ಗದಗ ಏಪ್ರಿಲ್ 17: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ರಾಜ್ಯದಲ್ಲಿರುವ ಅಂತ್ಯೋದಯ ಅನ್ನಯೋಜನೆ ಮತ್ತು ಆದ್ಯತಾ ಪಡಿತರ ಚೀಟಗಳ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ಪಡಿತರಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್‌ಖಾತೆಗೆ ನೇರ ನಗದು ಹಣ ವರ್ಗಾವಣೆ (ಡಿಬಿಟಿ) ಮುಖಾಂತರ ಹಣವನ್ನು ವರ್ಗಾಯಿಸುವ ಪ್ರಕ್ರಿಯೆಯ ಬದಲಾಗಿ ಫೆಬ್ರುವರಿ-2025 ರ ಮಾಹೆಯಿಂz Àಜಾರಿಗೆ ಬರುವಂತೆ ಅರ್ಹ ಫಲಾನುಭವಿಗಳಿಗೆ 05 ಕೆ.ಜಿಅಕ್ಕಿಯನ್ನು ಸಾರ್ವಜನಿಕ ವಿತರಣಾ ಪದ್ದತಿಯಡಿ ವಿತರಿಸಲು ಆದೇಶಿಸಲಾಗಿರುತ್ತದೆ.
ಏಪ್ರೀಲ್-2025 ಮಾಹೆಯಲ್ಲಿ ವಿತರಿಸುವ ಪ್ರಮಾಣ:
(ಪಿ.ಎಚ್.ಎಚ್.)ಆದ್ಯತಾ ಪಡಿತರ ಚೀಟಿ ಪ್ರತಿ ಸದಸ್ಯರಿಗೆ ಅನ್ನಭಾಗ್ಯ ಹೆಚ್ಚುವರಿ 05 ಕೆ.ಜಿ ಅಕ್ಕಿ
ಹಾಗೂ ಎನ್‌ಎಫ್‌ಎಸ್‌ಎ ಯೋಜನೆಯ 5ಕೆ.ಜಿ ಅಕ್ಕಿ ಒಟ್ಟು ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ
(ಎಎವೈ) ಅಂತ್ಯೋದಯ ಅನ್ನಯೋಜನೆ 1ರಿಂದ 3 ಸದಸ್ಯರಿರುವ ಪ್ರತಿ ಪಡಿತರ ಚೀಟಿಗೆ
ಒಟ್ಟು 35 ಕೆ.ಜಿ ಅಕ್ಕಿ.ನಂತರ 4 ಕ್ಕಿಂತ ಹೆಚ್ಚು ಸದಸ್ಯರಿರುವ ಪಡಿತರ ಚೀಟಿಗೆ 35 ಕೆ.ಜಿ.ಅಕ್ಕಿ
ಜೊತೆಗೆ ಅನ್ನಭಾಗ್ಯ ಹೆಚ್ಚುವರಿ ಅಕ್ಕಿಯನ್ನು ಪ್ರತಿ ಸದಸ್ಯರಿಗೆ 05.ಕೆ.ಜಿ.ಯಂತೆ ವಿತರಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.