Monday, September 16, 2024
Google search engine
Homeಉದ್ಯೋಗಬೆಂಗಳೂರಿನ ಡಿಸಿಪಿ ಶ್ರೀಮತಿ ಅನಿತಾ ಹದ್ದಣ್ಣವರ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ

ಬೆಂಗಳೂರಿನ ಡಿಸಿಪಿ ಶ್ರೀಮತಿ ಅನಿತಾ ಹದ್ದಣ್ಣವರ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ

ಗದಗ ೨೩: ಗದಗ ಬೆಟಗೇರಿಗೆ ಹೆಲ್ತ್ ಕ್ಯಾಂಪ್ ನಿವಾಸಿಗಳಾದ ದಿವಂಗತ ಶ್ರೀ ಭೀಮಪ್ಪ ನಿಂಗಪ್ಪ ಹದ್ದಣ್ಣವರ ನಿವೃತ್ತ (ಇಇ) ಎಕ್ಸಿಕ್ಯೂಟಿವ್ ಇಂಜಿನಿಯರ್, ನೀರಾವರಿ ಇಲಾಖೆ ಹಾಗೂ ಶ್ರೀಮತಿ ಕುಂಕುಮ ಭೀಮಪ್ಪ ಹದ್ದಣ್ಣವರ ಗದಗ ಬೆಟಗೇರಿಯ ನಗರಸಭೆಯ ಮಾಜಿ ಸದಸ್ಯರು ಎಂಬ ದಂಪತಿಯವರಿಗೆ ಐದು ಮಕ್ಕಳು ಮೂವರು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಅದರಲ್ಲಿ ಎರಡನೆಯವರಾದ ಅನಿತಾ ಹದ್ದಣ್ಣವರ ಬಾಲ್ಯದಿಂದಲೂ ತುಂಬಾ ಸರಳ ಮತ್ತು ಸ್ನೇಹಮಯಿ ವ್ಯಕ್ತಿತ್ವ ಹೊಂದಿರುವಂತವರು ಅವರಿಗೆ ಚಿಕ್ಕಂದಿನಿAದಲೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಬೇಕೆಂದು ಕನಸನ್ನು ಕಂಡಿದ್ದರು ಅವರಿಗೆ ಬೆಲ್ಟು ಮತ್ತು ಕ್ಯಾಪ್ ಪೊಲೀಸ್ ಡ್ಯೂಟಿ ಬಗ್ಗೆ ಅಪಾರ ಗೌರವ ಹೊಂದಿರುವ ಇವರು ತಮ್ಮ ಬಾಲ್ಯ ಮತ್ತು ಪ್ರೌಢ ಶಿಕ್ಷಣವನ್ನು ಲೋಯಲಾ ಕಾನ್ವೆಂಟ್ ಹೈಸ್ಕೂಲ್‌ನಲ್ಲ್ಲಿ ಮುಗಿಸಿ ನಂತರ ಜೆ ಟಿ ಕಾಲೇಜಿನಲ್ಲಿ ಬಿಎಸ್ಸಿ ಪದವಿಯಲ್ಲಿ ಅವರು ಎನ್‌ಸಿಸಿ ಸೇರಿಕೊಂಡು ಗೋವಾ ಮತ್ತು ಕರ್ನಾಟಕ ಪ್ರತಿನಿಧಿಯಾಗಿ ದೆಹಲಿಯಲ್ಲಿ ತಲ್ ಸೇನಾ ಕ್ಯಾಂಪಿನಲ್ಲಿ (ಖಿSಅ) ಫೈರಿಂಗ್‌ನಲ್ಲಿ ಬಂಗಾರದ ಪದಕ ಪಡೆಯುವುದರ ಮೂಲಕ ಕರ್ನಾಟಕಕ್ಕೆ ಕೀರ್ತಿ ಪಾತ್ರರಾಗುವುದಲ್ಲದೆ ಅವರು ಸನ್ ೨೦೦೩ ರಲ್ಲಿ ಜೆ ಟಿ ಕಾಲೇಜಿನ ವರ್ಷದ ಬೆಸ್ಟ್ ಗರ್ಲ್ ಅವಾರ್ಡ್ ಪ್ರಶಸ್ತಿಗೆ ಪಾತ್ರರಾಗಿದ್ದರು. ಮುಂದಿನ ಉನ್ನತ ಶಿಕ್ಷಣಕ್ಕಾಗಿ ಇವರು ಕೌಶಾಳಿ ಯುನಿವರ್ಸಿಟಿ ಧಾರವಾಡದಲ್ಲಿ ಸನ್ ೨೦೦೫ ರಲ್ಲಿ ಎಂಬಿಎ ಪದವಿ ಪಡೆದು. ತದ ನಂತರ ಕೆಎಎಸ್ ಪರೀಕ್ಷೆ ಪಾಸಾಗಿ ಸನ್ ೨೦೦೬ ಡಿವೈಎಸ್ಪಿ ಹುದ್ದೆಯನ್ನು ಪಡೆದರು. ಒಬ್ಬ ನಿಷ್ಠಾವಂತ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿ, ಡಿವೈಎಸ್ಪಿ ಹುದ್ದೆಯಲ್ಲಿ ಅವರಿಗೆ ಸನ್ ೨೦೧೨ ರಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಪ್ರಶಸ್ತಿ ಕೂಡ ಒಲಿದು ಬಂತು. ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ವಿಜಯಪುರ ಮತ್ತು ಬಾಗಲಕೋಟೆ ಲೋಕಾಯುಕ್ತ ಹುದ್ದೆಯನ್ನು ಅವರು ನಿಭಾಯಿಸಿ. ಸದ್ಯ ಅವರು ಬೆಂಗಳೂರಿನ ಪಶ್ಚಿಮ ವಿಭಾಗದ ಟ್ರಾಫಿಕ್ ಡಿಸಿಪಿ ಹುದ್ದೆಯಲ್ಲಿದ್ದಾರೆ. ಅವರು ಈಗ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದು. ತುಂಬಾ ಅಂದರೆ ತುಂಬಾ ಸಂತೋಷದ ವಿಷಯ ಅವರ ಮುಂದಿನ ದಿನಮಾನಗಳಲ್ಲಿ ಇನ್ನೂ ಉನ್ನತ ಹುದ್ದೆಯನ್ನು ಹೊಂದಿ ಪ್ರಾಮಾಣಿಕವಾಗಿ ಕೆಲಸವನ್ನು ಮಾಡುವಂತಹ ಶಕ್ತಿಯನ್ನು ಆ ಭಗವಂತನು ನೀಡಲೆಂದು ಗದಗ ಬೆಟಗೇರಿಯ ಹೆಲ್ಥಕ್ಯಾಂಪ್ ಯುವಕ ಸಂಘ, ಮಹಿಳಾ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಅಭಿನಂದಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಉಚಿತ ಮುಸ್ಲಿಂ ಧರ್ಮದ ಸಾಮೂಹಿಕ ಅದ್ದೂರಿ ವಿವಾಹ ಕಾರ್ಯಕ್ರಮ  ಗದಗ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ ಗದಗ : ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: ದಿಕ್ಕಾಪಾಲಾಗಿ ಓಡಿದ ಜನರು ಗದಗ : ತೋಂಟದಾರ್ಯ ಅಟೋ ಸ್ಟ್ಯಾಂಡ್ ಅನ್ನಸಂತರ್ಪಣೆ ಗದಗ : ಅರ್ಥಪೂರ್ಣವಾಗಿ ಪೈಗಂಬರ್ ಜಯಂತಿ ಆಚರಣೆ : ಬಾಷಾಸಾಬ್ ಮಲ್ಲಸಮುದ್ರ ಗದಗ : ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ ಗದಗ : ಸೆ.17 ರಿಂದ ಗದಗ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ‘ದಸರಾ ಕ್ರೀಡಾಕೂಟ’ ಆಯೋಜನೆ ಗದಗ : ಗದಗ ಬೆಟಗೇರಿ ನಗರಸಭೆ : ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಅರ್ಜಿ ಆಹ್ವಾನ ಗದಗ : ತಂದೆ ಇಲ್ಲದ ಮಕ್ಕಳ ಖಾತೆಗೆ ಮಾತ್ರ ಸರ್ಕಾರ ವರ್ಷಕ್ಕೆ 24000 ರೂ. ಗಳ ಸುದ್ದಿಯಲ್ಲಿ ಸತ್ಯಾಂಶವಿಲ್ಲ  ಗದಗ : ಲಿಂಗ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ  ೧೪ ಪುಣ್ಯಸ್ಮರಣೆ ಆಚರಣೆ