ಗದಗ ೧೪ : ಗದಗ ಬೆಟಗೇರಿ ಅವಳಿ ನಗರದ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿರುವ ತೋಂಟದಾರ್ಯಮಠ ಕೋಮು ಸೌಹಾರ್ದತೆ ಹಾಗೂ ಭಾವೈಕ್ಯತೆಗೆ ಹೆಸರಾದ ಮಠವಾಗಿದ್ದು, ಇಂದು ಅದಕ್ಕೆ ಸಾಕ್ಷಿ ಎನ್ನುವಂತೆ ಜಾತಿ ಧರ್ಮ ಭೇದ ಭಾವ ಇಲ್ಲದೆ ಪ್ರತಿವರ್ಷವೂ ಜಾತ್ರಾ ಮಹೋತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳುವುದರ ಮೂಲಕ ವಿಜ್ರಂಬಣೆಯಿಂದ ಜಾತ್ರೆ ಜರುಗುತ್ತಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷವು ಜಾತ್ರೆಯ ಮೆರವಣಿಗೆಯ ಸಾಂಪ್ರದಾಯದAತೆ ಎಸ್ ಎಸ್ ಕಳಸಾಪುರ ಇವರ ಮನೆಯಿಂದ ಬರುವುದು. ಪ್ರಮುಖ ಬೀದಿಗಳಿಂದ ಮೆರವಣಿಗೆ ಮುಖಾಂತರ ಮಠಕ್ಕೆ ತೆರಳುವುದು.
ಜಾತ್ರಾ ಮೆರವಣಿಗೆ ನಗರದ ಜಾಮಿಯಾ ಮಸ್ಜಿದ್ ಮುಂದೆ ಮೆರವಣಿಗೆ ಬಂದಾಗ ಮಸ್ಜಿದ್‌ನ ಕಮಿಟಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವು ಶ್ರೀ ಸಿದ್ದರಾಮ ಮಹಾಸ್ವಾಮೀಜಿಯವರಿಗೆ ಫಲ ಪುಷ್ಪ ನೀಡಿ ಗೌರವದಿಂದ ಸನ್ಮಾನಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರ್‌ಸಾಬ ಬಬರ್ಚಿಯವರು ಈ ಬಾರಿ ತೊಂಟಾದಾರ್ಯ ಮಠದ ಭಾವಚಿತ್ರವನ್ನು ಸವಿ ನೆನಪಿನ ಕಾಣಿಕೆಯಾಗಿ ಜಾಮಿಯಾ ಮಸ್ಜಿದ್ ವತಿಯಿಂದ ನೀಡಿ ಆಶೀರ್ವಚನ ಪಡೆದರು.
ಪ್ರತಿ ವರ್ಷದಂತೆ ಈ ವರ್ಷವು ಭವ್ಯವಾದ ತಂಪುಪಾನಿಯ ವ್ಯವಸ್ಥೆಯನ್ನು ಅಬ್ದುಲಗನಿ ರಾಯದುರ್ಗ ಹಾಗೂ ಸಂಗಡಿಗರಿAದ ನೆರವೇರಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಜಾಮಿಯಾ ಮಸ್ಜಿದ್ ಚೇರಮನ್‌ರಾದ ಸಾದಿಕ್ ನರಗುಂದ, ಉಪಾಧ್ಯಕ್ಷರು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರ್‌ಸಾಬ ಬಬರ್ಚಿ ಕಾರ್ಯದರ್ಶಿ ಹಾಜಿ ಮಕಬೂಲ್‌ಸಾಬ ಶಿರಹಟ್ಟಿ, ರಿಯಾಜ್ ಅತ್ತಾರ್, ಹಾಜಿ ಮಹಮ್ಮದ್ ಹುಸೇನ್‌ಸಾಬ್ ಧಾರವಾಡ, ಮಹಮ್ಮದ್‌ಶಫಿ ಕುದರಿ, ಹಾಜಿ ಮಹಮ್ಮದ್ ಅಲಿ ಕಲೆಗಾರ, ರಶೀದ್ ಮದರಂಗಿ, ಇಸ್ಮಾಯಿಲ್ ಮದರಂಗಿ, ನಜೀರ್ ಕಾಟಾಪುರ, ರಜಾಕ್ ಶಿರಹಟ್ಟಿ, ಅಬ್ಬು ರಾಟಿ,ನಜೀರ್ ಕುದರಿ, ಇನ್ನೂ ಹಲವಾರು ಮುಸ್ಲಿಂ ಗಣ್ಯರು ಉಪಸ್ಥಿತರಿದ್ದರು.