ಗದಗ ಫೆ 3: ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಗರದ ಕೆ. ಎಚ್ ಪಾಟೀಲ ಜಿಲ್ಲಾ ಕ್ರೀಡಾಂಗಣ, ಕುಸ್ತಿ ಮನೆ, ಕಳಸಾಪುರ ರಸ್ತೆಯ ಒಳಾ0ಗಣ. ಕ್ರೀಡಾಂಗಣ, ನಂದಿಶ್ವರ ನಗರದ ಈಜುಕೋಳ, ಬೆಟಗೇರಿಯ ಮಹಾತ್ಮ ಗಾಂಧಿ ಹಾಕಿ ಕ್ರೀಡಾಂಗಣಗಳಿಗೆ ಸೋಮವಾರ ಭೇಟಿ ನೀಡಿದರು ಹಾಗೂ ಅಲ್ಲಿನ ಸ್ಥಿತಿಗತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಗದುಗಿನಲ್ಲಿರುವ ಕ್ರೀಡಾ ಸೌಲಭ್ಯ ಗಳು ಗುಣಮಟ್ಟ ದಿಂದ ಕೂಡಿದ್ದು ಮಾದರಿಯಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಗದಗ ಜಿಲ್ಲಾ ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷರಾದ ಬಿ.ಬಿ.ಅಸೂಟಿ. ತಾಲ್ಲೂಕು ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷರಾದ ಅಶೋಕ ಮಂದಾಲಿ. ತಾಲ್ಲೂಕು ಗ್ಯಾರಂಟಿ ಯೋಜನಾ ಸಮಿತಿಯ ಸದಸ್ಯರಾದ ಕೃಷ್ಣ ಗೌಡ ಎಚ್ ಪಾಟೀಲ್ . ಗಣ್ಯರಾದ ಸಿದ್ದು ಪಾಟೀಲ್. ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶರಣು ಗೋಗೇರಿ ಸೇರಿದಂತೆ ಗಣ್ಯರು. ಹಿರಿಯರು. ಕ್ರೀಡಾಪಟುಗಳು ಹಾಜರಿದ್ದರು