ಗದಗ : ನಗರದ ಹೆಸರಾಂತ ವಿಶ್ವ ಲಾಡ್ಜ್ ನಲ್ಲಿ ಯುವಕನೊಬ್ಬ ಲಾಡ್ಜ್ ರೂಂ ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ನಿವಾಸಿಯಾದ ಜಗದೀಶ್ ದೇವಪ್ಪ ಹಳೆಮನಿ (33) ಶನಿವಾರ ರಾತ್ರಿ 10:30 ಗಂಟೆಗೆ ರೂಂ ಮಾಡಿಕೊಂಡು ಇಂದು ಮಧ್ಯಾಹ್ನ ವಿಶ್ವ ಹೋಟೆಲ್ ದಲ್ಲಿರುವ ರೂಂ ನಲ್ಲಿ ಪ್ಯಾನಗೆ ಹಗ್ಗದಿಂದ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹಲವಾರು ತಿಂಗಳಿಂದ ಆನ್‌ಲೈನ್ ಗೇಮ್ ನಲ್ಲಿ ಜಗದೀಶ್ ಮಗ್ನನಾಗಿದ್ದ. ರಮ್ಮಿ ಆನ್‌ಲೈನ್ ಗೇಮ್ ನಲ್ಲಿ ಆಟವಾಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಶರಣಾಗಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಗದಗ ಶಹರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.