ಮುಂಡರಗಿ : ತಾಲೂಕು ಮೇವುಂಡಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ ನ ಸ್ನಾತಕೋತ್ತರ ವಿದ್ಯಾರ್ಥಿಗಳ ಗ್ರಾಮೀಣ ವಾಸ್ತವ್ಯ ಮತ್ತು ಅಧ್ಯಯನದ ಶಿಬಿರದಲ್ಲಿ ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಉಪನ್ಯಾಸಕರಾದ ಡಾ. ಲಿಂಗರಾಜ್ ನಿಡುವಣಿಯವರು ಋತುವಿಗೆ ತಕ್ಕ ಹಾಗೆ ಜೀವನ ಮತ್ತು ಆಹಾರವನ್ನು ಸೇವಿಸಬೇಕು ಎನ್ನುತ್ತಾ “ಊಟ ಬಲ್ಲವನಿಗೆ ರೋಗವಿಲ್ಲವೆಂದು”ಅಭಿಪ್ರಾಯಪಟ್ಟರು.
ಈ ಶಿಬಿರದಲ್ಲಿ MPH(ಸಾರ್ವಜನಿಕ ಆರೋಗ್ಯ) ವಿದ್ಯಾರ್ಥಿಗಳಾದ ಡಾ ಸಂಜನಾ ವಡಕಣ್ಣವರ, ಡಾ ರೆಹಮಾನ್, ಸಾಕ್ಷಿ ಬB, ದೀಪಾ H ಕೆಳಗಿನಮನಿ ಇವರು 55 ಕ್ಕೂ ಹೆಚ್ಚು ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿದರು ಆಯುಷ್ಮನ್ ಆರೋಗ್ಯ ಮಂದಿರದಿಂದ ಉಚಿತವಾಗಿ ಜನರಿಗೆ ಔಷಧಿಯನ್ನು ನೀಡಲಾಯಿತು.
PHCo ರಾದ ಶ್ರೀಮತಿ ಹೇಮಾವತಿಯವರು, ಆಶಾ ಕಾರ್ಯಕರ್ತರು ಮಂಜುಳಾ ಬಣಕಾರ ಮತ್ತು ಗ್ರಾಮದ ಹಿರಿಯರು ಯುವಕರು ವಿಶ್ವವಿದ್ಯಾಲಯದ ವಿವಿಧ ಭಾಗದ ವಿದ್ಯಾರ್ಥಿಗಳು ಹಾಜರಿದ್ದರು.