ಗದಗ ಅಗಸ್ಟ 30 ; ಎ.ಪಿ.ಡಿ ಸಂಸ್ಥೆಯ ಸಂಸ್ಥಾಪಕರಾದ ಎನ್. ಎಸ್. ಹೇಮಾ ಇವರ ಸ್ಮರಣಾರ್ಥವಾಗಿ ಎ.ಪಿ.ಡಿ ಸಂಸ್ಥೆಯು ವಿಕಲಚೇತನರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಸ್ವಯಂ ಸೇವಾ ಸಂಸ್ಥೆಗಳಿಗೆ ಎನ್. ಎಸ್. ಹೇಮಾ ಸ್ಮಾರಕ ಪ್ರಶಸ್ತಿಯನ್ನು ನೀಡಲಾಗುವುದು. “ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬೆಲಿಟಿ” ಸಂಸ್ಥೆಯ ವತಿಯಿಂದ ಈ ಕಾರ್ಯಕ್ರಮವನ್ನು ಅಕ್ಟೋಬರ್ 4 ರಂದು ಆಯೋಜಿಸಲಾಗುತ್ತಿದ್ದು, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಸ್ಥೆಗಳಿAದ ಪ್ರಸ್ತಾವನೆಯನ್ನು ಸ್ವೀಕರಿಸಿ ಉತ್ತಮ 3 ಸಂಸ್ಥೆಗಳಿಗೆ ಬಹುಮಾನ ನೀಡಲಾಗುತ್ತಿದ್ದು, ಪ್ರಥಮ ಬಹುಮಾನ ರೂ.1.00 ಲಕ್ಷ, ದ್ವಿತೀಯ ಬಹುಮಾನ ರೂ.50,000 ಸಾವಿರ ಮತ್ತು ತೃತೀಯ ಬಹುಮಾನ ರೂ.25,000 ನೀಡಲಾಗುವುದು.
ಗದಗ ಜಿಲ್ಲೆಯಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲು ದ್ವಿ-ಪ್ರತಿಯಲ್ಲಿ ಪ್ರಸ್ತಾವನೆಯನ್ನು ಗದಗ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಈ ಕಛೇರಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಎ.ಪಿ.ಡಿ ಸಂಸ್ಥೆಯ ಜನಾರ್ಧನ. ಎ. ಎಲ್: 9449869438 ರವರನ್ನು ಅಥವಾ ಅಂಗವಿಕಲರ ಕಲ್ಯಾಣ ಇಲಾಖೆಯ ಕಛೇರಿಯ ದೂರವಾಣಿ ಸಂಖ್ಯೆ: 08372-220419ಗೆ ಕಛೇರಿಯ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.