ಪಾಪನಾಶಿ : ಗದಗ ತಾಲೂಕ ಪಾಪನಾಶಿ ಗ್ರಾಮದ ಶ್ರೀ ಕಲ್ವೇಶ್ವರ ಜಾತ್ರಾ ಮಹೋತ್ಸವ ಇದೇ ಶ್ರೀ ಶಾಲಿವಾಹನಶಕೆ 1946 ನೇ ಕ್ರೋಧಿನಾಮ ಸಂವತ್ಸರ ಪುಷ್ಯ ಬಹುಳ ದಿನಾಂಕ 14-01-2025 ನೇ ಮಂಗಳವಾರ ಮಕರ ಸಂಕ್ರಮಣದಂದು ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವವಿದ್ದು.
ಅಂದು ಬೆಳಿಗ್ಗೆ 5-30 ಕ್ಕೆ ಕಲ್ಮೇಶ್ವರ ಮೂರ್ತಿಗೆ ರುದ್ರಾಭಿಷೇಕ ಜರುಗುವುದು ನಂತರ ಬೆಳಿಗ್ಗೆ ಶ್ರೀ ಕಲ್ಮೇಶ್ವರ ಮೂರ್ತಿಯ ಮೆರವಣಿಗೆಯು ಭಗಳಾಂಬಿಕಾ ಮಠದಿಂದ ಶ್ರೀ ಕಲ್ವೇಶ್ವರ ಭಜನಾ ಸಂಘ ಹಾಗೂ ಝಾಂಜ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ಶ್ರೀ ಕಲ್ಮೇಶ್ವರ ಮಂದಿರ ತಲುಪುವುದು.
ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗುವುದು. ಸಾಯಂಕಾಲ 5-30 ಕ್ಕೆ ಸಹಸ್ರಾರು ಭಕ್ತರ ಜಯಘೋಷಗಳೊಂದಿಗೆ ರಥೋತ್ಸವ ಕಾರ್ಯಕ್ರಮ ಜರುಗುವುದು.
ಮರು ದಿವಸ ದಿನಾಂಕ 15-01-2025 ನೇ ಬುಧವಾರದಂದು ಬೆಳಿಗ್ಗೆ ಶ್ರೀ ಕಲ್ಮೇಶ್ವರನಿಗೆ ಪೂಜಾ ಕಾರ್ಯಕ್ರಮ ಜರುಗುವುದು. ಸಾಯಂಕಾಲ 5-30 ಕ್ಕೆ ಲಘು ರಥೋತ್ಸವ (ಕಡುಬಿನ ಕಾಳಗ) ಜರುಗುವುದು. ಕಾರಣ ಸಕಲ ಸದ್ಭಕ್ತರು ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸಿ, ಕಲ್ಮೇಶ್ವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ಸರ್ವರಿಗೂ ಆದರದ ಸ್ವಾಗತ
ಪಾಪನಾಶಿ ಗ್ರಾಮದ ಗುರು-ಹಿರಿಯರು ಹಾಗೂ ಪಾಪನಾಶಿ ತಾಂಡಾ ಗ್ರಾಮದ ಗುರು-ಹಿರಿಯರು ಶ್ರೀ ಕಲ್ಮೇಶ್ವರ ಭಜನಾ ಸಂಘ ಹಾಗೂ ಯಾವತ್ತೂ ಸದ್ಭಕ್ತ ಮಂಡಳಿಯವರು