Friday, October 18, 2024
Google search engine
Homeಗದಗಗದಗ : ಜಿಲ್ಲೆಯ ಗುರುಭವನ ಎಲ್ಲರಿಗೂ ಮಾದರಿ ಆಗಬೇಕು : ಸಚಿವ ಡಾ. ಎಚ್.ಕೆ.ಪಾಟೀಲ

ಗದಗ : ಜಿಲ್ಲೆಯ ಗುರುಭವನ ಎಲ್ಲರಿಗೂ ಮಾದರಿ ಆಗಬೇಕು : ಸಚಿವ ಡಾ. ಎಚ್.ಕೆ.ಪಾಟೀಲ

ಗದಗ ಜಿಲ್ಲಾ ಗುರುಭವನದ ಭೂಮಿ ಪೂಜೆ ಮತ್ತು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಸಮಾರಂಭ

ಗದಗ 28 : ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿ ಮಾಡಿ ದೇಶಕ್ಕೆ ಕೊಡುಗೆ ಆಗಿ ನೀಡಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ ಅವರು ಹೇಳಿದರು.

ನಗರದ ಡಾ.ಬಿ ಆರ್ ಅಂಬೇಡ್ಕರ್ ಭವನದಲ್ಲಿ ಶನಿವಾರ ಜಿಲ್ಲಾ ಗುರು ಭವನದ ಭೂಮಿ ಪೂಜೆ ಮತ್ತು ಸರಕಾರಿ ಪ್ರಾಥಮಿಕ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಲವಾರು ಜನರ ಸತತ ಪ್ರಯತ್ನ ದಿಂದ ಇಂದು ನಗರದ ಆದರ್ಶ ಕಾಲೋನಿಯಲ್ಲಿ ಗುರುಭವನಕ್ಕೆ ಭೂಮಿ ಪೂಜೆ ಸಲ್ಲಿಸಲಾಯಿತು, ಈ ಗುರುಭವನವು ಕೇವಲ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಂಬಂಧಿಸಿದಲ್ಲದೆ, ಎಲ್ಲಾ ಶಿಕ್ಷಕರಿಗೆ ಸೇರಿದ್ದು,ಇದನ್ನು ಕೇವಲ ಮದುವೆ ಸಮಾರಂಭಗಳಿಗೆ ಉಪಯೋಗಿಸಲು ಸೀಮಿತಗೊಳಿಸದೆ,ಗುರುಭವನದಲ್ಲಿ ಎಲ್ಲರಿಗೂ ಓದಲು ಡಿಜಿಟಲ್‌ ಗ್ರಂಥಾಲಯ ನಿರ್ಮಾಣವಾಗಿ ,ಬೃಹತ್ತಾಕಾರದ ಮಾದರಿ ಗುರುಭವನ ತೆಲೆ ಎತ್ತಿ ನಿಲ್ಲಬೇಕು ಎಂದು ನುಡಿದರು.

ಗುರುಭವನದ ಕ್ರೀಯಾಯೋಜನೆಯನ್ನು ಆದಷ್ಟು ಬೇಗನೆ ಆಸಕ್ತಿಯಿಂದ ತಯಾರಿಸಿ 2 ತಿಂಗಳೊಳಗೆ ಮುಗಿಸಿ ಅದಕ್ಕೆ ಬೇಕಾದ ಅನುದಾನಕ್ಕೆ ಪ್ರಸ್ತಾವಣೆ ಸಲ್ಲಿಸಿ ನಿರ್ಮಾಣದ ಕಾರ್ಯ ಆದಷ್ಟು ಬೇಗ ಪ್ರಾರಂಭಸಿ ಎಲ್ಲರಿಗೂ ಶಿಕ್ಷಣ ಮತ್ತು ಶಿಕ್ಷಕರ ಬಗ್ಗೆ ಜ್ಞಾನೋದಯ ಗೊಳ್ಳುವ ರೀತಿ ನಿರ್ಮಾಣ ಆಗಬೇಕು ಎಂದರು.

ಸರ್ಕಾರಿ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಅರಸಿ ಬರುತ್ತಾರೆ ಅವರನ್ನು ಶಿಕ್ಷಕರು ತಮ್ಮ ಮಕ್ಕಳೆಂದ ತಿಳಿದು ಉತ್ತಮ ಶಿಕ್ಷಣ ನೀಡಬೇಕು,ಕೆಲವರು ಕೇವಲ ನಗರದ ಮಕ್ಕಳು ಬೌದ್ಧಿಕ ವಾಗಿ ಮುಂದೆ ಇರುತ್ತಾರೆ ಎನ್ನುತ್ತಾರೆ ಮತ್ತು ಹಿಂದಿನ ಶ್ರೇಣಿಕೃತ ವ್ಯವಸ್ಥೆಯಲ್ಲಿ ಉನ್ನತ ಸಮುದಾಯದವರು ಮಾತ್ರ ಶಿಕ್ಷಣ ಪಡೆದು ಉತ್ತಮ ಅಂಕಗಳಿಸುತ್ತಾರೆ ಎಂಬುವುದಿತ್ತು,ಆದರೆ ಈಗ ಕಾಲ ಬದಲಾಗಿದೆ ಶೋಷಿತ ವರ್ಗ ಎಂದು ಗುರುತಿಸಿಕೊಂಡವರು ಸಹ ಉತ್ತಮ ಅಂಕಗಳನ್ನು ಪಡೆಯುತ್ತಿದ್ದಾರೆ ಅದೇರೀತಿ ಗ್ರಾಮೀಣ ಮಕ್ಕಳಲ್ಲಿಯೂ ಎಲ್ಲಾ ರೀತಿಯ ಬೌದ್ಧಿಕ ಪ್ರತಿಭೆ, ಚಾಣಾಕ್ಷ ತನಕ್ಕೆ ಕೊರತೆಯಿಲ್ಲ,ಸರ್ಕಾರಿ ಶಾಲೆಗಳು ಎಂದರೆ ಕೇವಲವಾಗಿ ಕಾಣದೇ ಅಸುಂಡಿ,ಹೊಸಳ್ಳಿ,ಹುಲಕೋಟಿ ಗ್ರಾಮದ ಸರ್ಕಾರಿ ಶಾಲೆಯ ಗುಣಮಟ್ಟದಂತೆ ಎಲ್ಲಾ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.

ಅಂಬೇಡ್ಕರ್ ಅವರು ಹೇಳಿದಂತೆ ಮಕ್ಕಳಿಗೆ ಶಿಕ್ಷಣ ಅತ್ಯವಶ್ಯಕ ಅವರನ್ನು ಕೇವಲ ಆರ್ಟಿಕಲ್ ಸಂವಿಧಾನಕ್ಕೆ ಸೀಮಿತ ಗೊಳಿಸದೇ ಅವರ ಮಾರ್ಗದರ್ಶನವನ್ನು ನಾವೆಲ್ಲರು ಪಾಲಿಸಿ,ಎಲ್ಲಾ ಶಿಕ್ಷಕರು ಆನಂದಿಂದ ತಮ್ಮನ್ನು ತಾವು ಮಕ್ಕಳಿಗೆ ಜ್ಞಾನದ ಒಕ್ಕಲುತನ ಕಾರ್ಯದಲ್ಲಿ ತೊಡಗಿಸಿಕೊಳ್ಳಿ ಎಂದು ಕರೆ ನೀಡಿದರು.

ಗದಗ ಜಿಲ್ಲೆಯೂ ಎಸ್ ಎಸ್ ಎಲ್ ಸಿ ಫಲಿತಾಂಶ ದಲ್ಲಿ ಕಳೆದ ವರ್ಷದ 26 ಸ್ಥಾನದಿಂದ ಈ ವರ್ಷ 15 ನೇ ಸ್ಥಾನಕ್ಕೆ ಬಂದಿದೆ,ಅದೇರೀತಿ ಪಿಯುಸಿಯ ಫಲಿತಾಂಶ ವನ್ನು ಸುಧಾರಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ನುಡಿದರು.

ಶಾಲೆಯಲ್ಲಿ ಶೋಷಣೆ ಮುಕ್ತ ವಾತವರಣ ನಿರ್ಮಾಣವಾಗಬೇಕು,ಇದೆರಿಂದ ಎಲ್ಲರಿಗೂ ಸ್ವಾಭಿಮಾನ ತರಬೇಕು ಅಂದಾಗ ಮಾತ್ರ ಈ ಶೈಕ್ಷಣಿಕ ಸಮ್ಮೇಳನ ಸಾರ್ಥಕ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಾಧಕ ಶಿಕ್ಷಕ ಶಿಕ್ಷಕಿಯರಿಗೆ ಸನ್ಮಾನ ಉತ್ತಮ ಶಾಲೆಗಳಿಗೆ ಪ್ರಶಸ್ತಿ ಪ್ರಧಾನ ಮತ್ತು ಸರಕಾರಿ ಪ್ರಾಥಮಿಕ ಶಾಲೆಗಳ ಸಬಲೀಕರಣ ಕುರಿತು ಕಾರ್ಯಗಾರ ಮತ್ತು ಅಭಿನಂದನಾ ಸಮಾರಂಭ ನೇರವೆರಿತು.

ಕಾರ್ಯಕ್ರಮದಲ್ಲಿ ಅಕ್ಬರ್ ಸಾಬ ಬಬರ್ಚಿ,ಬಿ ಬಿ ಅಸೂಟಿ,ಎಸ್ ಎನ್ ಬಳ್ಳಾರಿ,ಸಿದ್ದು ಪಾಟೀಲ, ಅಶೋಕ ಮಂದಾಲಿ,ಪ್ರಭು ಬುರುಬುರಿ

ಎಂ ಎ ರೇಡ್ಡೆರ್ ,ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಲ್ ಬಾರಟಕಿ,ಕ್ಷೇತ್ರಶಿಕ್ಷಣಾಧಿಕಾರಿ ಆರ್ ಎಸ್ ಬುರಡಿ,,ಬಸಲಿಂಗಪ್ಪ,ಹಾಜರಿದ್ದರು.ಕಾರ್ಯಕ್ರಮವನ್ನು ಎ ಎಂ ಹೀರೆಮಠ ನಿರ್ವಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಲೋಕ ಕಲ್ಯಾಣಕ್ಕಾಗಿ ರಾಮಾಯಣ ಮಹಾಗ್ರಂಥ ಅರ್ಪಿಸಿದವರು ಮಹರ್ಷಿ ವಾಲ್ಮೀಕಿ ಗದಗ : ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿ ಕಣ್ಮುಚ್ಚಿದ ವಿದ್ಯುತ್‌ ದೀಪಗಳು ಗದಗ : “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹುಬ್ಬಳ್ಳಿ : ಮುಸ್ಲಿಮ್ ಸಮುದಾಯಕ್ಕೆ ಶೇಕಡಾ 4 ರಷ್ಟು ಮೀಸಲಾತಿ ಮುಂದುವರೆಸಲು ಆಗ್ರಹ  ಹುಬ್ಬಳ್ಳಿ : ಲಿಡಕರ್ ಹಿತ ಅಭಿವೃದ್ಧಿ ಸಂಘದ ವತಿಯಿಂದ ಮನವಿ  ಗದಗ : ಒಳ ಮೀಸಲಾತಿಯನ್ನು ಜಾರಿ ಮಾಡಲು ಮಾದಿಗ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಹುಬ್ಬಳ್ಳಿ : ವಿಧಾನ ಪರಿಷತ್ತಿನ ಮಾಜಿ ಸದಸ್ಯ ಇಸ್ಮಾಯಿಲ್ ಸಾಬ್ ಕಾಲೇಬುಡ್ಡೆ ನಿಧನ ಗದಗ : ವಿವಿಧ ಅರ್ಜಿ ಆಹ್ವಾನ ಗದಗ : ನರೇಗಾ ನೆರವು ಪಡೆದು ಬದುಕು ಬದಲಾಗಿಸಿಕೊಳ್ಳಿ : ಚಂದ್ರಶೇಖರ ಬಿ ಕಂದಕೂರ ಹುಬ್ಬಳ್ಳಿ : ಉತ್ತರ ಕರ್ನಾಟಕ ಹೋರಾಟ ವೇದಿಕೆಯಿಂದ ಹುಬ್ಬಳ್ಳಿ , ಧಾರವಾಡ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ