Friday, October 18, 2024
Google search engine
Homeಉದ್ಯೋಗಗದಗ : ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ಗದಗ ಜಿಲ್ಲಾದ್ಯಂತ ಸಂಚಾರ

ಗದಗ : ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ಗದಗ ಜಿಲ್ಲಾದ್ಯಂತ ಸಂಚಾರ

87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ

ಗದಗ ಸೆಪ್ಟೆಂಬರ್ 27 : 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೊತಿ ಹೊತ್ತ ಕನ್ನಡ ರಥಯಾತ್ರೆಯು ಜಿಲ್ಲಾದ್ಯಂತೆ ಸೆಪ್ಟೆಂಬರ್ 28 ರಿಂದ 29 ರವರೆಗೆ ಸಂಚರಿಸಲಿದೆ.

ಸೆಪ್ಟೆಂಬರ್ 28 ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲೆಯ ಲಕ್ಷೆö್ಮÃಶ್ವರ ಕ್ಕೆ ಆಗಮಿಸಲಿದೆ. ಅಲ್ಲಿಂದ ಗೊಜನೂರ ಮಾಗಡಿ ಮಾರ್ಗವಾಗಿ ಶಿರಹಟ್ಟಿಗೆ ಮಧ್ಯಾಹ್ನ 11.30 ಗಂಟೆಗೆ ಆಗಮಿಸಲಿದೆ. ಛಬ್ಬಿ- ದೇವಿಹಾಳ- ಬೆಳ್ಲಟ್ಟಿ- ಬಾಗೇವಾಡಿ- ಕಲಕೇರಿ ಮಾರ್ಗವಾಗಿ ಮಧ್ಯಾಹ್ನ 2 ಗಂಟೆಗೆ ಮುಂಡರಗಿಗೆ ಆಗಮಿಸಲಿದೆ. ಮೇವುಂಡಿ- ಕದಾಂಪುರ- ಅಡವಿಸೋಮಾಪುರ ಮಾರ್ಗವಾಗಿ ಸಂಜೆ 4 ಗಂಟೆಗೆ ಗದುಗಿಗೆ ಆಗಮಿಸಿ ವಾಸ್ತವ್ಯ ಮಾಡಲಿದೆ.

ರಥಯಾತ್ರೆಯು ಬೆಟಗೇರಿ- ನರೇಗಲ್- ನಿಡಗುಂದಿ ಮಾರ್ಗವಾಗಿ ಹೊರಟು ಸೆಪ್ಟೆಂಬರ್ 29 ರಂದು ಬೆ 11 ಗಂಟೆಗೆ ಗಜೇಂದ್ರಗಡಕ್ಕೆ ಆಗಮಿಸಲಿದೆ. ಅಲ್ಲಿಂದ ರಾಜುರ- ಸೂಡಿ- ಮಾರ್ಗವಾಗಿ ಮಧ್ಯಾಹ್ನ 1.30 ಗಂಟೆಗೆ ರೋಣಕ್ಕೆ ಆಗಮಿಸಲಿದೆ. ಅಲ್ಲಿಂದ ಚಿಕ್ಕಮಣ್ಣೂರು ಕ್ರಾಸ್ – ಮಲ್ಲಾಪುರ- ಬೆಳವಣಕಿ-ಯಾವಗಲ್ ಮಾರ್ಗವಾಗಿ ಸಂಜೆ 5 ಗಂಟೆಗೆ ನರಗುಂದಕ್ಕೆ ಆಗಮಿಸಿ ಕಲಕೇರಿ- ಅಮರಗೋಳ ಕ್ರಾಸ್ ಮಾರ್ಗವಾಗಿ ಧಾರವಾಡ ಜಿಲ್ಲೆ ನವಲಗುಂದಕ್ಕೆ ಪ್ರಯಾಣಿಸಲಿದೆ.

ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು ಜಿಲ್ಲೆಯಲ್ಲಿ ಸಂಚರಿಸುವ ಸಂದರ್ಭದಲ್ಲಿ ಎಲ್ಲತಹಶೀಲ್ದಾರರೊಂದಿಗೆ ಹಾಗೂ ಗದಗ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷರೊಂದಿಗೆ ಸಮನ್ವಯ ಸಾಧಿಸಿ ರಥಯಾತ್ರೆಯನ್ನು ಯಶಸ್ವಿಗೊಳಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಮನ್ವಯಾಧಿಕಾರಿಯಾಗಿ ನಿಯೊಜಿಸಿದೆ ಎಂದು ಗದಗ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಲೋಕ ಕಲ್ಯಾಣಕ್ಕಾಗಿ ರಾಮಾಯಣ ಮಹಾಗ್ರಂಥ ಅರ್ಪಿಸಿದವರು ಮಹರ್ಷಿ ವಾಲ್ಮೀಕಿ ಗದಗ : ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿ ಕಣ್ಮುಚ್ಚಿದ ವಿದ್ಯುತ್‌ ದೀಪಗಳು ಗದಗ : “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹುಬ್ಬಳ್ಳಿ : ಮುಸ್ಲಿಮ್ ಸಮುದಾಯಕ್ಕೆ ಶೇಕಡಾ 4 ರಷ್ಟು ಮೀಸಲಾತಿ ಮುಂದುವರೆಸಲು ಆಗ್ರಹ  ಹುಬ್ಬಳ್ಳಿ : ಲಿಡಕರ್ ಹಿತ ಅಭಿವೃದ್ಧಿ ಸಂಘದ ವತಿಯಿಂದ ಮನವಿ  ಗದಗ : ಒಳ ಮೀಸಲಾತಿಯನ್ನು ಜಾರಿ ಮಾಡಲು ಮಾದಿಗ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಹುಬ್ಬಳ್ಳಿ : ವಿಧಾನ ಪರಿಷತ್ತಿನ ಮಾಜಿ ಸದಸ್ಯ ಇಸ್ಮಾಯಿಲ್ ಸಾಬ್ ಕಾಲೇಬುಡ್ಡೆ ನಿಧನ ಗದಗ : ವಿವಿಧ ಅರ್ಜಿ ಆಹ್ವಾನ ಗದಗ : ನರೇಗಾ ನೆರವು ಪಡೆದು ಬದುಕು ಬದಲಾಗಿಸಿಕೊಳ್ಳಿ : ಚಂದ್ರಶೇಖರ ಬಿ ಕಂದಕೂರ ಹುಬ್ಬಳ್ಳಿ : ಉತ್ತರ ಕರ್ನಾಟಕ ಹೋರಾಟ ವೇದಿಕೆಯಿಂದ ಹುಬ್ಬಳ್ಳಿ , ಧಾರವಾಡ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ