ಗದಗ : ಜನೆವರಿ 7: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಗದಗ ರವರ ವತಿಯಿಂದ 15 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ದೈಹಿಕ ವಿಕಲಚೇತನರಿಗಾಗಿ ಅನುಷ್ಠಾನಗೊಳ್ಳುತ್ತಿರುವ ಬ್ಯಾಟರಿಚಾಲಿತ ವ್ಹೀಲ್ ಚೇರ್ ಯೋಜನೆ 2024-25ನೇ ಸಾಲಿನಲ್ಲಿ ಆನಲೈನ್ ಆಗಿರುತ್ತದೆ ಆದ್ದರಿಂದ ಗದಗ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿಕಲಚೇತನ ಫಲಾನುಭವಿಗಳು ಆನ್‌ಲೈನ್ ಮೂಲಕ ( Sevasindhu website URL: https://suvidha.karnataka.gov.in / ) ಫೋರ್ಟಲ್‌ನಲ್ಲಿ ಜನೆವರಿ 21 ರವರೆಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಗದಗ ಜಿಲ್ಲೆಯ ತಾಲ್ಲೂಕ ಪಂಚಾಯತಿ ವ್ಯಾಪ್ತಿಯಲ್ಲಿರುವ ಕಾರ್ಯನಿರ್ವಹಿಸುತ್ತಿರುವ ಎಮ್.ಆರ್.ಡಬ್ಲೂö್ಯ, ತಾಲ್ಲೂಕ್ ಪಂಚಾಯತ, ಗದಗ 8867556465 ; ಎಮ್.ಆರ್.ಡಬ್ಲೂö್ಯ, ತಾಲ್ಲೂಕ್ ಪಂಚಾಯತ, ರೋಣ–9741615926 ;ಎಮ್.ಆರ್.ಡಬ್ಲೂö್ಯ,ತಾಲ್ಲೂಕ್ ಪಂಚಾಯತ, ಮುಂಡರಗಿ 9611922445 ; ಎಮ್.ಆರ್.ಡಬ್ಲೂö್ಯ, ತಾಲ್ಲೂಕ್ ಪಂಚಾಯತ, ಶಿರಹಟ್ಟಿ 8951128679 ; ಎಮ್.ಆರ್.ಡಬ್ಲೂö್ಯ, ತಾಲ್ಲೂಕ್ ಪಂಚಾಯತ, ನರಗುಂದ – 9591679022 ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಗದಗ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ: 029 ರ ದೂರವಾಣಿ ಸಂಖ್ಯೆ: 08372-220419 ಮೂಲಕ ಸಂಪರ್ಕಿಸಬಹುದಾಗಿದೆ .
ಈ ಸೌಲಭ್ಯ ಪಡೆಯುವ 15 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ದೈಹಿಕ ವಿಕಲಚೇತನರು ಸರ್ಕಾರ/ಇಲಾಖೆಯ ಯೋಜನೆಯಡಿ/ಶಾಸಕರು ಹಾಗೂ ಸಂಸಧರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ/ಸ್ಥಳೀಯ ಸಂಘ-ಸಂಸ್ಥೆ/ಬೇರೆ ಯಾವುದೇ ಇಲಾಖೆಯಿಂದ ಈ ಮೊದಲು ವಿಕಲಚೇತನರ ಬ್ಯಾಟರಿಚಾಲಿತ ವ್ಹೀಲ್‌ಚೇರ್ ಪಡೆದಿರಬಾರದು ಎಂದು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.