Sunday, September 8, 2024
Google search engine
Homeಉದ್ಯೋಗಗದಗ : ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯ ವಿಳಂಬ ಸಲ್ಲದು: ಜಿಲ್ಲಾಧಿಕಾರಿ ಗೋವಿಂದ್ ರೆಡ್ಡಿ

ಗದಗ : ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯ ವಿಳಂಬ ಸಲ್ಲದು: ಜಿಲ್ಲಾಧಿಕಾರಿ ಗೋವಿಂದ್ ರೆಡ್ಡಿ

ಗದಗ ಜು.25 : ಜಿಲ್ಲೆಯಲ್ಲಿ ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಕೆಸ್ವಾನ್ ಹಾಲ್ ನಲ್ಲಿ ಗುರುವಾರ ಜನನ ಮತ್ತು ಮರಣ ನೊಂದಣಿ ಪದ್ಧತಿ ಕುರಿತು ಜರುಗಿದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಜನನ ಮತ್ತು ಮರಣ ನೊಂದಣಿ ಪ್ರಕ್ರಿಯಲ್ಲಿ ಸರಿಯಾಗಿ ಮಾಹಿತಿದಾರರ ಹೆಸರು ಮತ್ತು ಸಹಿಯನ್ನು ಸಂಗ್ರಹಿಸಿತಕ್ಕದ್ದು ಮತ್ತು ಅರ್ಜಿದಾರರ ಶುಲ್ಕವನ್ನು ನಿಯಮಿತವಾಗಿ ಸರಕಾರಕ್ಕೆ ವಿಳಂಬ ಮಾಡದೇ ಜಮೆ ಮಾಡಬೇಕು.

ಕಾನೂನು ವರದಿಗಳಲ್ಲಿ ನೋಂದಣಿ ಸಂಖ್ಯೆ ಮತ್ತು ನೋಂದಣಿ ದಿನಾಂಕ ನಮೂದುಗೊಳ್ಳುವಂತೆ ಕ್ರಮವಹಿಸಬೇಕು, ನೋಂದಣಿ ಪ್ರಮಾಣ ಪತ್ರದಲ್ಲಿ ನೋಂದಣಾಧಿಕಾರಿಗಳ ರುಜು ಖಡ್ಢಾಯವಾಗಿರಬೇಕು ಹಾಗೂ ತಾಲೂಕ ಮಟ್ಟದ ಜನನ ಮತ್ತು ಮರಣ ಸಮನ್ವಯ ಸಮಿತಿ ಸಭೆಗಳು ಕಡ್ಢಾಯವಾಗಿ ಜರುಗಿಬೇಕು ಎಂದು ಸೂಚಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ. ಕಂಬಾಳಿಮಠ ಮಾತನಾಡಿ, ನೊಂದಣಿ ಪ್ರಮಾಣ ಪತ್ರದಲ್ಲಿ ಡ್ಯೂಟಿ ಡಾಕ್ಟರ್ ರುಜುಗಳು ಆಗದಂತೆ ಎಚ್ಚರವಹಿಸಬೇಕು. ಪ್ರಾಧಿಕಾರದ ಅನುಮತಿಯಿಲ್ಲದೆ ನೋಂದಣಿ ಪ್ರಕ್ರಿಯೆಲ್ಲಿ ವಿಳಂಬವಾಗಬಾರದು. ಸರ್ಕಾರಕ್ಕೆ ಹಣ ಜಮೆ ಮಾಡಿದ ಚಲನ್ ಪ್ರತಿಗಳನ್ನು ಈ ಜನ್ಮ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಬೇಕು ಮತ್ತು 2019 ರಿಂದ 2022ನೇ ಸಾಲಿನ ಕಾನೂನು ಭಾಗಗಳು ಸಂರಕ್ಷಣಾಧಿಕಾರಿಗಳಿಗೆ ಹಸ್ತಾಂತರಿಸಬೇಕು ಎಂದು ಮಾಹಿತಿ‌ ನೀಡಿದರು.

ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆ ವಿಭಾಗದ ಮಾಹಿತಿಯನ್ನು ಸಭೆಗೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್. ಎಸ್. ನೀಲಗುಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ವಾರ್ತಾಧಿಕಾರಿ ವಸಂತ ಮಡ್ಲೂರ, ಎಲ್ಲಾ ತಾಲೂಕಿನ ತಹಶಿಲ್ದಾರು, ಪುರಸಭೆಯ ಮುಖ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಅಂತಾರಾಷ್ಟ್ರೀಯ ಕುಸ್ತಿ : ಲಕ್ಕುಂಡಿಯ ಗ್ರಾಂ, ಪಂಚಾಯತ ಸದಸ್ಯ ರಮೇಶ ಚಾಂಪಿಯನ್ ಗದಗ : ಹೆಸರು ಕಾಳು ಖರೀದಿ ಕೇಂದ್ರ ಉದ್ಘಾಟನೆ ಲಕ್ಕುಂಡಿ : ಪೈಲ್ವಾನರ ಪಟ್ಟು, ಬಯಲು ಜಂಗೀ ಕುಸ್ತಿ ಖದರ್  ಗದಗ : ಭೂಮರಡ್ಡಿ ವೃತ್ತದಲ್ಲಿ ಅಪಘಾತ : ಪೋಲೀಸ್ ಪೇದೆ ಸ್ಥಳದಲ್ಲೇ ಸಾವು !  ಗದಗ : ಅನಾಮಧೇಯ ಮಹಿಳೆ ಸಾವು : ವಾರಸುದಾರರ ಪತ್ತೆಗೆ ಮನವಿ ಗದಗ : ಸುಭದ್ರ ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದದ್ದು :ಎಸ್ ವಿ ಸಂಕನೂರು ಗದಗ : ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ ಗದಗ : ಸ್ವಯಂ ಉದ್ಯೋಗ ಹೊಂದಲು ಜಿಮ್ ಸ್ಥಾಪನೆಗಾಗಿ ಸಹಾಯಧನಕ್ಕೆ ಅರ್ಜಿ ಆಹ್ವಾನ ಗದಗ : ವಿವಿಧ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ ಗದಗ : ಲೋಕಾಯುಕ್ತ ಜನ ಸಂಪರ್ಕ ಸಭೆ ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ