ಗದಗ ಸೆಪ್ಟೆಂಬರ್ 30 ; ಗದಗ ಬೆಟಗೇರಿ ನಗರಸಭೆ ವ್ಯಾಪ್ತಿಗೆ ಬರುವ 2022-23 ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆ ಮತ್ತು ಡಾ. ಬಿ ಆರ್ ಅಂಬೇಡ್ಕರ ನಿವಾಸ ಯೋಜನೆಯ ಒಟ್ಟು 500 ಹೆಚ್ಚುವರಿ ಗುರಿ ಮನೆಗಳಿಗೆ ನಿಗದಿಪಡಿಸಿದ್ದು ಇರುತ್ತದೆ.
ಇದರ ವಿವರ ಈ ಕೆಳಗಿನಂತೆ ಇರುತ್ತದೆ.
ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ – ಗುರಿ – ಪರಿಶಿಷ್ಟ ಜಾತಿ 86, ಪರಿಶಿಷ್ಟ ಪಂಗಡ 35; ವಾಜಪೇಯಿ ನಗರ ವಸತಿ ಯೋಜನೆ – ಸಾಮಾನ್ಯ 329 , ಅಲ್ಪಸಂಖ್ಯಾತರು- 50.
ಸದರಿ ಗುರಿಗಳ ಪ್ರಕಾರ ಫಲಾನುಭವಿಗಳ ಆಯ್ಕೆಗಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಫಲಾನುಭವಿಗಳ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೊಬರ್ 20 ಆಗಿರುತ್ತದೆ.
ಬೇಕಾಗಿರುವ ದಾಖಲಾತಿಗಳು : ನಿಗದಿತ ನಮೂನೆ ಅರ್ಜಿ, ಸ್ವಂತ ಖಾಲಿ ನಿವೇಶನ ಉತಾರ (ಫಾರಂ ನಂ 3 ಚಾಲ್ತಿಯಲ್ಲಿ ಇರುವ) ರೇಶನ್‌ಕಾರ್ಡ (ಬಿ.ಪಿ.ಎಲ್), ಚುನಾವಣೆ ಗುರುತಿನ ಚೀಟಿ, ಜಾತಿ ಮತ್ತು ಆದಾಯ ( ಚಾಲ್ತಿಯಲ್ಲಿಇರುವ), 2 ಪಾಸ್‌ಪೋರ್ಟ ಸೈಜ್ ಪೋಟೊ, ಬ್ಯಾಂಕ ಪಾಸ್ ಬುಕ್ ಪ್ರತಿ (ಚಾಲ್ತಿಯಲ್ಲಿಇರುವ) ಆಧಾರಕಾರ್ಡ.