ಗದಗ ಜ.9 : 2024-25ನೇ ಸಾಲಿನ ಶೇ5% ಯೋಜನೆಯ ಅಂಗವಿಕಲ ವಿಕಲಚೇತನ ಫಲಾನುಭವಿಗಳಿಗೆ ಎಸ್.ಎಫ್.ಸಿ ಮತ್ತು ನಗರಸಭೆ ನಿಧಿ ಅನುದಾನದಡಿ ಲ್ಯಾಪಟಾಪ್ ಖರಿದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ ಜನೆವರಿ 27 ಆಗಿದ್ದು ಫಲಾನುಭವಿಗಳು ಅರ್ಜಿಯನ್ನು ಗದಗ ಬೆಟಗೇರಿ ನಗರಸಭೆ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಈಗಾಗಲೇ ಸೌಲಭ್ಯ ಪಡೆದಂತಹ ಫಲಾನುಭವಿಗಳು ಅರ್ಹರಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಗದಗ ಬೆಟಗೇರಿ ನಗರದ ನಗರಸಭೆ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ.