Sunday, October 13, 2024
Google search engine
Homeಆರೋಗ್ಯಗದಗ : ಜಾನುವಾರು ವಸತಿ ನಿಲಯ, ತರಕಾರಿ ಮಾರುಕಟ್ಟೆ,ಆರ್ಟಿಸನ್ ಕೇಂದ್ರವನ್ನು ಗ್ರಾಮಸ್ಥರು ಸದುಪಯೋಗ ಪಡೆದುಕೊಂಡು ಗ್ರಾಮ...

ಗದಗ : ಜಾನುವಾರು ವಸತಿ ನಿಲಯ, ತರಕಾರಿ ಮಾರುಕಟ್ಟೆ,ಆರ್ಟಿಸನ್ ಕೇಂದ್ರವನ್ನು ಗ್ರಾಮಸ್ಥರು ಸದುಪಯೋಗ ಪಡೆದುಕೊಂಡು ಗ್ರಾಮ ಅಭಿವೃದ್ಧಿ ಪಡಿಸಿ : ಸಚಿವ ಎಚ್. ಕೆ. ಪಾಟೀಲ

ಕುರ್ತಕೋಟಿಯಲ್ಲಿ ರೂರ್ಬನ್‌ ಯೋಜನೆಯ ವಿವಿಧ ಕಾಮಗಾರಿ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವರು

ಗದಗ 11:  ಜಾನುವಾರು ವಸತಿ ನಿಲಯ, ತರಕಾರಿ ಮಾರುಕಟ್ಟೆ ಮತ್ತು ಆರ್ಟಿಸನ್‌ ಕೇಂದ್ರಗಳನ್ನು ಗ್ರಾಮಸ್ಥರು ಸದುಪಯೋಗ ಪಡೆದು ಕೊಂಡು ಗ್ರಾಮ ಅಭಿವೃದ್ಧಿ ಪಡಿಸಿ ಎಂದು  ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ರವರು ಹೇಳಿದರು.

ಜಿಲ್ಲಾ ಪಂಚಾಯತ ವತಿಯಿಂದ ರೂರ್ಬನ್‌ ಯೋಜನೆಯಡಿ ಕುರ್ತಕೋಟಿ ಗ್ರಾಮ ಪಂಚಾಯತಿಯಲ್ಲಿ  ನಿರ್ಮಿಸಲಾದ ಜಾನುವಾರು ವಸತಿ ನಿಲಯ, ತರಕಾರಿ ಮಾರುಕಟ್ಟೆ ಮತ್ತು ಆರ್ಟಿಸನ್‌ ಕೇಂದ್ರಗಳನ್ನು  ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಹಾಗೂ ನಗರ ಜೀವನಕ್ಕೆ ಇರುವ ವ್ಯತ್ಯಾಸ, ಸೌಲಭ್ಯ ಸರಿದೂಗಿಸುವ ಮಹತ್ತರ ಯೋಜನೆ ಶ್ಯಾಮಪ್ರಸಾದ್ ಮುಖರ್ಜಿ ರೂರ್ಬನ್ ಯೋಜನೆಯಾಗಿದೆ. ಇದನ್ನು ಕುರ್ತಕೋಟಿ ಗ್ರಾಮಸ್ಥರು ಆಸಕ್ತಿ ಮೇರೆಗೆ ಪರಿಣಾಮಕಾರಿಯಾಗಿ ಕಾಮಗಾರಿ ಕೈಗೊಂಡು ಇಂದು ಲೋಕಾರ್ಪಣೆ ಮಾಡಿದ್ದು ಸಂತಸ‌ ತಂದಿದೆ ಎಂದರು.

ನಮ್ಮ ಗ್ರಾಮಗಳನ್ನು ಇಚ್ಚಾಶಕ್ತಿಯಿಂದ ಅಭಿವೃದ್ಧಿ ಪಡಿಸಿದರೇ ದೇಶದ ಅಭಿವೃದ್ಧಿ ಮಾಡಿದಂತೆ. ದೇಶದಲ್ಲಿ ಅಭಿವೃದ್ಧಿ ಕೈಗೊಳ್ಳಲು ಅನುದಾನದ ಕೊರತೆ ಇಲ್ಲ.‌ ಸರಿಯಾದ ಯೋಜನೆ ರೂಪಿಸಿ, ಸುಸಮಯದಲ್ಲಿ ಕಾಮಗಾರಿ ಅನುಷ್ಠಾನ ಮಾಡುವ ಬದ್ಧತೆ ನಮ್ಮಲ್ಲಿರಬೇಕು ಎಂದರು.

ರೂರ್ಬನ್ ಯೋಜನೆ ಸರಿಯಾಗಿ ಹುಲಕೋಟಿ, ಕುರ್ತಕೋಟಿ, ಬಿಂಕದಕಟ್ಟಿ ಭಾಗದಲ್ಲಿ ಸಮರ್ಪಕ ಅನುಷ್ಠಾನ ಮಾಡುವ ಮೂಲಕ‌ ದೇಶದಲ್ಲಿಯೇ ಉತ್ತಮ ಕ್ಲಸ್ಟರ್ ಆಗಿದೆ ಎಂದು ನುಡಿದರು.

ನಮ್ಮ ದೇಶದ ಹೃದಯ ಹಳ್ಳಿಗಳಾಗಿವೆ. ಅವುಗಳ ಬಲವರ್ಧನೆಯಿಂದ ಸದೃಢ ದೇಶ ನಿರ್ಮಾಣಗೊಳಿಸೋಣ. ನಮ್ಮ ಜೀವನ‌ಮಟ್ಟ ನಿರಂತರ ಅಭಿವೃದ್ಧಿ ಕಡೆಗೆ ಸಾಗುತ್ತಾ, ಗ್ರಾಮಗಳ ಪುನರ್ ನಿರ್ಮಾಣ ಕಾರ್ಯಕ್ಕೆ ಅಣಿಯಾಗೋಣ ಎಂದು ಹೇಳಿದರು.

ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದಲ್ಲಿ ಉದ್ಘಾಟನೆಗೊಂಡಿರುವ ಜಾನುವಾರು ವಸತಿ ನಿಲಯವು 1 ಕೋಟಿ ರೂ, ತರಕಾರಿ ಮಾರುಕಟ್ಟೆಯನ್ನು 60 ಲಕ್ಷ ಹಾಗೂ ಆರ್ಟಿಸನ್‌ ಕೇಂದವನ್ನು ಸಹ 1 ಕೋಟಿ ರೂಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮದ ಈ ಕಾಮಗಾರಿಗಳು ಸಕ್ರಿಯವಾಗಿ ರೈತರ ಅನುಕೂಲತೆಗಾಗಿ ಕಾರ್ಯನಿರ್ವಹಿಸಲಿವೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಡಿ ಗದಗ ತಾಲ್ಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಇಂದು ಉದ್ಘಾಟನೆ ಗೊಂಡಿರುವ ಈ ಕಾಮಗಾರಿಗಳು ಸಮರ್ಪಕವಾಗಿ ಬಳಕೆಯಾಗಲು ಸ್ಥಳೀಯರ ಸಹಕಾರ ತುಂಬಾ ಮುಖ್ಯವಾಗಿರುತ್ತದೆ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಇಂತಹ ಉತ್ತಮ ಕಾಮಗಾರಿಗಳನ್ನು ಅನುಷ್ಠಾನಿಸಲು ರೂರ್ಬನ್‌ ಯೋಜನೆಯಿಂದ ಸಾದ್ಯವಾಗಿದೆ ಎಂದರು.

ಜಾನುವಾರು ವಸತಿ ನಿಲಯದಿಂದ ನಮ್ಮ ರೈತರ ಹಸುಗಳು ಸುರಕ್ಷಿತವಾಗಿ ನೈಸರ್ಗಿಕ ವಿಕೋಪಗಳಿಂದ ದೂರವಾದಂತಾಗಿದೆ ಹಾಗೂ ರೈತರ ಪರವಾಗಿ ಈ ಒಂದು ಜಾನುವಾರು ವಸತಿ ನಿಲಯವು ಕಾರ್ಯನಿರ್ವಹಿಸುಂತಾಗಲಿ. ಈ ಮೂಲಕ ಜಾನುವಾರು ಸಾಕಾಣಿಕೆ ಮಹತ್ವ ಎಲ್ಲರಲ್ಲೂ ಮೂಡಲಿ ಎಂದು ಹೇಳಿದರು.

ಗ್ರಾಮದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಹೆಚ್ಚಿನ ಬೇಡಿಕೆ ಇದ್ದದ್ದರಿಂದ ಈಗ ಅದು ಸಾಧ್ಯವಾಗಿದೆ, ಈ ಒಂದು ಕಾಮಗಾರಿಯನ್ನು ಅನುಷ್ಠಾನ ಮಾಡಲು ಕಾರಣೀಕರ್ತರಾದ ಎಲ್ಲರಿಗೂ ಧನ್ಯವಾದಗಳು ಮತ್ತು ಸ್ಥಳಿಯವಾಗಿ ರೈತರು ಬೆಳೆಯುವ ಉತ್ತಮ ಪೌಷ್ಠಿಕಾಂಶವುಳ್ಳ ತರಕಾರಿಗಳು ನಿಮ್ಮ ಗ್ರಾಮದಲ್ಲೆ ಸಿಗುವಂತಾಗಿದೆ. ಹಾಗೂ ಪುರಾತನ ಕಾಲದಿಂದ ಗ್ರಾಮಗಳೇ ಕರಕುಶಲ ಕೆಲಸಕ್ಕೆ ಹೆಸರುವಾಸಿಯಾಗಿದ್ದವು ಅಂತಹ ಕರಕುಶಲತೆಯನ್ನು ಉತ್ತೇಜಿಸುವ ಸದುದ್ದೇಶದಿಂದ ಈ ಕಾಮಗಾರಿಯನ್ನು ಮಾಡಿದ್ದು ಸ್ಥಳೀಯವಾಗಿ ಕರಕುಶಲ ಕಾರ್ಮಿಕರಿಗೆ ಅನುಕೂಲವಾಗಿದೆ ಇದರಿಂದ ಗ್ರಾಮಗಳು ಸ್ವಾವಲಂಬಿ ಗ್ರಾಮಗಳಾಗಿ ಪರಿವರ್ತನೆಯಾಗುವ ಈ ನಿಟ್ಟಿನಲ್ಲಿ ಸರ್ಕಾರಿ ಕಾರ್ಯಕ್ರಮಗಳು ಮುಂದಾಗಿವೆ ಎಂದರು.

ಗ್ರಾಮ ಪಂಚಾಯತ ಸದಸ್ಯ ಅಪ್ಪಣ್ಣ ಇನಾಮತಿ ಮಾತನಾಡಿ, ಗ್ರಾಮದಲ್ಲಿ ರೂರ್ಬನ್‌ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗಿದೆ, ಗ್ರಾಮಗಳ ಅವಶ್ಯಕತೆ ಪೂರೈಸುವಲ್ಲಿ ರೂರ್ಬನ್ ಇಂತಹ ಅನೇಕ ಕಾಮಗಾರಿಗಳಿಂದ ರೈತರಿಗೆ ಬಲ ತುಂಬುವ ಕಾರ್ಯವಾಗುತ್ತಿರುವುದು ಸಂತಸ ತಂದಿದೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಪ್ರಗತಿಗೆ ಅಭಿವೃದ್ಧಿ ಕಾಮಗಾರಿಗಳು ಪೂರಕವಾಗಿವೆ ಎಂದರು.

ಜಿಲ್ಲಾ ಪಂಚಾಯತ ಸಿಇಓ ಭರತ ಎಸ್ ಅವರು ಅತಿಥಿಗಳನ್ನು ಸ್ವಾಗತಿಸಿ,‌ ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮೈಲಾರಪ್ಪ ಇನಾಮತಿ, ಉಪಾಧ್ಯಕ್ಷ ಸರೋಜಾ ಅಂಗಡಿ, ಗಿರೀಶ್ ದಬಾಲಿ, ವಿರೂಪಾಕ್ಷಪ್ಪ ಹೊಸಮನಿ, ಡಾ.ಎಲ್.ಜಿ ಹಿರೇಗೌಡ, ಬಿ.ಬಿ.ಅಸೂಟಿ, ಬಿ.ವಿ.ಪಾಟೀಲ, ರವಿ ಮೂಲಿಮನಿ, ಅಕಬರಸಾಬ ಬಬರ್ಜಿ, ಸಿದ್ದು ಪಾಟೀಲ, ಅಶೋಕ ಮಂದಾಲಿ ಇದ್ದರು.

ಲೋಕಾರ್ಪಣೆ ಕಾಮಗಾರಿಗಳ ಸಂಕ್ಷಿಪ್ತ ಮಾಹಿತಿ:

* ಜಾನುವಾರು ವಸತಿ ನಿಲಯ*
• 864 ಚದರ ಮೀಟರ್‌ ವಿಸ್ತಿರ್ಣದಲ್ಲಿ  1 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದೆ.
• 100 ಜಾನುವಾರುಗಳನ್ನು ನಿರ್ವಹಣೆ ಸಾಮರ್ಥ್ಯವನ್ನು ಹೊಂದಿದೆ.
• ರೋಗಗ್ರಸ್ಥ ಹಸುಗಳಿಗೆ ಮತ್ತು ಚಿಕಿತ್ಸೆಗಾಗಿ ಪ್ರತ್ಯೇಕ ಕೋಠಡಿ ವ್ಯವಸ್ಥೆ.
• ಹಾಲು ಸಂಗ್ರಹಣಾ ಕೋಠಡಿ ವ್ಯವಸ್ಥೆ.
• ಮೇವು ಸಂಗ್ರಹಣೆಗೂ ಪ್ರತ್ಯೇಕ ಕೋಠಡಿ ವ್ಯವಸ್ಥೆ ಇರುತ್ತದೆ.

 ತರಕಾರಿ ಮಾರುಕಟ್ಟೆ:-
• 785 ಚದರ ಮೀಟರ್ ವಿಸ್ತಿರ್ಣದಲ್ಲಿ 60 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದೆ.
• ಗ್ರಾಮ ವ್ಯಾಪ್ತಿಯಷ್ಟೇ ಅಲ್ಲ ನೆರೆಹೊರೆಯ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ.
• ಸುಮಾರು  100 ಜನ ವ್ಯಾಪಾರಸ್ತರಿಗೆ ಸಥಳಿಯವಾಗಿ ಉದ್ಯೋಗ ದೊರೆತಂತಾಗಿದೆ.

 ಆರ್ಟಿಸನ್‌ ಕೇಂದ್ರ:-
• 565 ಚದರ ಮೀಟರ್ ವಿಸ್ತಿರ್ಣದಲ್ಲಿ ಒಟ್ಟು 1 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದೆ.
• ಕರಕುಶಲ ಕಾರ್ಮಿಕರಿಗೆ ಅವಶ್ಯವಿರುವ ಕುಲುಮೆ ವ್ಯವಸ್ಥೆ ಹೊಂದಿದೆ.
• ಸಿ.ಎನ್‌.ಸಿ ಕಾರ್ಯಕ್ಕೆ ಯಂತ್ರಗಳ ಅಳವಡಿಕೆ ಮಾಡಲಾಗಿದೆ.
• ಸುಮಾರು 200 ರಿಂದ 300 ಜನ ಗ್ರಾಮೀಣ ಕರಕುಶಲ ಕಾರ್ಮಿಕರಿಗೆ ಈ ಕೇಂದ್ರವು ಅನುಕೂಲವಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ ನಗರಕ್ಕೆ ಆಗಮಿಸಿದ ವಿಜಯ ಜ್ಯೋತಿಗೆ ಸಚಿವ ಎಚ್. ಕೆ. ಪಾಟೀಲ ಅವರಿಂದ ಅದ್ದೂರಿ ಸ್ವಾಗತ* ಐತಿಹಾಸಿಕ ದೇವರಗುಡ್ಡ ಕಾರ್ಣಿಕ : ಆಕಾಶ ಚಿಗುರೀತಲೇ, ಬೇರೆಲ್ಲಾ ಮುತ್ತಾಯಿತಲೇ ಪರಾಕ್'!  ಗದಗ : ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಥಮ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳ ಉತ್ತಮ ಸಾಧನೆ ಗದಗ : ವಿನೂತನ ಪ್ರಯತ್ನಕ್ಕೆ ಮುಂದಾದ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ; ಕ್ಯೊ.ಆರ್‌ ಕೋಡ್‌ ಮೂಲಕ ಬೇಡಿಕೆ ಅರ್ಜಿ ಸಲ್ಲಿಕ... Big Breaking : ಭಾರತದ ಹೆಮ್ಮೆಯ ಉದ್ಯಮಿ ರತನ್‌ ಟಾಟಾ ವಿಧಿವಶ ! ಗದಗ : ವಿವಿಧ ಅರ್ಜಿಗಳ ಆಹ್ವಾನ ಗದಗ : ಧೈ ಅಖರ್ ಪತ್ರ ಬರವಣಿಗೆ ಸ್ಪರ್ಧೆ ಗದಗ : ಬೇಡಿಕೆಗಳ ಈಡೇರಿಕೆಗೆ ಪಂಚಾಯತ್ ರಾಜ್ ಅಧಿಕಾರಿಗಳಿಂದ ಧರಣಿ  ಗದಗ : ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಅರ್ಜಿ ಆಹ್ವಾನ  ಗದಗ : ಉದ್ಯೋಗ ದೊರಕಿಸಿಕೊಳ್ಳಲು ಡಿಪ್ಲೋಮಾ ವ್ಯಾಸಂಗವು ಉಪಯುಕ್ತವಾಗಿದೆ:ಪ್ರಾಚಾರ್ಯ ಭರಮಪ್ಪ ಬಡಪ್ಳವರ