Friday, October 18, 2024
Google search engine
Homeಗದಗಗದಗ : ಪ್ರಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನ

ಗದಗ : ಪ್ರಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನ

ಗದಗ ಸಪ್ಟೆಂಬರ್ 23: ನಿರ್ದಿಷ್ಟ ಮಧ್ಯಸ್ಥಿಕೆಗಳೊಂದಿಗೆ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ 63,000 ಕ್ಕೂ ಹೆಚ್ಚು ಬುಡಕಟ್ಟು ಬಹುಸಂಖ್ಯಾತ ಗ್ರಾಮಗಳು ಮತ್ತು ಬುಡಕಟ್ಟು ಹಳ್ಳಿಗಳನ್ನು ಸಂತೃಪ್ತಿಗೊಳಿಸುವ ಗುರಿಗಳನ್ನು ಹೊಂದಿರುವ ಪ್ರಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮಿಷನಗಾಗಿ ಬಜೆಟ್ ವೆಚ್ಚವು ಬುಡಕಟ್ಟು ಸಮುದಾಯಗಳ ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು 79,156 ಕೋಟಿ ರೂ ಇದ್ದು ಈ ಮಿಷನ್ 549 ಜಿಲ್ಲೆಗಳು ಮತ್ತು 2,740 ಬ್ಲಾಕ್‌ಗಳನ್ನು 30 ರಾಜ್ಯಗಳು / ಯು.ಬಿ ಗಳಲ್ಲಿ ಎಲ್ಲಾ ಬುಡಕಟ್ಟು ಬಹುಸಂಖ್ಯಾತ ಹಳ್ಳಿಗಳಲ್ಲಿ ಹರಡುತ್ತದೆ. 5 ಕೋಟಿಗೂ ಹೆಚ್ಚು ಬುಡಕಟ್ಟು ಜನರಿಗೆ ಪ್ರಯೋಜನವನ್ನು ನೀಡುತ್ತಿದ್ದು ಕರ್ನಾಟಕ ರಾಜ್ಯದಲ್ಲಿ 28 ಜಿಲ್ಲೆಗಳಲ್ಲಿ 129 ಬ್ಲಾಕ್‌ಗಳನ್ನು ಒಳಗೊಂಡಿದ್ದು ಇದರಲ್ಲಿ 1089 ಗ್ರಾಮಗಳು ಒಳಪಡುತ್ತದೆ, ಇದರ ಪ್ರಯೋಜನವನ್ನು 1,55,318 ಜನರು ಪಡೆಯುವ ಗುರಿ ಹೊಂದಿದೆ.

ಗದಗ ಜಿಲ್ಲೆಯಲ್ಲಿ 4 ಬ್ಲಾಕ್‌ಗಳು ಇದ್ದು ಮೇಲ್ಮಠ , ಒಡೆಯರ ಮಲ್ಲಾಪೂರ, ಭಾವನೂರು, ಕೆಲೂರು ಗ್ರಾಮಗಳು ಒಳಗೊಂಡಿದ್ದು, ಈ ಗ್ರಾಮಗಳಲ್ಲಿ ಒಟ್ಟು 533 ಕುಟುಂಬಗಳು ಇರುತ್ತವೆ. ಪ್ರತಿ ಸಚಿವಾಲಯ/ಇಲಾಖೆಯು ಮುಂದಿನ 5 ವರ್ಷಗಳಲ್ಲಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ಕ್ರಿಯಾ ಯೋಜನೆ (ಡಿ.ಎ.ಪಿ.ಎಸ.ಟಿ) ಅಡಿಯಲ್ಲಿ ಅವರಿಗೆ ಮಂಜೂರು ಮಾಡಲಾದ ನಿಧಿಯ ಮೂಲಕ ಸಮಯಕ್ಕೆ ಸಂಬAಧಿಸಿ ಯೋಜನೆಯನ್ನು ಅನುಷ್ಟಾನಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ.

 ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕ್ರಿಯಾ ಯೋಜನೆಯಡಿ (ಡಿ.ಎ.ಪಿ.ಎಸ.ಟಿ) ಮುಂದಿನ ಐದು ವರ್ಷಗಳಲ್ಲಿ ಮೂಲಸೌಕರ್ಯವನ್ನು ಸಕ್ರಿಯಗೊಳಿಸುವುದು, ಆರ್ಥಿಕ ಸಬಲಿಕರಣದ ಪ್ರಚಾರ,ಉತ್ತಮ ಶಿಕ್ಷಣ ಪ್ರವೇಶದ ಸಾರ್ವತ್ರಿಕಿಕರಣ, ಆರೋಗ್ಯಕರ ಜೀವನ ಮತ್ತು ಗೌರವಾನ್ವಿತ ವೃದ್ದಾಪ್ಯ ಈ ನಾಲ್ಕು ಗುರಿಗಳನ್ನು ಸಾಧಿಸುವ ಉದ್ದೇಶವನ್ನು ಅಭಿಯಾನವು ಹೊಂದಿದೆ.

 ಪ್ರತಿ ಮನೆಗೂ ಅಥವಾ ಸಮುದಾಯ ಮಟ್ಟದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು,ಆರೋಗ್ಯ ಮತ್ತು ಪೌಷ್ಟಿಕರಣ ವೃದ್ಧಿಗೊಳಿಸುವುದು, ಶಿಕ್ಷಣ ಮತ್ತು ತರಬೇತಿಗಳನ್ನು ನೀಡುವುದು, ವಿದ್ಯುತ್ ಸೌಲಭ್ಯಗಳನ್ನು ಒದಗಿಸುವುದು, ಆರ್ಥಿಕ ಸಬಲೀಕರಣ ಮಾಡುವುದು, ಸಂಪರ್ಕಗಳ ಸೌಲಭ್ಯ ಒದಗಿಸುವುದು ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಲೋಕ ಕಲ್ಯಾಣಕ್ಕಾಗಿ ರಾಮಾಯಣ ಮಹಾಗ್ರಂಥ ಅರ್ಪಿಸಿದವರು ಮಹರ್ಷಿ ವಾಲ್ಮೀಕಿ ಗದಗ : ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿ ಕಣ್ಮುಚ್ಚಿದ ವಿದ್ಯುತ್‌ ದೀಪಗಳು ಗದಗ : “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹುಬ್ಬಳ್ಳಿ : ಮುಸ್ಲಿಮ್ ಸಮುದಾಯಕ್ಕೆ ಶೇಕಡಾ 4 ರಷ್ಟು ಮೀಸಲಾತಿ ಮುಂದುವರೆಸಲು ಆಗ್ರಹ  ಹುಬ್ಬಳ್ಳಿ : ಲಿಡಕರ್ ಹಿತ ಅಭಿವೃದ್ಧಿ ಸಂಘದ ವತಿಯಿಂದ ಮನವಿ  ಗದಗ : ಒಳ ಮೀಸಲಾತಿಯನ್ನು ಜಾರಿ ಮಾಡಲು ಮಾದಿಗ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಹುಬ್ಬಳ್ಳಿ : ವಿಧಾನ ಪರಿಷತ್ತಿನ ಮಾಜಿ ಸದಸ್ಯ ಇಸ್ಮಾಯಿಲ್ ಸಾಬ್ ಕಾಲೇಬುಡ್ಡೆ ನಿಧನ ಗದಗ : ವಿವಿಧ ಅರ್ಜಿ ಆಹ್ವಾನ ಗದಗ : ನರೇಗಾ ನೆರವು ಪಡೆದು ಬದುಕು ಬದಲಾಗಿಸಿಕೊಳ್ಳಿ : ಚಂದ್ರಶೇಖರ ಬಿ ಕಂದಕೂರ ಹುಬ್ಬಳ್ಳಿ : ಉತ್ತರ ಕರ್ನಾಟಕ ಹೋರಾಟ ವೇದಿಕೆಯಿಂದ ಹುಬ್ಬಳ್ಳಿ , ಧಾರವಾಡ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ