ಅರ್ಜಿ ಆಹ್ವಾನ
ಗದಗ ಫೆಬ್ರುವರಿ 4: ಗದಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಗದಗ, ಮುಂಡರಗಿ ಮತ್ತು ರೋಣ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ ಹಾಗೂ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 2025-26 ನೇ ಸಾಲಿಗೆ 6 ನೇ ತರಗತಿ ದಾಖಲಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಇದರಲ್ಲಿ 75% ರಷ್ಟು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಹಾಗೂ 25% ರಷ್ಟು ಇತರೇ ವರ್ಗದವರಿಗೆ ವಿತರಿಸಲಾಗುವುದು. ಅಂಗವಿಕಲ ವಿದ್ಯಾರ್ಥಿಗಳು, ವಿಶೇಷ ಗುಂಪಿಗೆ ಸೇರಿದ ಅಂದರೆ ಅನಾಥ ಮಕ್ಕಳು, ವಿಧವೆಯರ ಮಕ್ಕಳು, ಪೌರ ಕಾರ್ಮಿಕರ ಮಕ್ಕಳು ಇತ್ಯಾದಿಗಳಿಗೆ 3% ರಷ್ಟು ಆಸನಗಳನ್ನು ಕಾಯ್ದಿರಿಸಲಾಗಿದೆ.
6 ನೇ ತರಗತಿಗೆ ದಾಖಲಾತಿ ಬಯಸುವ ವಿದ್ಯಾರ್ಥಿಗಳು 5 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಕುಟುಂಬದ ವಾರ್ಷಿಕ ಆದಾಯ ರೂ. 2.50 ಲಕ್ಷ ಮೀರಿರಬಾರದು, ಅರ್ಜಿಗಳನ್ನು ಆನ್‌ಲೈನ್ https://sevasindhu.karnataka.gov.in(ಸೇವಾಸಿಂಧೂ) ಮೂಲಕ ಮಾರ್ಚ 10 ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಗದಗ ಇವರನ್ನು ಸಂಪರ್ಕಿಸಬಹುದಾಗಿದೆ.
ಈ ಕೆಳಕಂಡ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.
08371-262911 ತಾಲೂಕ ಪಂಚಾಯತಿ ಆವರಣ, ಮುಂಡರಗಿ; 08372-297494 ಮೌಲಾನಾ ಆಝಾದ ಭವನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಗದಗ; 08381-267258 ತಾಲೂಕ ಪಂಚಾಯತಿ ಆವರಣ, ರೋಣ; 08377-245411 ತಹಶೀಲ್ದಾರ ಕಾರ್ಯಾಲಯ ರೂ.ನಂ:20, ನರಗುಂದ; 08487-242810 ತಾಲೂಕ ಉಪ ಖಜಾನೆ ಆವರಣ, ಶಿರಹಟ್ಟಿ
ಅರ್ಜಿ ಆಹ್ವಾನ
ಗದಗ (ಕರ್ನಾಟಕ ವಾರ್ತೆ) ಫೆಬ್ರುವರಿ 4: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಡೇ-ನಲ್ಮ ಯೋಜನೆಯಡಿ ರಚಿಸಿದ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಈ ಪ್ರಕಟಣೆ ಮೂಲಕ ತಿಳಿಯಪಡಿಸುವುದೇನೆಂದರೆ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಗೆ ಸಂಬAದಿಸಿದ ಆಸ್ತಿ ತೆರಿಗೆ ಹಾಗೂ ನೀರಿನ ತೆರಿಗೆಯ ಭಾಕಿ, ಬಡ್ಡಿ ಸಹಿತವಾಗಿ ವಾರ್ಷಿಕ ಬೇಡಿಕೆ ಸಹಿತ ವಸೂಲಿ ಮಾಡಲು ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಡೇ-ನಲ್ಮ ಯೋಜನೆಯಡಿ ನೊಂದಣಿಯಾದ ಸ್ಥಳೀಯ ಮಹಿಳಾ ಸ್ವ ಸಹಾಯ ಗುಂಪುಗಳ ಸೇವೆಯನ್ನು ಪಡೆದು ಸದರಿ ಸ್ವ ಸಹಾಯ ಗುಂಪುಗಳಿಗೆ ವಸೂಲಾದ ಮೊತ್ತದಲ್ಲಿ ಶೇ.5 ರಷ್ಟು ಪ್ರೋತ್ಸಾಹ ಧನವನ್ನು ನೀಡಲಾಗುವುದು, ಆಸಕ್ತಿಯುಳ್ಳ ಮಹಿಳಾ ಸ್ವ ಸಹಾಯ ಗುಂಪುಗಳು ಫೆಬ್ರುವರಿ 12 ರಂದು ಸಂಜೆ 4 ಗಂಟೆಯೊಳಗೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ನಗರಸಭೆಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಗದಗ-ಬೆಟಗೇರಿ ನಗರಸಭೆ ಕಾರ್ಯಾಲಯದಲ್ಲಿ ಇರುವ ಡೇ-ನಲ್ಮ ಶಾಖೆಗೆ ಕಚೇರಿಯ ವೇಳೆಯಲ್ಲಿ ಹಾಜರಾಗಿ ಮಾಹಿತಿಯನ್ನು ಪಡೆಯಬಹುದಾಗಿದೆ.
ಸ್ವ ಸಹಾಯ ಗುಂಪು ಡೇ-ನಲ್ಮ ಅಭಿಯಾನದಡಿ ನೊಂದಾಯಿಸಿ ಎಂಐಎಸ್ ಕೋಡ ಹೊಂದಿರಬೇಕು, ಗುಂಪಿನ ಪಂಚಸೂತ್ರಗಳನ್ನು ಅನುಸರಿಸುತ್ತಿರಬೇಕು ( ನಿರಂತರ ಸಭೆ, ನಿರಂತರ ಉಳಿತಾಯ, ಆಂತರಿಕ ಸಾಲ ವಿತರಣೆ, ನಿಯಮಿತ ಸಾಲ ಮರುಪಾವತಿ ಮತ್ತು ದಾಖಲೆ ನಿರ್ವಹಣೆ) ಸ್ವಸಹಾಯ ಗುಂಪಿನ ಸದಸ್ಯರು ಕನಿಷ್ಟ 7ನೇ ತರಗತಿಯವರೆಗೆ ಶಿಕ್ಷಣವನ್ನು ಹಾಗೂ ಎಲೆಕ್ಟಾನಿಕ್ ಪರಿಕರಗಳನ್ನು ಬಳಸುವ ಸಾಮರ್ಥ್ಯ ಹೊಂದಿರಬೇಕು. ಸ್ವಸಹಾಯ ಗುಂಪು ಸಕ್ರೀಯ ಬ್ಯಾಂಕ ಖಾತೆಯನ್ನು ಹೊಂದಿರಬೇಕು. ಬ್ಯಾಂಕಿನ ಮೂಲಕ ಅಥವಾ ಆಂತರಿಕ ಸಾಲ ಪಡೆದು ನಿಯಮಿತವಾಗಿ ಸಾಲ ಮರುಪಾವತಿಸಿರಬೇಕು.
ಸ್ವ ಸಹಾಯ ಗುಂಪು ಕನಿಷ್ಟ 3 ವರ್ಷ ಪೂರೈಸಿರಬೇಕು. ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರು ಯಾವುದೇ ಅಪರಾಧ ಹಾಗೂ ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಹಿನ್ನಲೆಯನ್ನು ಹೊಂದಿರಬಾರದು. ನಗರ ಸ್ಥಳೀಯ ಸಂಸ್ಥೆಯಿAದ ನಿಗದಿಪಡಿಸಲಾದ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ವಸೂಲಾತಿಯ ಗುರಿಗೆ ತಕ್ಕಂತೆ ಕಾರ್ಯ ನಿರ್ವಹಿಸಲು ಆಸಕ್ತಿ ಮತ್ತು ಬದ್ದತೆಯನ್ನು ಹೊಂದಿರಬೇಕು ಎಂದು ಗದಗ ಬೆಟಗೇರಿ ನಗರಸಭೆ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.