ಗದಗ ಜನೇವರಿ25 : ಗದಗ-ಬೆಟಗೇರಿ ಅವಳಿ ನಗರದಲ್ಲಿ ಬೀದಿ ದನಗಳ ಹಾವಳಿ ಹೆಚ್ಚಾಗಿರುವ ಕುರಿತು ದೂರುಗಳು ನಗರಸಭೆಗೆ ಸ್ವೀಕೃತವಾಗಿದ್ದು ಹಾಗೂ ಸಾರ್ವಜನಿಕರಿಗೆ ಬೀದಿ ದನಗಳ ಹಾವಳಿಯಿಂದ ತೊಂದರೆಉAಟಾಗಿರುವ ಘಟನೆಗಳನ್ನ ಆಧರಿಸಿ ಗದಗ-ಬೆಟಗೇರಿ ನಗರಸಭೆ ವತಿಯಿಂದ ಬೀದಿ ದನಗಳನ್ನು ಹಿಡಿದು ಗೋಶಾಲೆಗೆ ರವಾನಿಸಲಿಕ್ಕೆ ನಿರ್ಣಯಿಸಲಾಗಿದೆ. ಇಲ್ಲಿಯವರೆಗೂ ಬೆಟಗೇರಿ ಭಾಗದ ಮಾರುಕಟ್ಟೆ ಪ್ರದೇಶದಲ್ಲಿ ಬೀದಿ ದನಗಳ ಹಿಡಿಯುವ ಕಾರ್ಯಚರಣೆ ನಡೆಸಿ ಪ್ರಮೋದಾತ್ಮ ಗೋ ಸಂರಕ್ಷಣಾ ಕೇಂದ್ರಕ್ಕೆ ಒಟ್ಟು 80 ಬೀದಿ ದನಗಳನ್ನು ಹಿಡಿದು ಗೋಶಾಲೆಗಳಿಗೆ ರವಾನಿಸಲಾಗಿರುತ್ತದೆ.
ಈ ಸಂದರ್ಭದಲ್ಲಿ sಗದಗ-ಬೆಟಗೇರಿ ನಗರಸಭೆಯ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಆನಂದಯ ಬದಿ, ಬೆಟಗೇರಿ ಪೋಲಿಸ್ ಠಾಣೆ ಉಪ ನಿರೀಕ್ಷಕ ಲಕ್ಷö್ಮಣ, ಹಿರಿಯಆರೋಗ್ಯ ನಿರೀಕ್ಷಕ ಎಂ.ಎA ಮಕಾಂದರ ಹಾಗೂ ನಗರಸಭೆಯ ಸಿಬ್ಬಂದಿಗಳಾದ ಕೆಂಚಪ್ಪ ಪೂಜಾರ, ವಾಸು ಹಾದಿಮನಿ ಹಾಗೂ ಪೌರಕಾರ್ಮಿಕ ಸಿಬ್ಬಂದಿಗಳು ಪಾಲ್ಗೊಂಡಿದ್ದರು.