಲ್ಲಿ ಪ್ರಾಮಾಣಿಕ‌ ಪ್ರಯತ್ನ ಮಾಡಲು ಮುಂದಾಗಬೇಕು ಎಂದರು.

ಗ್ರಾಹಕರಿಗೆ ತಂತ್ರಜ್ಞಾನದ ಕೆಲವು ಉನ್ನತ ಅನುಕೂಲಗಳು ಮತ್ತು ಸೇವೆ ವಲಯದಲ್ಲಿ ಹೊಸ ನೀತಿ ರೂಪಿಸುವ ಸಲುವಾಗಿ ಕೇಂದ್ರ ಸರ್ಕಾರ ವಿವಿಧ ಮಹತ್ವದ ಯೋಜನೆಗಳನ್ನು ದೇಶದ ಎಲ್ಲೆಡೆ ಪರಿಚಯಿಸಲು ಅಂಚೆ ಇಲಾಖೆ ಬಗೆಗೆ ಒಲವು ತೋರುತ್ತವೆ . ಹಾಗಾಗಿ ಅಂಚೆ ಇಲಾಖೆ ಸಿಬ್ಬಂದಿ ಕೇಂದ್ರ ಸರ್ಕಾರ ಅಂಚೆ ಇಲಾಖೆಯ ಮೂಲಕ ವಿವಿಧ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸದ ಹೊಣೆಗಾರಿಕೆಯನ್ನು ಗ್ರಾಹಕರ ವಿಶ್ವಾಸಾರ್ಹತೆಗೆ ತಕ್ಕಂತೆ ಸೇವೆ ನೀಡಲು ಮುಂದಾಗಬೇಕು ಎಂದರು.

ಪ್ರತಿಯೊಬ್ಬ ನೌಕರರು ನಿಮ್ಮ ಕುಟುಂಬದ ಆರೋಗ್ಯ ಮತ್ತು ಒಳ್ಳೆಯ ಹವ್ಯಾಸ ರೂಢಿಸಿಕೊಳ್ಳಬೇಕು. ಅಂದಾಗ ಮಾತ್ರ ನಮ್ಮ ಇಲಾಖೆ ಸಾಧನಾ ನಾಗಲೋಟ ದೇಶದ ಎಲ್ಲೆಡೆ ಪ್ರಚುರಪಡಿಸಲು ಅತ್ಯಂತ ಸಹಕಾರಿಯಾಗಿದೆ ಎಂದರು.

ರೋಣ ಉಪ ವಿಭಾಗ ಅಂಚೆ ನಿರೀಕ್ಷಕ ವೆಂಕಟೇಶರಡ್ಡಿ ಕೊಳ್ಳಿ ಮಾತನಾಡಿ, ರೋಣ ಉಪ ವಿಭಾಗದ

ಪ್ರತಿಯೊಬ್ಬ ಉದ್ಯೋಗಿಗಳು ಪರಸ್ಪರ, ಪ್ರೀತಿ, ವಿಶ್ಚಾಸ ಸ್ನೇಹಪರ ಪಾಲ್ಗೊಳ್ಳುವಿಕೆ ಕೆಲಸದಿಂದಾಗಿ

ಗದಗ ವಿಭಾಗ ರಾಷ್ಟ್ರ ಹಾಗೂ ರಾಜ್ಯ , ವಲಯ ಮಟ್ಟದಲ್ಲಿ ಉನ್ನತ ಸ್ಥಾನ ಪಡೆಯಲು ಮತ್ತು ಹೆಸರು ಗಳಿಸಲು ಸಾಧ್ಯವಾಗಿದೆ ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಸಾಧಕರ ಪರಿಶ್ರಮ ಅಪಾರವಾಗಿದೆ. ಹಾಗಾಗಿ ಇಲಾಖೆ ಸಿಬ್ಬಂದಿಗೆ ಸನ್ಮಾನಿಸಿ, ಗೌರವ ಹೆಚ್ಚೆಚ್ಚು ಕೆಲಸ ಮಾಡಲು ಪ್ರೇರಣೆ ಆಗಲಿದೆ. ಇನ್ನೂ ಮುಂಬರುವ ದಿನಗಳಲ್ಲಿ ಜನಸ್ನೇಹಿ ಯೋಜನೆಗಳನ್ನು ಗ್ರಾಹಕರಿಗೆ ತಲುಪಿಸುವ ಮೂಲಕ ಗದಗ ವಿಭಾಗೀಯ ಹೆಸರು ಮುಂಬರುವ ದಿನಗಳಲ್ಲಿ ಮುಂಚೂಣಿಯಲ್ಲಿ ಇರಲಿದೆ ಎಂದರು.

ಅಂಚೆ ಸಹಾಯಕ ಬಸವರಾಜ ಸೇಡದ ಮಾತನಾಡಿ, ಇದೇ 23 ರಂದು ಗದಗ ವಿಭಾಗೀಯ ಎಲ್ಲೆಡೆ

ಐಟಿ 2.0 ಅನುಷ್ಠಾನಕ್ಕೆ ಬರಲಿದೆ. ಮುಂಬರುವ ದಿನಗಳಲ್ಲಿ ಜನರಿಗೆ ಅತ್ಯಂತ ತ್ವರಿತ ಮತ್ತು

ತಂತ್ರಜ್ಞಾನದ ಸಹಾಯದೊಂದಿಗೆ ಗ್ರಾಹಕರ ವಿಶ್ವಾಸಾರ್ಹತೆ ಸೇವೆ ವಿಫಲ ಅವಕಾಶ ದೊರಕಿಸಲು ಮುಂದಾಗಿದೆ. ಈ ಕೆಲಸ ಪತ್ರ ಬಟವಾಟೆ ಸೇವೆ ಕ್ಷೇತ್ರದಲ್ಲಿ ಹೊಸ ಭಾಷ್ಯೆ ಆಗಲಿದೆ ಎಂದರು.

ಗದಗ ವಿಭಾಗೀಯ ಸಹಾಯಕ ಅಂಚೆ ಅಧೀಕ್ಷಕ ಶ್ರೀಕಾಂತ ಜಾದವ ಪ್ರಾಸ್ತವಿಕವಾಗಿ ಮಾತನಾಡಿ,

ಅಂಚೆ ಬಟವಾಡೆ ಜೊತೆಗೆ ಉಳಿತಾಯ ಖಾತೆ, ಆರ್.ಡಿ. ಗುಂಪು ವಿಮೆ ಮತ್ತು ವಿವಿಧ ವಿಮಾ ಯೋಜನೆಗಳು ಸೇರಿದಂತೆ ಹಲವು ಬ್ಯಾಂಕಿಂಗ್ ಸೌಲಭ್ಯಗಳನ್ನು ಅಂಚೆ ಇಲಾಖೆ ಜನರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಅವುಗಳನ್ನು ಸದ್ಭಳಕೆ ಮುಂದಾಗಬೇಕು ಎಂದರು.

ಗದಗ ವಿಭಾಗೀಯ ಸಹಾಯಕ ಅಂಚೆ ಅಧೀಕ್ಷಕರಾದ ಸುನೀಲಕುಮಾರ, ಪ್ರಧಾನ ಅಂಚೆ ಪಾಲಕರಾದ ಮಂಜುಳಾ.ಎನ್.ದಂಗಿನಹಾಳ ಮತ್ತಿತರರು ಇದ್ದರು. ಮೇಘಾ ಕುಲಕರ್ಣಿ ಪ್ರಾರ್ಥಿಸಿದರು. ಅನೀತಾ ಕುರಿ, ಸಂತೋಷ ಅಳಗುಂಡಿ ನಿರೂಪಿದರು. ಪ್ರಧಾನ ಅಂಚೆ ಉಪ ಅಂಚೆ ಪಾಲಕರಾದ ದೊಡ್ಡಪ್ಪ ಇಟಗಿ ವಂದಿಸಿದರು.

ಗದಗ ವಿಭಾಗೀಯ ವಿಭಾಗ ಮಟ್ಟದ ಪ್ರಶಸ್ತಿ ವಿತರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ

ಗದಗ ವಿಭಾಗೀಯ ಅಂಚೆ ಅಧೀಕ್ಷಕ ರಮೇಶ ಮಡಿವಾಳರ ನೆರವೇರಿಸಿದರು. ಸಹಾಯ ಅಂಚೆ ಅಧೀಕ್ಷಕರಾದ ಶ್ರೀಕಾಂತ ಜಾದವ, ವಿ.ಸುನೀಲಕುಮಾರ, ವೆಂಕಟೇಶರಡ್ಡಿ ಕೊಳ್ಳಿ, ಮಂಜುಳಾ ದೇಗಿನಾಳ ಮತ್ತಿತರರು ಚಿತ್ರದಲ್ಲಿ ಇದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news