ಗದಗ : ತಾಲೂಕಿನ ಹರ್ಲಾಪುರ ಗ್ರಾಮದ ಶ್ರೀ ಗುರು ಗೆಜ್ಜಿಸಿದ್ದೇಶ್ವರ ಮಠದಲ್ಲಿ ಅವದೂತ ಶಿವಯೋಗಿ ಶ್ರೀ ರಾಮನಾಥ ಸ್ವಾಮಿಗಳು ಜುಲೈ ೩೦ ರಿಂದ ಅಗಸ್ಟ್ ೩ರ ವರೆಗೆ ಐದು ದಿನಗಳ ಕಾಲ ಲೋಕ ಕಲ್ಯಾಣಾರ್ಥವಾಗಿ ಜಲ ಅನುಷ್ಠಾನ ಮಾಡಲಿದ್ದಾರೆ. ಆಗಸ್ಟ ೩ ರಂದು ಬೆಳಿಗ್ಗೆ ೧೧ ಗಂಟೆ ೧೫ ನಿಮಿಷಕ್ಕೆ ಜಲ ಅನುಷ್ಠಾನ ಮುಕ್ತಾಯಗೊಳ್ಳಲಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರ್ಲಾಪುರ ಗ್ರಾಮದ ಶಿವಯೋಗಿ ಅವಧೂತ ರಾಮನಾಥ ಸ್ವಾಮಿಗಳು ಅಧ್ಯಕ್ಷತೆ ವಹಿಸುವವರು. ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ಗುರು ಅಭಿನವ ಕೊಟ್ಟೂರೇಶ್ವರ ಮಹಾಸ್ವಾಮಿಗಳು, ಪೂಜ್ಯಶ್ರೀ ಪ್ರಭುಸ್ವಾಮಿಗಳು ಹಿರೇಮಠ, ಅನ್ವಾರಿಯ ಗಣೇಶ ಮುತ್ಯಾ ಅವದೂತರು, ಮಂಡ್ಯ ಜಿಲ್ಲೆಯ ಮದ್ದೂರಿನ ಎಂ.ಪಿ. ಹರೀಶಕುಮಾರ, ಹುಬ್ಬಳ್ಳಿಯ ಹರೀಶ ಮುತ್ಯಾ, ಅಳಂದ ತಾಲೂಕಿನ ಮೌನೇಶ ಮುತ್ಯಾ, ಮುದ್ದೇಬಿಹಾಳ ತಾಲೂಕಿನ ಸುಶಾಂತ ಮಹಾರಾಜರು ಸಾನಿಧ್ಯ ವಹಿಸುವರು.
ಮುಖ್ಯ ಅತಿಥಿಗಳಾಗಿ ರೋಣ ಶಾಸಕ ಜಿ.ಎಸ್. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಕೆ. ಪಾಟೀಲ, ಗದಗ-ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ, ಕೊಚಲಾಪೂರಿನ ಶಿವಶರಣೆ ಮಾತಾ ಲಕ್ಷ್ಮಮ್ಮ ತಾಯಿ, ಗೆಜ್ಜೆಸಿದ್ದೇಶ್ವರ ಗ್ರಾಮದ ಶಿವಶರಣೆ ಮಾತಾ ಲಕ್ಕಮ್ಮತಾಯಿ ಹಾಗೂ ಹರ್ಲಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಉಪಸ್ಥಿತರಿರುವರೆಂದು ಹರ್ಲಾಪುರ ಗ್ರಾಮದ ಭಕ್ತಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.