25.3 C
New York
Friday, June 13, 2025

Buy now

spot_img

ಗದಗ : ಬೆಂಬಲ ಬೆಲೆ ಯೋಜನೆಯಡಿ ಕಡಲೆ ಖರೀದಿಗೆ ಬೆಲೆ ನಿಗದಿ

ಗದಗ :  ಜನೆವರಿ 28: 2024-25 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಕಡಲೆ ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಶನಿವಾರ 2024-25ನೇ ಸಾಲಿನ ಹಿಂಗಾರು ಹಂಗಾಮಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕಡಲೆ ಹುಟ್ಟುವಳಿಯನ್ನು ಖರೀದಿಸುವ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರದ ಮಾನದಂಡಗಳನ್ವಯ ಎಫ್.ಎ.ಕ್ಯೂ ಗುಣಮಟ್ಟವನ್ನು ದೃಢೀಕರಿಸಲು ಕ್ರಮ ವಹಿಸಬೇಕು. ಖರೀದಿ ಏಜೆನ್ಸಿಯವರು ತಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳು ಮೇಲುಸ್ತುವಾರಿ ತಪಾಸಣೆ ಕೈಗೊಳ್ಳಬೇಕು. ಪ್ರತಿ ಖರೀದಿ ಕೇಂದ್ರಕ್ಕೆ ಗ್ರೇಡರ್‌ಗಳನ್ನು ನೇಮಿಸಬೇಕು. ಜಿಲ್ಲೆಯ ಪ್ರತಿ ರೈತರಿಂದ ಎಕರೆಗೆ 4 ಕ್ವಿಂಟಲ್‌ನAತೆ ಗರಿಷ್ಟ 20 ಕ್ವಿಂಟಲ್ ಎಫ್.ಎ.ಕ್ಯೂ ಗುಣಮಟ್ಟದ ಕಡಲೆ ಕಾಳನ್ನು ಖರೀದಿಸಲು ಹಾಗೂ ಕಡಲೆ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಕಡಲೆ ಕಾಳು ಖರೀದಿಸಿದಂತೆ ಹಾಗೂ ಖರೀದಿ ಸಂಸ್ಥೆಗಳು ಯಾವುದೇ ರೀತಿಯ ದುರುಪಯೋಗ ಆಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೂಚಿಸಿದರು.

ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರು ಮಾತನಾಡಿ ಎಫ್.ಎ.ಕ್ಯೂ ಗುಣಮಟ್ಟದ ಕಡಲೆ ಹುಟ್ಟುವಳಿಗೆ ಪ್ರತಿ ಕ್ವಿಂಟಾಲ್‌ಗೆ ರೂ.5650 ರಂತೆ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ( ಮಾರ್ಕಫೆಡ್ ) ಸಂಸ್ಥೆಯನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ನೇಮಿಸಿದೆ . ರೈತರ ನೋಂದಣಿ ಕಾರ್ಯದ ಕಾಲಾವಧಿಯನ್ನು ಆದೇಶ ಹೊರಡಿಸಿದ ದಿನಾಂಕದಿAದ 80 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ಜರುಗಿಸಲಾಗುವುದು. ಜಿಲ್ಲೆಯ 69 ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ ಎಚ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ವಿನೋದಕುಮಾರ್ ಹೆಗ್ಗಳಗಿ, ತೋಟಗಾರಿಕೆ ಇಲಾಖೆ , ಸಹಕಾರಿ ಸಂಘಗಳ ಇಲಾಖೆ, ಕೃಷಿ ಮಾರಾಟ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು, ಮಾರ್ಕೆಟಿಂಗ್ ಫೆಡರೇಶನ್ ಶಾಖಾ ವ್ಯವಸ್ಥಾಪಕರು ಹಾಜರಿದ್ದರು.

 . 

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಯನ್ವಯ ಜಿಲ್ಲೆಯ 69 ಕಡೆಗಳಲ್ಲಿ ಕಡಲೆ ಖರೀದಿ ಕೇಂದ್ರಗಳು : ಗದಗ ತಾಲೂಕು (23): ಪಿಎಸಿಎಸ್‌ಬಿಂಕದಕಟ್ಟಿ, ಹೊಂಬಳ, ಬಳಗಾನೂರ,ಹರ್ಲಾಪುರ, ಕುರ್ತಕೋಟಿ, ಶಿರೋಳ, ಕೋಟುಮಚಗಿ-1, ಕೋಟುಮಚಗಿ-2, ಕಣಗಿನಹಾಳ, ಲಕ್ಕುಂಡಿ,ನೀರಲಗಿ, ಸೊರಟೂರ, ಕದಡಿ, ಮುಳಗುಂದ,ತಿಮ್ಮಾಪುರ, ನಾಗಾವಿ-2, ನಾಗಾವಿ-1, ಅಂತೂರ, ಎಚ್.ಎಸ್.ವೆಂಕಟಾಪೂರ, ಟಿ ಎ ಪಿ ಸಿ ಎಂ ಎಸ್ ಗದಗ , ಶ್ರೀ ಪ್ರಭುಸ್ವಾಮಿ ಪಿಎಸಿಎಸ್‌ಹೊಂಬಳ, ಶ್ರಮಜೀವಿ, ಎಫ್ ಪಿ ಓ ಹಿರೇಹಂದಿಗೋಳ , ಗದಗ ಕಾಟನ್ ಸೇಲ ಸೊಸೈಟಿ, ಗದಗ

ಶಿರಹಟ್ಟಿ ಮತ್ತು ಲಕ್ಷೆö್ಮÃಶ್ವರ ತಾಲೂಕು ( 6 ) : ಪಿ ಎ ಸಿ ಎಸ್ ಅಡರಗಟ್ಟಿ, ಶಿರಹಟ್ಟಿ, ಯಳವತ್ತಿ, ಟಿ ಎ ಪಿ ಸಿ ಎಂ ಎಸ್ ಲಕ್ಷೆö್ಮÃಶ್ವರ, ಶಿರಹಟ್ಟಿ, ಭೂ ಪರಿವರ್ತನೆ ಫಾರ್ಮರ್ಸ ಪ್ರೊಡ್ಯೂಜರ್ ಕಂ ಲಿ ಬೆಳ್ಳಟ್ಟಿ .

ಮುಂಡರಗಿ ( 6 ) : ಪಿಎಸಿಎಸ್ ಆಲೂರು, ಪೇಠಾಲೂರ, ಬರದೂರ, ಹಳ್ಳಿಕೇರಿ, ಟಿ ಎ ಪಿ ಸಿ ಎಂ ಎಸ್ ಮುಂಡರಗಿ, ಚಂದನವನ ಫಾರ್ಮರ್ಸ ಪ್ರೋಡ್ಯೂಜರ್ ಕಂ ಲಿ ಡಂಬಳ.

ನರಗುAದ ( 10) : ಪಿಎಸಿಎಸ್ ಚಿಕ್ಕನರಗುಂದ , ಜಗಾಪೂರ, ಶಿರೋಳ, ಸುರಕೋಡ, ಸಂಕದಾಳ, ಕೊಣ್ಣೂರ, ಹಿರೇಕೊಪ್ಪ, ಖಾನಾಪುರ-ಗಂಗಾಪೂರ, ಟಿಎಪಿಸಿಎಂಎಸ್ ನರಗುಂದ, ಬಾಬಾಸಾಹೇಬ ರೈತ ಉತ್ಪಾದಕ ಕಂ ಲಿ ನರಗುಂದ

ರೋಣ ಮತ್ತು ಗಜೇಂದ್ರಗಡ (24 )ಪಿಎಸಿಎಸ್ ಹೊಸಳ್ಳಿ , ಮಲ್ಲಾಪುರ, ರೋಣ-1, ರೋಣ-2, ಸೂಡಿ, ಸವಡಿ, ಯಾವಗಲ್, ಅಬ್ಬಿಗೇರಿ, ಬೆಳವಣಕಿ, ಇಟಗಿ, ನಿಡಗುಂದಿ, ಜಕ್ಕಲಿ, ಕೊತಬಾಳ, ಹೊಳೆ ಹಡಗಲಿ, ಹೊಳೆ ಆಲೂರ, ಯಾ.ಸ.ಹಡಗಲಿ, ಕೌಜಗೇರಿ, ಮೆಣಸಗಿ, ಹೊಳೆಮಣ್ಣೂರ, ಟಿ ಎ ಪಿ ಸಿ ಎಂ ಎಸ್ ರೋಣ, ಟಿ ಎ ಪಿ ಸಿ ಎಂ ಎಸ್ ಗಜೇಂದ್ರಗಡ, ಟಿ ಎ ಪಿ ಸಿ ಎಂ ಎಸ್ ನರೇಗಲ್ , ಜನಚೇತನ ಫಾರ್ಮರ್ಸ ಪ್ರೊಡ್ಯೂಸರ್ ಕಂಪನಿ, ಸೂಡಿ, ಭೂಮಿ ಸಂಜೀವಿನಿ ಫಾರ್ಮಸ ಪ್ರೊಡ್ಯೂಸಿಂಗ್ ಕಂಪನಿ ನಿ ಸವಡಿ .

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ಜಿ.ಪಂ. ಸಿಇಓ ಭರತ್ ಎಸ್ ಅವರಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಗದಗ : ನೀರಲಗಿ ಉಪ ಕೇಂದ್ರದಲ್ಲಿ ಡೆಂಗ್ಯು ವಿರೋಧಿ ಮಾಸಾಚರಣೆ ಗದಗ : ಸಭಾಪತಿ ಬಸವರಾಜ ಹೊರಟ್ಟಿ ಅವರಿಂದ ತ್ರಿಚಕ್ರ ವಾಹನ ವಿತರಣೆ ಗದಗ: ಬೇಸಾಯ ಕಾರ್ಯಕ್ರಮದಡಿ ಘಟಕಗಳ ನಿರ್ಮಾಣಕ್ಕೆ ಸಹಾಯಧನದಕ್ಕೆ ಅರ್ಜಿ ಆಹ್ವಾನ ಗದಗ : ಇಟ್ಟಿಗೆ ತುಂಬಿದ್ದ ಟ್ರ್ಯಾಕ್ಟರ್ ಟೇಲರ್ ಪಲ್ಟಿ ! ತಪ್ಪಿದ ಅನಾಹುತ !  ಗದಗ : ಶಿರಹಟ್ಟಿ ತಾಲೂಕಿನ ವಿವಿಧ ಕಾಮಗಾರಿಗೆ ಸಿ ಇ ಓ ಭೇಟಿ, ಪರಿಶೀಲನೆ ಗದಗ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಿಲ್ಲಾ ಪ್ರವಾಸ ಗದಗ : ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ ಶಿರೋಳ ಲೋಕಾಯುಕ್ತ ಬಲೆಗೆ ..! ಹುಬ್ಬಳ್ಳಿ : ನಿಂತಿದ್ದ ಲಾರಿಗೆ ಕಾರು ಡಿಕ್ಕಿ - ಮೂವರು ಸ್ಥಳದಲ್ಲೇ ಸಾವು ! ಗದಗ : ಶಾಲಾ ಬಸ್ ಪಲ್ಟಿ : ಚಾಲಕನಿಗೆ ಗಂಭೀರ ಗಾಯ !