ಗದಗ : ವೇಗವಾಗಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಟೇಲರ್ ಪಲ್ಟಿಯಾಗಿದೆ. ಗದಗ ತಾಲೂಕಿನ ಚಿಕ್ಕಟಿ ಸ್ಕೂಲ್ ಬಳಿ ಈ ಘಟನೆ ಸಂಭವಿಸಿದೆ.
ವೇಗವಾಗಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಇಟ್ಟಂಗಿ ತುಂಬಿದ್ದ ಟೇಲರ್ ರಾಷ್ಟ್ರೀಯ ಹೆದ್ದಾರಿಯಲ್ಲಿ (ಚಿಕ್ಕಟಿ ಸ್ಕೂಲ್ ಹತ್ತಿರ) ಪಲ್ಟಿಯಾಗಿದೆ. ಇದರ ಹಿಂದೆ ಬರುತ್ತಿದ ಕಾರಿನ ಮುಂಭಾಗದ ಮೇಲೆ ಇಟ್ಟಂಗಿ ತುಂಬಿದ ಟ್ರ್ಯಾಕ್ಟರ್ ಟೇಲರ್ ಪಲ್ಟಿಯಾಗಿದೆ. ಕಾರಿನಲ್ಲಿ ಇದ್ದ ಸವಾರರು ಅಪಘಾತದಿಂದ ಪಾರಾಗಿದ್ದಾರೆ. ಎನ್ನಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.