29.3 C
New York
Saturday, June 28, 2025

Buy now

spot_img

ಗದಗ : ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿ ಕಣ್ಮುಚ್ಚಿದ ವಿದ್ಯುತ್‌ ದೀಪಗಳು

ಗದಗ : ನಗರದ ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿ ರುವ ವಿದ್ಯುತ್ ಕಂಬಗಳ ಅಸಮರ್ಪಕ ನಿರ್ವಹಣೆಯಿಂದಾಗಿ ವಿದ್ಯುತ್‌ ದೀಪಗಳು ಹಾಳಾಗಿದ್ದು, ಈ ಮಾರ್ಗದಲ್ಲಿ ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ.

ಗದಗ ನಗರದ ಹಳೆ ಡಿಸಿ ಆಫೀಸ್ ಬಳಿಯಿಂದ ರಿಂಗ್ ರಸ್ತೆ ವರೆಗಿನ ರಸ್ತೆಯಲ್ಲಿರುವ ಬಹುತೇಕ ವಿದ್ಯುತ್ ಕಂಬಗಳ ದೀಪಗಳ ಸ್ವಿಚ್‌ಗಳು ಹಾಳಾಗಿವೆ. ವಿದ್ಯುತ್ ಕಂಬಗಳಲ್ಲಿ ಅಳವಡಿಸಲಾಗಿರುವ ಕೆಲವೊಂದು ಸ್ವಿಚ್‌ಗಳು ಮುರಿದು ಬಿದ್ದಿದ್ದರೆ ಮತ್ತೆ ಕೆಲವು ಹೊರಬಂದಿವೆ.ಅಸಮರ್ಪಕ ನಿರ್ವಹಣೆಯಿಂದಾಗಿ ಈ ರೀತಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ರಾತ್ರಿ ವೇಳೆ ತಿರುಗಾಡುವುದು ಕಷ್ಟ ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ  ಕುಡುಕರ ತಾಣವಾಗಿದೆ. ಮತ್ತು ರಿಂಗ್ ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ವಾಹನಗಳ ಓಡಾಟ ಹೆಚ್ಚಾಗಿರುತ್ತದೆ. ವಿದ್ಯುತ್ ದೀಪಗಳು ಸರಿಯಾಗಿ ಕೆಲಸ ನಿರ್ವಹಿಸದೆ ಇರುವುದರಿಂದ ಸಣ್ಣ ವಾಹನಗಳು (ಬೈಕ್, ಆಟೋ) ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಚಲಿಸಲು ಕಷ್ಟವಾಗುತ್ತಿದೆ. ವಾಹನಗಳು ಎಗ್ಗಿಲ್ಲದೇ ನುಗ್ಗುವ ಈ ರಸ್ತೆಯಲ್ಲಿ ಸ್ಥಳೀಯರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವ ವೇಳೆ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿಯಿದೆ. ಹಲವು ತಿಂಗಳಿನಿಂದಲೂ ಈ ಸಮಸ್ಯೆ ಇದ್ದು, ತಕ್ಷಣ ಪರಿಹಾರ ಒದಗಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news