ಗದಗ ಸೆಪ್ಟೆಂಬರ್ 9 : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿ, ಬೆಂಗಳೂರ 2024-25 ನೇ ಸಾಲಿನ ಆಯವ್ಯಯ ಕಂಡಿಕೆ 56 (3) ರಲ್ಲಿ ಘೋಷಿಸಿರುವ ಸಂಚಾರಿ ಕುರಿಗಾರರಿಗೆ ಗುರುತಿನ ಚೀಟಿ ಪಡೆಯಲು ಗದಗ ಜಿಲ್ಲೆಯಲ್ಲಿರುವ ಕನಿಷ್ಠ 20 ಕ್ಕಿಂತ ಹೆಚ್ಚು ಕುರಿ/ಮೇಕೆಗಳನ್ನು ಹೊಂದಿರುವ ಅರ್ಹ ಸಂಚಾರಿ ಕುರಿಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ತಮ್ಮ ವ್ಯಾಪ್ತಿಯ ಪಶು ಚಿಕಿತ್ಸಾಲಯ/ ಪಶು ಆಸ್ಪತ್ರೆಯಿಂದ ಅರ್ಜಿಗಳನ್ನು ಪಡೆದು, ವಲಸೆ ಹೋಗುವದಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳಿಂದ ಮಹಜರ್ ಪ್ರಮಾಣ ಪತ್ರ ಪಡೆದು, ಸೂಕ್ತ ದಾಖಲಾತಿಗಳೊಂದಿಗೆ ಸೆ. 30 ರೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಅದೇ ಕಛೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿ. ಗದಗ ಪಶು ಆಸ್ಪತ್ರೆ ಆವರಣ ಗದಗ ಇವರನ್ನು ಕಛೇರಿಯ ವೇಳೆಯಲ್ಲಿ (ದೂರವಾಣಿ ಸಂ:9480131475,9663570842)ಸಂಪರ್ಕಿಸಬಹುದಾಗಿದೆ.
ಗದಗ : ಸಂಚಾರಿ ಕುರಿಗಾರರಿಗೆ ಗುರುತಿನ ಚೀಟಿ ಪಡೆಯಲು ಅರ್ಜಿ ಆಹ್ವಾನ
