15.7 C
New York
Friday, May 9, 2025

Buy now

spot_img

ಗದಗ : ಭಕ್ತ ಕನಕದಾಸರ ೫೩೭ ಜಯಂತ್ಯೋತ್ಸವ ಮತ್ತು ಬೀರಲಿಂಗೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಆಚರಣೆ 

ಗದಗ : ಡಿ.15 : ತಾಲೂಕಿನ ಅಡವಿಸೋಮಾಪೂರ ಗ್ರಾಮದಲ್ಲಿ ಜರುಗಿದ ಭಕ್ತ ಕನಕದಾಸರ ೫೩೭ ಜಯಂತ್ಯೋತ್ಸವ ಹಾಗೂ ಬೀರಲಿಂಗೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಸಮಾರಂಭವನ್ನು ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು.

ಗದಗ ತಾಲೂಕಿನ ಅಡವಿಸೋಮಾಪೂರ ಗ್ರಾಮದಲ್ಲಿ ಜರುಗಿದ ಭಕ್ತ ಕನಕದಾಸರ ೫೩೭ ಜಯಂತ್ಯೋತ್ಸವ ಹಾಗೂ ಬೀರಲಿಂಗೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಸಮಾರಂಭವನ್ನು ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಡೊಳ್ಳು ಬಾರಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಯುವ ಜನತೆ ದುಷ್ಟಚಟಗಳಿಂದ ದೂರ ಉಳಿಯಲು ಕರೆ

ಗದಗ : ತಂದೆ-ತಾಯಿಯರು ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಉತ್ತಮ ನಾಗರಿಕನನ್ನಾಗಿ ಮಾಡುವ ಗುರುತರ ಜವಾಬ್ದಾರಿಯನ್ನು ಮರೆಯಬಾರದೆಂದು ಎಂದು ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ ಹೇಳಿದರು.

 ಅವರು ಗದಗ ತಾಲೂಕಿನ ಅಡವಿಸೋಮಾಪೂರ ಗ್ರಾಮದಲ್ಲಿ ಜರುಗಿದ ದಾಸಶ್ರೇಷ್ಠ ಭಕ್ತ ಕನಕದಾಸರ ೫೩೭ ಜಯಂತ್ಯೋತ್ಸವ ಹಾಗೂ ಬೀರಲಿಂಗೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.

 ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಇದರ ನಡುವೆ ಬದುಕಿನಲ್ಲಿ ಮಾಡುವ ಪ್ರತಿಯೊಂದು ಉತ್ತಮ ಕೆಲಸ ಕಾರ್ಯಗಳು ಬಹಳ ಮುಖ್ಯವಾದದು. ಯುವ ಜನತೆ ದುಷ್ಟಚಟಗಳಿಂದ ದೂರ ಉಳಿದು ದೀಘ್ರಾಆಯುಷಿಗಳಾಗಬೇಕೆಂದು ಹೇಳಿದರು.

 ಶಹರಗಳಿಂತ ಹಳ್ಳಿಗಳಲ್ಲಿ ಹಿರಿಯರನ್ನು ಗೌರವದಿಂದ ಕಾಣುವುದು ಕಡಿಮೆಯಾಗುತ್ತಿದೆ. ಎಂದು ವಿಷಾಧಿಸಿದ ಅವರು ಹಿರಿಯರ ಮಾತುಗಳನ್ನು ಪಾಲಿಸಿ, ಗೌರವದಿಂದ ನಡೆದುಕೊಳ್ಳುವುದನ್ನು ಕಲಿಯುವ ಜೊತೆಗೆ ಆರ್ಥಿಕವಾಗಿ ಸಲಭರಾಗಿ, ಸುದಾರಣೆಯತ್ತ ಸಾಗಲು ಯುವ ಜನತೆಗೆ ತಿಳಿಸಿದರು.

 ಸಮಾರಂಭವನ್ನು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ದಾಸಶೇಷ್ಠ ಭಕ್ತ ಕನಕದಾಸರ ಜೀವನ, ಚರಿತ್ರೆ ಸೇರಿದಂತೆ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸಗಳನ್ನು ಮಾಡಬೇಕು. ಇಂತಹ ಕಾರ್ಯಕ್ರಮಗಳ ಅತ್ಯಂತ ಅಚ್ಚುಕಟ್ಟಾಗಿ ನಿಬಾಯಿಸಿಬೇಕೆಂದು ತಿಳಿಸಿದ ಅವರು ಹತ್ತು ಹಲವಾರು ಸಂಗತಿಗಳನ್ನು ತಿಳಿಸಿದರು.

 ಹಾಲುಮತ ಮಹಾಸಭಾದ ರಾಜಾಧ್ಯಕ್ಷ ರುದ್ರಣ್ಣ ಗುಳಗುಳಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗ್ರಾಮಸ್ಥರು ಸನ್ಮಾನಿಸಿ ಮಾತನಾಡಿದ ಅವರು ಕಾರ್ತಿಕ ಮಾಸದಲ್ಲಿ ಸಾಮೂಹಿಕವಾಗಿ ದೀಪ ಹಚ್ಚುವ ಮಹತ್ವವನ್ನು ತಿಳಿಸಿ, ನಾಡಿನ ಪರಂಪರೆ ಮರೆಯದೆ, ದಾಸರು, ಶರಣರು, ಸಂತರು ನೀಡಿದ ಮಾರ್ಗದರ್ಶನಲ್ಲಿ ಸಾಗಬೇಕು ಎಂದರು.

 ಕಾಂಗ್ರೆಸ್ ಯುವ ಮುಖಂಡ ಪ್ರಕಾಶ ಕರಿ, ತಾಪಂ ಮಾಜಿ ಸದಸ್ಯ ಪ್ರಲ್ಹಾದ ಹೊಸಳ್ಳಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

 ಸಮಾರಂಭದ ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ಕೀರ್ತಿ ಪಾಟೀಲ, ಆನಂದಪ್ಪ ಪುರದ, ಈರಪ್ಪ ಹೊಸಳ್ಳಿ, ಅರುಣ ಅಣ್ಣಿಗೇರಿ, ಈರಪ್ಪ ದೊಡ್ಡಮನಿ, ಕಾಶೀಮಸಾಬ ಹರಿವಾಣ, ಜಮಾಲಸಾಬ ಬೇಲೇರಿ, ಮಂಜುನಾಥ ಜಡಿ, ಬಾಳಪ್ಪ ಕೊಪ್ಪದ, ಜನಪದ ಕಲಾವಿದ ಹನಮಂತ ಬಟ್ಟೂರ, ಹೇಮಂತ ಎಸ್‌ಜಿ, ಕುಮಾರ ಮಾರನಬಸರಿ, ಅಚ್ಚು, ಪ್ರವೀಣ, ಸಚ್ಚಿನ, ಸುನೀಲ, ರವಿ ಹುಡೇದ, ಬಸಣ್ಣ ಕರಬಷ್ಠಿ ಸೇರಿದಂತೆ ಗ್ರಾಮದ ಹಿರಿಯರು, ಯುವ ಮುಖಂಡರು, ತಾಯಂದಿರು ಹಾಗೂ ಮುಂತಾದವರು ಉಪಸ್ಥಿತಿದ್ದರು.

ಸಮಾರಂಭದಲ್ಲಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಮಹನೀಯರಿಗೆ, ಹಿರಿಯರಿಗೆ ಹಾಗೂ ಮುಂತಾದವರಿಗೆ ಸನ್ಮಾನಿಸಲಾಯಿತು.

 ಸಮಾರಂಭಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳಿನ ಮೇಳದೊಂದಿಗೆ ದಾಸಶೇಷ್ಠ ಭಕ್ತ ಕನಕದಾಸರ ಭಾವಚಿತ್ರ ಮೆರವಣಿಗೆಯ ಜರುಗಿತು. ಮೆರವಣಿಗೆಗೆ ಮಾಜಿ ಶಾಸಕ ಬಿ.ಆರ್. ಯಾವಗಲ್ ಅವರು ಚಾಲನೆ ನೀಡಿದರು.

 ಸ್ಥಳೀಯ ಶ್ರೀ ಸಿದ್ದಲಿಂಗೇಶ್ವರ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಲಂಬಾಣಿ ನೃತ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯ: ಎ... ಗದಗ : ಲಂಚ ಸ್ವೀಕಾರ : ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ ! ಗದಗ : ಮನೆಯಲ್ಲೇ ನೇಣಿಗೆ ಶರಣಾದ ನವದಂಪತಿ! ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ: ಜಯದೇವ ಕಡಗಿ IPL 2025: 35 ಎಸೆತಗಳಲ್ಲಿ ಶತಕ ಮಹಾ ದಾಖಲೆ ಬರೆದ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ ಗದಗ : ಭೋವಿ ಸಮಾಜದ ಹೆಮ್ಮೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಟಿ ಬಿಸನಳ್ಳಿ ಗೆ ಗೌರವ ಡಾಕ್ಟರೇಟ್ ಪದವಿ