ಗದಗ ಡಿಸೆಂಬರ್ 5: ಯುವ ಮತದಾರರು ಎನ್.ವಿ.ಡಿ ಸ್ಫರ್ಧೆಯಲ್ಲಿ ಭಾಗವಹಿಸಿ ಚುನಾವಣೆ ಮಹತ್ವ ತಿಳಿದು ಜಾಗೃತರಾಗಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು
ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳಾದ ಸಿ. ಆರ್. ಮುಂಡರಗಿ ಅವರು ಹೇಳಿದರು.
ನಗರದ ಸರ್ಕಾರಿ ಪದವಿ-ಪೂರ್ವ ಕಾಲೇಜನಲ್ಲಿ ಗುರುವಾರ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ, ಶಾಲಾ ಶಿಕ್ಷಣ ಇಲಾಖೆ (ಪದವಿ-ಪೂರ್ವ) ಸಹಯೋಗದಲ್ಲಿ ಏರ್ಪಡಿಸಿದ ಜಿಲ್ಲಾ ಮಟ್ಟದ ಎನ್.ವಿ.ಡಿ ಸ್ಫರ್ಧೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ ನೂತನ ಮತ್ತು ಭವಿಷ್ಯದ ಯುವ ಮತದಾರರಲ್ಲಿ ಚುನಾವಣಾ ಮತ್ತು ಮತದಾನ ಪ್ರಕ್ರಿಯೆಗಳಿಗೆ ಸಂಬAಧಿಸಿದAತೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ “ಮತದಾರರ ಸಾಕ್ಷರತಾ ಸಂಘ” [ಇಟeಛಿಣoಡಿಚಿಟ ಐiಣeಡಿಚಿಛಿಥಿ ಅಟubs] ಗಳನ್ನು ಹಾಗೂ ಪ್ರತಿ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಕೇಂದ್ರಗಳಲ್ಲಿ ಚುನಾವಣಾ ಪಾಠಶಾಲೆ [ಚುನಾವಣಾ ಜಾಗೃತಿ ಸಂಘ] ಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ, ಈ ಶೈಕ್ಷಣಿಕ ಸಂಸ್ಥೆಗಳಲ್ಲಿ ಯುವ ಮತದಾರರಿಗೆ ಚುನಾವಣೆ ಮಹತ್ವ, ಜಾಗೃತಿ ಮೂಡಿಸುವ ಹಾಗೂ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳುವ ವಿಷಯಾಧಾರಿತ ಕನ್ನಡ & ಆಂಗ್ಲ ಭಾಷೆಯಲ್ಲಿ ಪ್ರಬಂಧ ರಚಿಸುವುದು, ರಸ ಪ್ರಶ್ನೆ, ಮತ್ತು ಭಿತ್ತಿ ಚಿತ್ರಗಳನ್ನು ಬಿಡಿಸುವುದು ಹಾಗೂ ಕಡಿಮೆ ಮತದಾನವಾಗಿರುವ ನಗರ ಪ್ರದೇಶದ ಚುನಾವಣೆಯಲ್ಲಿ ಭಾಗವಹಿಸುವಿಕೆಯಿಂದ ಆಗುವ ಪ್ರಯೋಜನೆಗಳು ಕುರಿತು ಕಿರು ನಾಟಕ ಸ್ಪರ್ಧೆಗಳನ್ನು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಆಯೋಜಿಸಲು ವೇಳಾಪಟ್ಟಿಯನ್ನು ಹೊರಡಿಸಿಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಸಿದ್ಧಲಿಂದ ಬಂಡು ಮಸನಾಯಕ, ಸರ್ಕಾರಿ ಪದವಿ-ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಪೂರ್ಣಿಮಾ ಹೊಸಮನಿ, ಜಿಲ್ಲಾ ರಾಜ್ಯಶಾಸ್ತç ಉಪನ್ಯಾಸಕರ ವೇದಿಕೆ ಅಧ್ಯಕ್ಷರಾದ ಎಂ. ಎಸ್. ಮುಲ್ಲಾ, , ಗದಗ, ಗದಗ ಜಿಲ್ಲಾ ಘಟಕ, ಶ್ರೀ. ಕೆ. ಎಂ. ಮಾಕಣ್ಣವರ, ಮತ್ತು ಶ್ರೀ. ಎಸ್. ಐ. ಮೇಟಿ ಹಾಗೂ ಶ್ರೀ ನವೀನ್ ಅಳವಂಡಿ, ಜಿಲ್ಲಾ ಇಐಅ ಜಿಲ್ಲಾ ಸಂಯೋಜಕರು,ವಿದ್ಯಾರ್ಥಿಗಳು ಉಪಸ್ಥಿತಿಯಿದ್ದರು.