ಗದಗ : ಜಿಲ್ಲೆಯ ರೋಣ ತಾಲೂಕಿನ ಮುಗಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೋಣದ ಹಕಾರಿ ಕಾಲೋನಿ ನಿವಾಸಿ ಶಂಕ್ರಪ್ಪ ಅಲಿಯಾಸ್ ಮುತ್ತು ಕೊಳ್ಳಿ (30) ಮೃತ ದುರ್ದೈವಿ.
ಶಂಕ್ರಪ್ಪ ಪ್ರೀತಿಸಿ ವಿವಾಹವಾಗಿದ್ದ.ಆದಾಗ್ಯೂ ಪತ್ನಿ ಬೋರಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಪತ್ನಿ ಹಾಗೂ ಆಕೆಯ ಪ್ರಿಯಕರ ಶಿವಕುಮಾರ್ ಸೇರಿ ಶಕ್ರಪ್ಪನನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಹಂತಕರು ಮೃತದೇಹದ ಕೈಕಾಲು ಕಟ್ಟಿ, ಹಾಸಿಗೆಯಲ್ಲಿ ಸುತ್ತಿ ಜಮೀನು ಬಳಿಯ ಬಾವಿಗೆ ಎಸೆದಿದ್ದಾರೆ. ಬಾವಿಯಲ್ಲಿ ಶಂಕ್ರಪ್ಪನ ಮೃತ ದೇಹ ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.