15.7 C
New York
Friday, May 9, 2025

Buy now

spot_img

ಗದಗ : ಉಚಿತ ಮುಸ್ಲಿಂ ಧರ್ಮದ ಸಾಮೂಹಿಕ ಅದ್ದೂರಿ ವಿವಾಹ ಕಾರ್ಯಕ್ರಮ 

ಗದಗ : ಹಜರತ್ ಪ್ರವಾದಿ ಮಹಮ್ಮದ್ ಪೈಗಂಬರ್ ರವರ ಜಯಂತೋತ್ಸವ ಅಂಗವಾಗಿ ಬೆಟಗೇರಿ ಈದ್ಗಾ ಕಮೀಟಿ ವತಿಯಿಂದ ಮುಸ್ಲಿಂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಬೆಟಗೇರಿ ಈದ್ಗಾ ಮೈದಾನದಲ್ಲಿ ನಡೆಯಿತು.

ಹಜರತ್ ಪ್ರವಾದಿ ಮಹಮ್ಮದ್ ಪೈಗಂಬರ್ ರವರ ಜಯಂತೋತ್ಸವ ಅಂಗವಾಗಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಬೆಟಗೇರಿ ಈದ್ಗಾ ಕಮೀಟಿಯ ಅಧ್ಯಕ್ಷರಾದ ಶ್ರೀ ಪೀರಸಾಬ ಕೌತಾಳ ಅವರ ನೇತ್ರತ್ವದಲ್ಲಿ ನಡೆದ ಇಸ್ಲಾಂ ಧರ್ಮದ ಸಾಮೂಹಿಕ ವಿವಾಹ ಕಾರ್ಯಕ್ರಮ ಯಶಸ್ವಿಯಾಗಿ ಮತ್ತು ಅದ್ದೂರಿಯಾಗಿ ನೆರವೇರಿಸಲಾಯಿತು.

ಈ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಮೌಲಾನಾ ನಿಜಾಮುದ್ದೀನ್‌ ಕಾಸ್ಮಿ ,ಪರಮಪೂಜ್ಯ ಶ್ರೀ ಕಲ್ಲಯ್ಯಜ್ಜನವರು

ಮುಖ್ಯ ಅತಿಥಿಗಳಾಗಿ : ಸನ್ಮಾನ್ಯ : ಡಾ . ಎಚ್ . ಕೆ . ಪಾಟೀಲ ಸಾಹೇಬರು ಗದಗ ಜಿಲ್ಲಾ ಉಸ್ತುವಾರಿ ಸಚಿವರು , ಸನ್ಮಾನ್ಯ ಶ್ರೀ . ಡಿ . ಆರ್ . ಪಾಟೀಲ ಎಂ ಆರ್, ಅಣ್ಣಿಗೇರಿ ಮೌಲಾನಾ ಇನಾಯತುಲ್ಲಾ ಪೀರಜಾದೆ, ಮೌಲಾನಾ ಮಹಮ್ಯದ ಜಕರೀಯಾ ಮೌಲಾನಾ ಅಬ್ದುಲ ಗುಪುರಸಾಬ ಮುಪ್ತಿ ಆರೀಫಸಾಬ ಮೌಲಾನಾ ಸರ್ಪರಾಜ, ಮುಪ್ತಿ ಅಬ್ದುಲ ಸಮದ್ ಜಕಾತಿ ಮುಪ್ತಿ ಶಬೀರ ಕಲ್ಮನಿ ಮೌಲಾನಾ ಅಬ್ದುಲ ರಹೀಮಸಾಬ ಇನಾಮಿ ಮುಪ್ತಿ ಶಬೀರ ಅಹ್ಮದ ಇನಾಮಿ ಮೌಲಾನಾ ಮಹ್ಮದ ಅನ್‌ಜರ್ ಹುಸೇನ ಮೌಲಾನಾ ಮಹ್ಮದ ತೌಫೀಕ ತಹಶಿಲ್ದಾರ ಜನಾಬ ಅನ್ವರಹುಸೇನ ಈಟಿ ಹಾಜಿ ಡಾ.ಎಂ ಆರ್ ಡಾಲಾಯಿತ ಸಮಾರಂಭದಲ್ಲಿ ಇದ್ದರು.

ಮೌಲ್ವಿಗಳು ಮುಸ್ಲಿಂ ಸಂಪ್ರದಾಯದಂತೆ ವಿವಾಹ ನೆರವೇರಿಸಿದರು. 22 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬೆಟಗೇರಿ ಈದ್ಗಾ ಕಮೀಟಿ ವತಿಯಿಂದ ವಧುವಿಗೆ ತಾಳಿ, ಸೀರೆ ಹಾಗೂ ಇನ್ನಿತರ ಅಗತ್ಯ ವಸ್ತುಗಳು ಅದರಂತೆ ವರನಿಗೆ ಬೆಳ್ಳಿ ಉಂಗುರ, ಬಟ್ಟೆ, ಇನ್ನಿತರ ವಸ್ತುಗಳನ್ನು ನೀಡಲಾಯಿತು.

ವಧು ವರರಿಗೆ ಸಚಿವ ಎಚ್,ಕೆ ಪಾಟೀಲ್, ಹಾಗೂ ಮುಸ್ಲಿಂ. ಧರ್ಮ ಗುರುಗಳು ಮುಖಂಡರು ಗದಗ ಈದ್ಗಾ ಕಮೀಟಿಯ ಅಧ್ಯಕ್ಷರಾದ ಪೀರಸಾಬ ಕೌತಳ ಹಾಗೂ ಸರ್ವ ಸದಸ್ಯರು ಮತ್ತು ಗದಗ ಜಿಲ್ಲಾ ವಕ್ಫ್ ಕಮೀಟಿ ಚೇರಮನ್‌ ಜಿ ಎಮ್ ದಂಡಿನ, ಆಗಮಿಸಿ ಶುಭಕೋರಿದರು

ಬೆಟಗೇರಿ ಈದ್ಗಾ ಕಮಿಟಿ ಅಧ್ಯಕ್ಷ ಪೀರಸಾಬ ಕೌತಾಳ ಮಾತನಾಡಿ, ಸಮಾಜದಲ್ಲಿಸಾಕಷ್ಟು ಜನ ಬಡವರಿದ್ದು, ವಿವಾಹ ಖರ್ಚು ವೆಚ್ಚಗಳನ್ನು ನಿಭಾಯಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿಸಾಮಾಜಿಕ ಕಳಕಳಿಯಿಂದ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಾಜಿ ಫಯಾಜ ಎಚ್ . ನಾರಾಯಣಕೇರಿ ಹಾಜಿ ಎಂ . ಜಿ . ಪತ್ತೇನವರ ಜನಾಬ ಬಾಬುಲಾಲ ಎಚ್‌ . ನಾರಾಯಣಕೇರಿ ಜನಾಬ ಎಸ್ . ಎಸ್ . ಬಳ್ಳಾರಿ ಎ ಪಿ . ಮುಧೋಳ ಜನಾಬ ಜಂದಿಸಾಬ ಬಳ್ಳಾರಿ ಜನಾಬ ಮಹ್ಮದಹನೀಫ ಎನ್ . ಶಾಲಗಾರ ಜನಾಬ ಅಬ್ದುಲಸಲಾಮ ಎ.ಬಳ್ಳಾರಿ ಜನಾಬ ಶಾಕೀರಅಹ್ಮದ ಮ . ಕಾತರಕಿ ಜನಾಬ ಇಮಾಮಸಾಬ ಕೆ . ಮುಜಾವರ ಜನಾಬ ಸುಲೇಮಾನ ಯು , ಮಕಾನದಾರ ಹಾಜಿ ಶಬ್ದರಅಹ್ಮದ ಮ . ಇರಕಲ್ ಜನಾಬ ಶಫಿಅಹಮ್ಮದ ಆರ್ .ನವಲಗುಂದ ಜನಾಬ ಎಮ್ . ಎಮ್ . ಮಾಳೆಕೊಪ್ಪ ಜನಾಬ ಮುನೀರ ಎಚ್ . ಅಹ್ಮದ ಜನಾಬ ದಾವಲಸಾಬ , ಮ . ಇರಕಲ್ ಜನಾಬ ಶೌಕತ್‌ ಅಲಿ ಎಂ . ಅಣ್ಣಿಗೇರಿ ಜನಾಬ ಆ‍ , ಕೆ . ಕಲೇಗಾರ ಜನಾಬ ಕಾಶೀಂಅಲಿ ಡಿ . ಹವಾಲ್ದಾರ ಜನಾಬ ಮುಸ್ತಾಕಅಹ್ಮದ ಮ . ಶಿರಹಟ್ಟ ಜನಾಬ ಬಾಬಾಜಾನ ಆರ್ . ರೋಣದ ಜನಾಬ ಫಕುಸಾಬ ಎಮ್ . ತಾವರಗೇರಿ ಜನಾಬ ಅಬ್ದುಲಸಾಬ .ಎ ಬೇಲೇರಿ ಜನಾಬ ನಿಜಾಮುದ್ದೀನ .ಡಿ . ಕಾತರಕಿ ಜನಾಬ ಇಬ್ರಾಹೀಂಸಾಬ ಕೆ . ನಾಯ್ಕರ ಜನಾಬ ಅಷ್ಟಾಕಲಿ , ಎಚ್ . ಹೊಸಳ್ಳಿ ಜನಾಬ ರಹಮತುಲ್ಲಾ ಎಲ್ . ಹೊಂಬಳ ಹಾಗೂ ನಾವು ದಂಪತಿಗಳು ಹಾಗೂ ಎಲ್ಲಾ ಜಮಾತಿನ ಗುರು ಹಿರಿಯರು ಭಾಗವಹಿಸಿದ್ದರು.

 

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯ: ಎ... ಗದಗ : ಲಂಚ ಸ್ವೀಕಾರ : ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ ! ಗದಗ : ಮನೆಯಲ್ಲೇ ನೇಣಿಗೆ ಶರಣಾದ ನವದಂಪತಿ! ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ: ಜಯದೇವ ಕಡಗಿ IPL 2025: 35 ಎಸೆತಗಳಲ್ಲಿ ಶತಕ ಮಹಾ ದಾಖಲೆ ಬರೆದ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ ಗದಗ : ಭೋವಿ ಸಮಾಜದ ಹೆಮ್ಮೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಟಿ ಬಿಸನಳ್ಳಿ ಗೆ ಗೌರವ ಡಾಕ್ಟರೇಟ್ ಪದವಿ